95% ಜನರಿಗೆ ಬಿಜೆಪಿ ಅಗತ್ಯವಿಲ್ಲ: ಅಖಿಲೇಶ್ ಯಾದವ್ 

ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ ಅವರು 95% ರಷ್ಟು ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ಆ 95% ಜನರಿಗೆ ಬಿಜೆಪಿಯೂ ಅಗತ್ಯವಿಲ್ಲ ಎಂಬುದು ಸತ್ಯ” ಎಂದು ಹೇಳಿದ್ದಾರೆ.

ತಲಾ ಆದಾಯವನ್ನು ಪರಿಗಣಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿಲ್ಲ. ಶೇಕಡಾ 95 ಜನರಿಗೆ ಅವುಗಳ ಅಗತ್ಯವಿಲ್ಲ ಎಂದು ತಿವಾರಿ ಗುರುವಾರ ಹೇಳಿದ್ದರು.

“ಉತ್ತರ ಪ್ರದೇಶದ ಬಿಜೆಪಿ ಸಚಿವರು ಪೆಟ್ರೋಲ್ ಬೆಲೆ ಏರಿಕೆಯು ಸಾಮಾನ್ಯ ಜನರಿಗೆ ತೊಂದರೆ ನೀಡುವುದಿಲ್ಲ. ಏಕೆಂದರೆ ಶೇ.95 ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸತ್ಯವೇನೆಂದರೆ ಶೇಕಡಾ 95 ರಷ್ಟು ಜನರಿಗೆ ಬಿಜೆಪಿ ಅಗತ್ಯವಿಲ್ಲ” ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಯುವತಿಗೆ ಕಿರುಕುಳ ಆರೋಪ: ಯುವಕನ ಹತ್ಯೆ; ಮರ್ಯಾದಾಗೇಡು ಹತ್ಯೆಯ ಶಂಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights