5,000 ಹೆರಿಗೆ ಮಾಡಿಸಿದ್ದ ನರ್ಸ್‌; ತಮ್ಮ ಹೆರಿಗೆಯ ನಂತರ ಅರೋಗ್ಯ ಸಮಸ್ಯೆಗಳಿಂದ ನಿಧನ

ಸುಮಾರು 5,000 ಮಹಿಳೆಯರ ಹೆರಿಗೆಗೆ ಸಹಾಯ ಮಾಡಿದ್ದ ಶುಶ್ರೂಷಕಿಯೊಬ್ಬರು ತಮ್ಮ ಹೆರಿಗೆಯ ನಂತರ ಉಂಟಾದ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ 38 ವರ್ಷದ ನರ್ಸ್ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 5,000 ಮಹಿಳೆಯರಿಗೆ ಹೆರಿಗೆ ಮಾಡಿದ್ದಾರೆ. ಆದರೆ, ತಮ್ಮ ಹೆರಿಯ ನಂತರ ಅವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ನವೆಂಬರ್ 2 ರಂದು ಹಿಂಗೋಲಿ ಸಿವಿಲ್ ಆಸ್ಪತ್ರೆಯಲ್ಲಿ ಜ್ಯೋತಿ ಗಾವ್ಲಿ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ನಂತರ, ಅವರಲ್ಲಿ ದ್ವಿಪಕ್ಷೀಯ ನ್ಯುಮೋನಿಯಾ ಮತ್ತು ಇತರ ತೊಂದರೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ, ಅವರು ನಾಂದೇಡ್‌ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದರು ಎಂದು ಅವರು ತಿಳಿಸಿದ್ದಾರೆ.

“ತಮ್ಮ ಕೆಲಸದ ಭಾಗವಾಗಿ, ಅವರು ಹಿಂಗೋಲಿ ಸಿವಿಲ್ ಆಸ್ಪತ್ರೆಯ ಲೇಬರ್ ರೂಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ತಮ್ಮ ಗರ್ಭಾವಸ್ಥೆಯ ಕೊನೆಯ ದಿನದವರೆಗೂ ಕೆಲಸ ಮಾಡಿದ್ದರು. ನಂತರ, ಅವರು ಹೆರಿಗೆಗೆ ತೆರಳಿದರು. ಅವರು ಹೆರಿಗೆಯ ನಂತರ ಹೆರಿಗೆ ರಜೆಯನ್ನು ಪಡೆದಿದ್ದರು” ಹಿಂಗೋಲಿ ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಗೋಪಾಲ್ ಕದಂ ಹೇಳಿದ್ದಾರೆ.

ಇದನ್ನೂ ಓದಿ: ಯಾದಗಿರಿ: ತಾಯಂದಿರ ಮರಣ ಪ್ರಮಾಣ ಏರಿಕೆ; ಶಿಶು ಮರಣ ಪ್ರಮಾಣ ಇಳಿಕೆ

ಗವ್ಲಿ ಅವರು ಕಳೆದ ಎರಡು ವರ್ಷಗಳಿಂದ ಸಿವಿಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು, ಅವರು ಇತರ ಎರಡು ಆರೋಗ್ಯ ಕೇಂದ್ರಗಳಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ನವೆಂಬರ್ 2 ರಂದು ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಅದೇ ದಿನ, ಅವರಲ್ಲಿ ತೊಡಕುಗಳು ಕಾಣಿಸಿಕೊಂಡ ಕಾರಣ ಅವರನ್ನು ನಾಂದೇಡ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಗಾವ್ಲಿ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿದ್ದರಿಂದ ಅವರಿಗೆ ವೆಂಟಿಲೇಟರ್ ಅಗತ್ಯವಿದ್ದರಿಂದ, ಅವರನ್ನು ನಾಂದೇಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

“ಗಾವ್ಲಿ ಅವರು ಭಾನುವಾರ ನಿಧನರಾದರು. ನಾವು ಸಾಮಾನ್ಯವಾಗಿ ನಮ್ಮ ಸೌಲಭ್ಯದಲ್ಲಿ ಒಂದು ದಿನದಲ್ಲಿ 15 ಹೆರಿಗೆಗಳನ್ನು ನಡೆಸುತ್ತೇವೆ. ಸುಮಾರು ಐದು ವರ್ಷಗಳ ತನ್ನ ಸೇವಾ ಅವಧಿಯಲ್ಲಿ ಅವರು ಸುಮಾರು 5,000 ಹೆರಿಗೆಗಳಲ್ಲಿ ಸಹಾಯ ಮಾಡಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೇಯ ಕೃತ್ಯ: ಬಾಲಕಿಯ ಮೇಲೆ 400 ಮಂದಿ ಕಾಮುಕರಿಂದ ಅತ್ಯಾಚಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights