ಮುಲ್ಲಪೆರಿಯಾರ್ ಅಣೆಕಟ್ಟಿಗೆ ಅಪಾಯ ಎಂಬ ವದಂತಿ; ಭೀತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ!

ಮುಲ್ಲಪೆರಿಯಾರ್ ಅಣೆಕಟ್ಟಿನ ಕುರಿತು ಆತಂಕ ಸೃಷ್ಟಿಸುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವದಂತಿ ಹಬ್ಬಿಸಿ ಭೀತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ.

“ಮುಲ್ಲಪೆರಿಯಾರ್ ಅಣೆಕಟ್ಟು ಅಪಾಯದಲ್ಲಿದೆ. ಇದರಿಂದಾಗಿ ಲಕ್ಷಾಂತರ ಜನರು ಸಾಯಲಿದ್ದಾರೆ ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿದೆ. ಆದರೆ, ಅಣೆಕಟ್ಟಿಗೆ ಯಾವುದೇ ಆತಂಕವಿಲ್ಲ. ಸುಳ್ಳು ಪ್ರಚಾರದ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಮುಲ್ಲಪೆರಿಯಾರ್ ವಿಷಯದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಅಲ್ಲದೆ, ರಾಜ್ಯಕ್ಕೆ ಹೊಸ ಅಣೆಕಟ್ಟು ಬೇಕು. ಆದರೆ, ನಮ್ಮ ನಿಲುವನ್ನು ಕೇಂದ್ರ ಬೆಂಬಲಿಸುವುದಿಲ್ಲ. ಇದರ ಹೊರತಾಗಿಯೂ, ರಾಜ್ಯವು ಹೊಸ ಅಣೆಕಟ್ಟಿನ ಬೇಡಿಕೆಯೊಂದಿಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

“ತಮಿಳುನಾಡು ಸರ್ಕಾರವು ವಿವಿಧ ವಿಷಯಗಳಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ತಮಿಳುನಾಡಿನೊಂದಿಗೆ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ. ನಾವು ತಮಿಳುನಾಡಿನೊಂದಿಗೆ ಚರ್ಚಿಸುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ, ಸಾಮಾಜಿಕ ಮಾಧ್ಯಮಗಳು ಮುಲ್ಲಾ ಪೆರಿಯಾರ್ ಅಣೆಕಟ್ಟು ‘ಅಸುರಕ್ಷಿತ’ವಾಗಿದೆ ಎಂದು ಪ್ರಚಾರ ಮಾಡುವುದರ ಜೊತೆಗೆ ಹೊಸ ಅಣೆಕಟ್ಟನ್ನು ಬೇಗನೆ ನಿರ್ಮಿಸಬೇಕೆಂದು ಒತ್ತಾಯಿಸಿ ಹಲವು ಪೋಸ್ಟ್‌ಗಳು ಹರಿದಾಡಿವೆ. ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾದ ನಂತರ ಈ ರೀತಿಯ ಪೋಸ್ಟ್‌ಗಳು ವೈರಲ್‌ ಅಗಿದೆ.

ಇದನ್ನೂ ಓದಿ: ಠೇವಣಿ ಕಳೆದುಕೊಳ್ಳುವ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಬೇಕೇ?: ಲಾಲೂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights