ಟಿ20 ವಿಶ್ವಕಪ್: ಭಾರತ ಸೆಮಿ-ಫೈನಲ್‌ ತಲುಪುವ ಅವಕಾಶ ಇನ್ನೂ ಇದೆ; ಡೀಟೇಲ್ಸ್‌

ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡವು ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು, ಮೂರನೇ ಪಂದ್ಯದಲ್ಲಿ ಗೆದ್ದಿದೆ. ಗ್ರೂಪ್ ಎರಡರಲ್ಲಿ ಪಾಕಿಸ್ತಾನವು 4ಕ್ಕೆ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿದೆ. ಈ ಗ್ರೂಪ್‌ನಲ್ಲಿ ಇನ್ನೊಂದು ತಂಡಕ್ಕೆ ಮಾತ್ರ ಸೆಮಿಫೈನಲ್ ತಲುಪುವ ಅವಕಾಶವಿದ್ದು ಅದಕ್ಕಾಗಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್, ಭಾರತ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಭಾರತ ಟಿ20 ವಿಶ್ವಕಪ್ ಸೆಮಿಫೈನಲ್ ತಲುವುದು ಕಷ್ಟವಾಗಿದ್ದರೂ, ಸಾಧ್ಯತೆಗಳಂತೂ ಇವೆ.

ಸದ್ಯದ ಗ್ರೂಪ್ 2 ರ ಪಾಯಿಂಟ್ಸ್ ಪಟ್ಟಿಯಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ 8 ಪಾಯಿಂಟ್ ಪಡೆದು ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ ಮತ್ತು ಸೆಮಿಫೈನಲ್ ತಲುಪಿದೆ. ಆಫ್ಘಾನಿಸ್ತಾನವು 4 ಪಂದ್ಯಗಳಲ್ಲಿ 2 ಅನ್ನು ಗೆದ್ದು 4 ಪಾಯಿಂಟ್ ಮತ್ತು ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ (+1.481) ಎರಡನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ ಕೂಡ 4 ಪಂದ್ಯಗಳಲ್ಲಿ 2 ಅನ್ನು ಗೆದ್ದು 4 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ (ನೆಟ್‌ ರನ್‌ರೇಟ್‌ +0.816). ಭಾರತವು ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಭಾರತದ ನೆಟ್‌ ರನ್‌ ರೇಟ್‌ ಕೂಡ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ಗಿಂತ ಕಡಿಮೆ ಇದೆ (+0.073).

ಭಾರತ ಹೇಗೆ ಸೆಮಿಫೈನಲ್ ತಲುಪಬಹುದು?

ಭಾರತದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 5: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬ್ 8: ನಮೀಬಿಯಾ ಎದುರು ದುಬೈನಲ್ಲಿ

ನ್ಯೂಜಿಲೆಂಡ್‌ನ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 5: ನಮೀಬಿಯಾ ಎದುರು ಶಾರ್ಜಾದಲ್ಲಿ
ನವೆಂಬರ್ 7: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ

ಆಫ್ಘಾನಿಸ್ತಾನದ ಮುಂದಿನ ಪಂದ್ಯ ಈ ರೀತಿ ಇದೆ.

ನವೆಂಬರ್ 7: ನ್ಯೂಜಿಲೆಂಡ್‌ ಎದುರು ಅಬುದಾಬಿಯಲ್ಲಿ

ಭಾರತವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದಲ್ಲಿ 6 ಪಾಯಿಂಟ್‌ಗಳ ಜೊತೆಗೆ ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪಬಹುದು. ಆದರೆ ಅದಕ್ಕೆ ನ್ಯೂಜಿಲೆಂಡ್ ತಂಡವು ನವೆಂಬರ್ 5 ರಂದು ನಮೀಬಿಯಾ ಎದುರು ಸೋಲಬೇಕು ಮತ್ತು ನವೆಂಬರ್ 7 ರಂದು ಅದು ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ಗೆಲ್ಲಬೇಕು. ಅಲ್ಲದೆ ಅದರ ನೆಟ್‌ ರನ್‌ ರೇಟ್ ಭಾರತಕ್ಕಿಂತ ಕಡಿಮೆ ಇರಬೇಕು. ಆಗ ಮಾತ್ರ ಭಾರತ ತಂಡ ಪವಾಡದ ರೀತಿಯಲ್ಲಿ ಸೆಮಿಫೈನಲ್ ತಲುಪಬಹುದಾಗಿದೆ.

ಇನ್ನೊಂದು ಅವಕಾಶವೂ ಇದೆ.

ಒಂದು ವೇಳೆ ನ್ಯೂಜಿಲೆಂಡ್ ತಂಡವು ನಮೀಬಿಯಾ ಎದುರು ಗೆದ್ದರೂ ಆಫ್ಘಾನಿಸ್ತಾನದ ಎದುರು ಸೋಲಬೇಕು. ಆದರೆ ಆಫ್ಘಾನಿಸ್ತಾನದ ನೆಟ್‌ ರನ್‌ರೇಟ್ ಭಾರತಕ್ಕಿಂತ ಕಡಿಮೆ ಇರಬೇಕು. ಆಗ ಮಾತ್ರ ಭಾರತ ಸೆಮಿಫೈನಲ್ ತಲುಪಲು ಸಾcಧ್ಯ. ಆದರೆ ಆಫ್ಘಾನಿಸ್ತಾನದ ನೆಟ್‌ ರನ್‌ರೇಟ್ ಭಾರತಕ್ಕಿಂತ ಹೆಚ್ಚಿರುವುದರಿಂದ ಈ ಸಾಧ್ಯತೆ ಕಡಿಮೆ ಇದೆ. ಆದರೆ ಕ್ರಿಕೆಟ್‌ನಲ್ಲಿ ಏನಾದರೂ ಸಂಭವಿಸಬಹುದು. ಒಟ್ಟಿನಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ..

ಇದನ್ನೂ ಓದಿ: ಟಿ-20 ವಿಶ್ವಕಪ್‌: ಭಾರತಕ್ಕೆ ಮೊದಲ ಗೆಲುವು; 210 ರನ್‌ಗಳೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights