ಶಿಮ್ಲಾ ಹೆದ್ದಾರಿಯಲ್ಲಿ ಭೂಕುಸಿತ : ಕೂದಲೆಳೆ ಅಂತರದಲ್ಲಿ ಜನ ಪಾರು – ವಿಡಿಯೋ ವೈರಲ್!

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 5 ಬಂದ್ ಆಗಿದೆ. ನೋಡನೋಡುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿದಿದ್ದು ಕೂದಲೆಳೆ ಅಂಗತರದಲ್ಲಿ ಜನ ಪಾರಾಗಿರುವ ದೃಶ್ಯ ಸೆರೆಯಾಗಿದೆ.

ಹಿಮಾಚಲ ಪ್ರದೇಶದ ಟ್ರಾಫಿಕ್, ಪ್ರವಾಸಿ ಮತ್ತು ರೈಲ್ವೇ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಸ್ತೆಯನ್ನು ಹಾದು ಭೂಕುಸಿಯುವ ಭಯಾನಕ ದೃಶ್ಯ ಸೆರೆಹಿಡಿಯಲಾಗಿದೆ. ಭೂಕುಸಿತ ಸಂಭವಿಸಿದ ಅಂಚಿನಲ್ಲಿಯೇ ಕೆಲವು ವಾಹನಗಳು ನಿಂತಿದ್ದೂ ಜನ ಚಲ್ಲಾಪಿಲ್ಲಿಯಾಗಿ ಓಡುವುದನ್ನು ಕಾಣಬಹುದು. ಇದರಿಂದಾಗಿ ಎನ್ಎಚ್ -05 ರಸ್ತೆಯನ್ನು ನಿರ್ಬಂಧಿಸಲಾಗಿದೆ.

ರಾಂಪುರ ಸಮೀಪದ ಜಿಯೋರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿ ನಷ್ಟದ ವರದಿಯಾಗಿಲ್ಲ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ.

ಜಿಲ್ಲಾಡಳಿತವು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ರಾಂಪುರ್ ಮತ್ತು ಪೊಲೀಸ್ ತಂಡಕ್ಕೆ ಪರಿಸ್ಥಿತಿಯನ್ನು ನಿರ್ಣಯಿಸಲು ಸೂಚಿಸಿದೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಈ ಭೂಕುಸಿತ ಸಂಭವಿಸಿದೆ ಎನ್ನಲಾಗುತ್ತಿದೆ.

ಈ ಹಿಂದೆ ಆಗಸ್ಟ್ 28 ರಂದು, ಚಂಡಿಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ 3 ನಡುವೆ ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿತ್ತು. ಕಳೆದ ತಿಂಗಳು, ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದಿಂದ 13 ಜನರು ಸಾವನ್ನಪ್ಪಿದ್ದು, ಹಲವಾರು ವಾಹನಗಳನ್ನು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದವು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights