ಒಂದು ಡೋಸ್ ಕೂಡ ಲಸಿಕೆ ಪಡೆಯದ ಸರ್ಕಾರಿ ನೌಕರರಿಗೆ ಕಡ್ಡಾಯ ರಜೆ: ಪಂಜಾಬ್ ಸಿಎಂ
ಒಂದೇ ಒಂದು ಡೋಸ್ ಕೂಡ ಕೊರೊನಾ ಲಸಿಕೆ ಪಡೆಯದ ಪಂಜಾಬ್‌ನ ಸರ್ಕಾರಿ ಉದ್ಯೋಗಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.
.
ಒಂದೇ ಒಂದು ಡೋಸ್ ಲಸಿಕೆ ಪಡೆಯದ ಸರ್ಕಾರಿ ಉದ್ಯೋಗಿಗಳನ್ನು ಸೆ.15ರಿಂದ ರಜೆ ಮೇಲೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ ಕಾರಣಕ್ಕೆ ಕೊರೊನಾ ಲಸಿಕೆ ಪಡೆಯದ ಸಿಬ್ಬಂದಿಗೆ ಮಾತ್ರ ವಿನಾಯಿತಿ ನೀಡಲಾಗುವುದು. ಇದನ್ನು ಹೊರತುಪಡಿಸಿ ಕೊರೊನಾ ಲಸಿಕೆ ಪಡೆಯದ ಸಿಬ್ಬಂದಿಗೆ ವಿನಾಯಿತಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಡೆದ ಉನ್ನತ ಮಟ್ಟದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ದತ್ತಾಂಶಗಳನ್ನು ಪರಿಶೀಲಿಸಿದಾಗ ಕೋವಿಡ್-19 ಲಸಿಕೆಯ ಕಾರ್ಯಕ್ಷಮತೆ ಋಜುವಾತಾಗಿದೆ. ಹೀಗಾಗಿ, ಸರ್ಕಾರಿ ಉದ್ಯೋಗಿಗಳಿಗೆ ಲಸಿಕೆ ಕಡ್ಡಾಯ ಎಂದು ಹೇಳಿದ್ದಾರೆ.

