ಮಂಡ್ಯ; ಕ್ರಿಸ್‌ಮಸ್ ಆಚರಣೆ ವೇಳೆ ಖಾಸಗೀ ಶಾಲೆ ಮೇಲೆ ಹಿಂದೂತ್ವವಾದಿಗಳ ದಾಳಿ; ಕಾರ್ಯಕ್ರಮಕ್ಕೆ ಅಡ್ಡಿ
ಕ್ರಿಸ್‌ಮಸ್ ಹಬ್ಬದ ಭಾಗವಾಗಿ ಖಾಸಗಿ ಶಾಲೆಯಲ್ಲಿ ಕಾರ್ಯಕ್ರಮದ ನಡೆಸಸುತ್ತಿದ್ದ ವೇಳೆ ಹಿಂದೂತ್ವವಾಗಿ ಸಂಘಟನೆಯ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಕ್ರಿಸ್ ಮಸ್ ಆಚರಣೆಗೆ ಅಡ್ಡಿಪಡಿಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಪಾಂಡವಪುರದ ನಿರ್ಮಲಾ ಕಾನ್ವೆಂಟ್ ನಲ್ಲಿ ಕ್ರಿಸ್‌ಮಸ್ ಭಾಗವಾಗಿ ಸಹಿ ಹಂಚಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವೇಳೆ, ಶಾಲೆಗೆ ನುಗ್ಗಿದ ಹಿಂದೂತ್ವವಾದಿಳು ಕಾರ್ಯಕ್ರಮಕ್ಕೆ ಅಡ್ಡಿ ಉಂಟುಮಾಡಿದ್ದಾರೆ.
ಕ್ರಿಸ್ ಮಸ್ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಆಕರ್ಷಿತವಾಗುತ್ತಿದೆ . ಇದರಿಂದ ಮಕ್ಕಳ ನಡುವಳಿಕೆಯಲ್ಲಿ ಬದಲಾವಣೆ ಕಾಣುತ್ತದೆ. ಬಾಲ್ಯದಲ್ಲೇ ಕ್ರೈಸ್ತ ಧರ್ಮಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಮಾಡಿ ಹಬ್ಬ ಆಚರಣೆಗೆ ಅಡ್ಡಿಪಡಿಸಲಾಗಿದೆ.
ನಿರ್ಮಲ ಕಾನ್ವೆಂಟ್ ನಲ್ಲಿ ಕ್ರಿಸ್ ಮಸ್ ಆಚರಣೆ ಧರ್ಮ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾರ್ಯಕರ್ತರು ದಾಂದಲೆ ನಡೆಸಿದ್ದಾರೆ .
ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಲು ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಮಸೂದೆ ಮಂಡಿಸಿದೆ. ಇದೇ ವೇಳೆ, ಕ್ರಿಶ್ಚಿಯನ್ ಚರ್ಚ್, ಸ್ಕೂಲ್‌ಗಳ ಮೇಲಿನ ದಾಳಿ ಹೆಚ್ಚಿವೆ. ಬುಧವಾರ ಚಿಕ್ಕಬಳ್ಳಾಪುರದಲ್ಲಿ ಚರ್ಚ್ ಮೇಲೆ ದಾಳಿ ಮಾಡಿ, ಏಸು ಪ್ರತಿಮೆಗೆ ಹಾನಿಗೊಳಿಸಲಾಗಿದೆ.

