ಯುವತಿಗೆ ಕಿರುಕುಳ ಆರೋಪ: ಯುವಕನ ಹತ್ಯೆ; ಮರ್ಯಾದಾಗೇಡು ಹತ್ಯೆಯ ಶಂಕೆ

ಆಘಾತಕಾರಿ ಘಟನೆಯೊಂದರಲ್ಲಿ, ಯುವತಿಯೊಬ್ಬಳನ್ನು ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊಬ್ಬನನ್ನು ಯುವತಿಯ ಕುಟುಂಬಸ್ಥರು ಹೊಡೆದು ಸಾಯಿಸಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಖಾನಾಪುರ ಮಂಡಲದ ಸುರ್ಜಾಪುರ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಅಮಾನುಷ ಹಲ್ಲೆಯಿಂದ ಮೃತಪಟ್ಟ ಯುವಕನನ್ನು ಆರ್ ಅನಿಲ್ ಎಂದು ಹೇಳಲಾಗಿದ್ದು, ಆತ ಹಿಂದುಳಿದ ವರ್ಗದ ಸಮುದಾಯದೊಳಗಿನ ಇನ್ನೊಂದು ಉಪ-ಜಾತಿಗೆ ಸೇರಿದವನಾಗಿದ್ದು, ಇದನ್ನು ಮರ್ಯಾದಾಗೇಡು ಹತ್ಯಾ ಪ್ರಕರಣವಾಗಿರಬಹುದು ಎಂದೂ ಕೂಡ ಅಭಿಪ್ರಾಯ-ಅನುಮಾನಗಳು ವ್ಯಕ್ತವಾಗಿವೆ.

ಮೂಲಗಳ ಪ್ರಕಾರ, ಗೊಲ್ಲ ಸಮುದಾಯಕ್ಕೆ ಸೇರಿದ ಅನಿಲ್, ಕಳೆದ ಒಂದು ತಿಂಗಳಿನಿಂದ ಪ್ರೀತಿಯ ಹೆಸರಿನಲ್ಲಿ ಕಾಪು ಸಮುದಾಯಕ್ಕೆ ಸೇರಿದ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಯುವತಿಯ ಕುಟುಂಬದ ಸದಸ್ಯರು ಖಾನಾಪುರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರೂ, ಯುವಕ ತಮ್ಮ ಮಗಳಿಗೆ ತೊಂದರೆ ನೀಡುತ್ತಲೇ ಇದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ದಲಿತ ಯುವಕನ ಲಾಕಪ್ ಡೆತ್‌; ಐವರು ಪೊಲೀಸರು ಅಮಾನತು; ಹಲವರ ವಿರುದ್ದ FIR ದಾಖಲು

ಬುಧವಾರ ತಡರಾತ್ರಿ, ಯುವತಿಯ ಕುಟುಂಬದ ಸದಸ್ಯರು ಅನಿಲ್ ಅವರನ್ನು ತಮ್ಮ ಮನೆಯ ಬಳಿ ಗಮನಿಸಿದ್ದಾರೆ. ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆಯ ಬಗ್ಗೆ ತಿಳಿದ ಅನಿಲ್ ಸಂಬಂಧಿಕರು ಸ್ಥಳಕ್ಕೆ ಧಾವಿಸಿ ಆತನನ್ನು ಖಾನಾಪುರ ಪಿಎಚ್‌ಸಿಗೆ ಕರೆದೊಯ್ದಿದ್ದಾರೆ. ಆತನ ಸ್ಥಿತಿ ಹದಗೆಟ್ಟಿದ್ದರಿಂದ, ಅನಿಲ್ ಅವರನ್ನು ನಿರ್ಮಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಅತ ಗುರುವಾರ ಸಾವನ್ನಪ್ಪಿದ್ದಾನೆ.

ಅನಿಲ್ ಬೇರೆ ಉಪಜಾತಿಗೆ ಸೇರಿದವನಾಗಿದ್ದರಿಂದ ಆತನನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ, ಆತನ ಕುಟುಂಬದ ಸದಸ್ಯರು ಆತನ ಶವವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಡಿಎಸ್ಪಿ ಉಪೇಂದರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಯುವಕನ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರಿಗೆ ನ್ಯಾಯದ ಭರವಸೆ ನೀಡಿದ್ದಾರೆ.

ಅನಿಲ್ ತಾಯಿ ಆರ್ ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ: ದಲಿತ ಯುವಕನನ್ನು ಹಸುವಿನೊಂದಿಗೆ ಕಟ್ಟಿ, ಹಲ್ಲೆ ನಡೆಸಿ ಜಾತಿ ದೌರ್ಜನ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights