ಗ್ರಾ.ಪಂ ಕುರ್ಚಿ ಕಾಳಗ; ಅಧ್ಯಕ್ಷರ ಅಕ್ರಮಗಳನ್ನು ಬಯಲಿಗೆಳೆದ ಉಪಾಧ್ಯಕ್ಷೆ!

ನೂತನ ಗ್ರಾಮ ಪಂಚಾಯತಿ ಕಚೇರಿಯಿಂದ ಗ್ರಾ.ಪಂ ಉಪಾಧ್ಯಕ್ಷರ ಕುರ್ಚಿಯನ್ನು ಹೊರ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬುರುಜಿನರೊಪ್ಪ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಈ ಕೃತ್ಯದಿಂದ ಸಿಟ್ಟಾಗಿರುವ ಉಪಾಧ್ಯಕ್ಷೆ ತಾಹೀರಾ ಬಾನು ಅವರು ಗ್ರಾ.ಪಂ ಅಧ್ಯಕ್ಷರ ಅಕ್ರಮಗಳನ್ನು ಬಯಲಿಗೆಳೆದಿದ್ದು, ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷರು ಹಲವು ಅಕ್ರಮಗಳನ್ನು ಮಾಡಿದ್ದಾರೆ ಎದು ಆರೋಪಿಸಿರುವ ಉಪಾಧ್ಯಕ್ಷೆ ತಾಹಿರಾ ಬಾನು ಅವರು ಭ್ರಷ್ಟಾಚಾರದ ಹಲವು ದಾಖಲೆಗಳನ್ನು ಇಟ್ಟುಕೊಂಡು ಬುರುಜನರೊಪ್ಪ ಗ್ರಾಪಂ ಕಾರ್ಯಾಲಯದ ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರಾ. ಪಂ ಅಧ್ಯಕ್ಷ ಕುಬೇರಪ್ಪ ಅವರು ಸರ್ಕಾರಿ ಜಾಗದಲ್ಲಿ ಖಾಸಗಿ ಕಚೇರಿ ನಿರ್ಮಾಣ ಮಾಡಿದ್ದಾರೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಆರ್.ಓ ಘಟಕ ಖರೀದಿ‌ ಮಾಡಿದ್ದಾರೆ. ಪೆಟ್ರೋಲ್ ಬಂಕ್, ಲೇಔಟ್‌ಗೆ ಎನ್‌ಓಪಿ ನೀಡಲು ಲಕ್ಷ ಲಕ್ಷ ಹಣ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಧ್ಯಕ್ಷ ಹಾಗೂ ಪಿಡಿಓ ಮಾಡಿರುವ ಅಕ್ರಮಗಳು ಬಯಲಿಗೆ ಬರುತ್ತವೆ ಎಂದು ಹೆದರಿ ನೂತನ ಕೊಠಡಿಯಿಂದ ನನ್ನ ಕುರ್ಚಿ ಹೊರ ಹಾಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವೇತನ ಪರಿಷ್ಕರಣೆಗೆ ಶಿಕ್ಷಕರ ಆಗ್ರಹ; ಬೇಡಿಕೆ ಈಡೇರದಿದ್ದರೆ ತರಗತಿಗಳ ಬಹಿಷ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights