ಜಾರ್ಖಂಡ್: ಮನೆಯಲ್ಲೇ ಕಾಂಗ್ರೆಸ್ ನಾಯಕನ ಹತ್ಯೆ
ಜಾರ್ಖಂಡ್ ಕಾಂಗ್ರೆಸ್‌ನ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಮಲೇಶ್ ನಾರಾಯಣ ಶರ್ಮಾ (60) ಎಂಬುವವರನ್ನು ಅವರ ಮನೆಯಲ್ಲಿಯೇ ಹತ್ಯೆ ಮಾಡಿರುವ ಘಟನೆ ರಾಮಘಡದಲ್ಲಿ ನಡೆದಿದೆ.
ಕಿಟಕಿ ಮೂಲಕ ಮನೆಯ ಒಳಗೆ ಪ್ರವೇಶಿಸಿರುವ ಅಪರಿಚಿತ ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಶರ್ಮಾ ಅವರನ್ನು ಕೊಲೆ ಮಾಡಿದ್ದಾರೆ. ಅಲ್ಲದೆ, ಶರ್ಮಾ ಅವರ ಪತ್ನಿ ಚಂಚಲಾ ಶರ್ಮಾ ಅವರಿಗೂ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
55 ವರ್ಷದ ಚಂಚಲಾ ಅವರನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್)ಗೆ ದಾಖಲಿಸಲಾಗಿದೆ.
ಎಲ್ಲ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರೊಂದಿಗೆ ಪ್ರಕರಣದ ಕುರಿತು ಚರ್ಚಿಸಿ, ಸಿಐಡಿ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ʼಕ್ರೂರ ಹತ್ಯೆಯನ್ನು ಖಂಡಿಸುತ್ತೇನೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ತಕ್ಕ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸುತ್ತೇನೆʼ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ: ರಾಜ್ಯದಲ್ಲಿ 413 ಪ್ರಕರಣಗಳು ದಾಖಲು; ಕೋಲಾರದಲ್ಲೇ ಅಧಿಕ!

