ಪ್ರಧಾನಿ ಮೋದಿಗೆ 12 ಕೋಟಿ ರೂ. ಮೌಲ್ಯದ ಹೊಸ ಕಾರು: ಹೀಗಿವೆ ವಿಶೇಷತೆಗಳು!

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹೈದರಾಬಾದ್ ಹೌಸ್‌ನಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಅವರು ತಮ್ಮ ಹೊಸ ಅತ್ಯಾಧುನಿಕ ಶಸ್ತ್ರಸಜ್ಜಿತ ಕಾರು ಮರ್ಸಿಡೆಸ್-ಮೆಬ್ಯಾಚ್ ಎಸ್-650ನಲ್ಲಿ ಆಗಿಮಿಸಿದ್ದರು. ಇದು ಇತ್ತೀಚೆಗೆ ಖರೀದಿಸಿರುವ ಮತ್ತೊಂದು ಹೊಸ ಕಾರು. ಇದರ ಮೌಲ್ಯ ಸುಮಾರು 12 ಕೋಟಿ ರೂಪಾಯಿ.

ಈ ಹಿಂದೆ, ಮೋದಿ ಅವರು ರೇಂಜ್‌ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ ಕಾರುಗಳನ್ನು ಬಳಸಿದ್ದರು. ಇದೀಗ ಅವರು ಬಳಸುವ ಕಾರು ಮತ್ತಷ್ಟು ಮೇಲ್ದರ್ಜೆಗೇರಿದೆ. ಈ ಮರ್ಸಿಡೆಸ್-ಮೆಬ್ಯಾಚ್ ಎಸ್-650 ಅತ್ಯಾಧುನಿಕ ವಾಹನದಲ್ಲಿ ವಿನೂತನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಾರುಗಳಲ್ಲೇ ಗರಿಷ್ಠ ಸುರಕ್ಷತೆ ಎನಿಸಿದ ವಿಆರ್10 ಮಟ್ಟದ ಸುರಕ್ಷತೆಯನ್ನು ಇದು ಹೊಂದಿರುತ್ತದೆ.

ಮರ್ಸಿಡೆಸ್-ಮೆಬ್ಯಾಚ್ ಎಸ್ 600 ಗಾರ್ಡ್ ಕಾರನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಬೆಲೆ 10.5 ಕೋಟಿ ರೂಪಾಯಿ ಹಾಗೂ ಎಸ್ 650 ಬೆಲೆ 12 ಕೋಟಿ ರೂಪಾಯಿಗಿಂತ ಅಧಿಕ ಇರಲಿದೆ ಎಂದು ಅಂದಾಜಿಸಲಾಗಿದೆ.

ದೇಶದ ಮುಖ್ಯಸ್ಥರನ್ನು ರಕ್ಷಿಸುವ ಹೊಣೆ ಹೊಂದಿರುವ ಎಸ್‌ಪಿಜಿ ಸಾಮಾನ್ಯವಾಗಿ ಹೊಸ ಕಾರಿಗೆ ಮನವಿ ಸಲ್ಲಿಸುತ್ತದೆ. ಭದ್ರತಾ ಅಗತ್ಯತೆಗಳನ್ನು ಗುರುತಿಸಿ, ತಾವು ರಕ್ಷಿಸಬೇಕಾದ ವ್ಯಕ್ತಿಗೆ ಹೊಸ ವಾಹನ ಅಗತ್ಯವಿದೆಯೇ ಎಂದು ನಿರ್ಧರಿಸುತ್ತದೆ.

ಎಸ್ 650 ವಾಹನವು 60 ಲೀಟರ್ ಟ್ವಿನ್ ಟರ್ಬೊ ವಿ 12 ಎಂಜಿನ್‌ಗಳನ್ನು ಹೊಂದಿದ್ದು, ಇದು 516 ಬಿಎಚ್‌ಪಿ ಮತ್ತು 900 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದು. ಗರಿಷ್ಠ ವೇಗದ ಮಿತಿ ಗಂಟೆಗೆ 160 ಕಿಲೋಮೀಟರ್‌ಗಳು. ಎಸ್ 650 ಬಾಡಿ ಮತ್ತು ಇದರ ಕಿಟಕಿಗಳು ಉಕ್ಕಿನ ಗುಂಡುಗಳನ್ನು ಕೂಡಾ ತಡೆದುಕೊಳ್ಳಬಲ್ಲವು. ಇದು 2010 ಸ್ಫೋಟ ನಿರೋಧಕ ವಾಹನ (ಇಆರ್‌ವಿ) ರೇಟಿಂಗ್ ಹೊಂದಿದ್ದು, 2 ಮೀಟರ್ ದೂರದಿಂದ ಮಾಡುವ 15 ಕೆಜಿ ಟಿಎನ್‌ಟಿ ಸ್ಫೋಟದಿಂದ ವಾಹನದಲ್ಲಿರುವುದನ್ನು ರಕ್ಷಿಸಬಹುದಾಗಿದೆ. ಗಾಜಿನ ಒಳಾಂಗಣಕ್ಕೆ ಪಾಲಿಕಾರ್ಬೊನೇಟ್ ಲೇಪನವಿದ್ದು, ನೇರ ಸ್ಫೋಟದಿಂದ ಈ ವಾಹನದ ಪ್ರಯಾಣಿಕರನ್ನು ರಕ್ಷಿಸಲು ಭಾರಿ ಶಸ್ತ್ರಾಸ್ತ್ರಗಳನ್ನು ಕೆಳಭಾಗದಲ್ಲಿ ಹೊಂದಿರುತ್ತದೆ. ಅನಿಲ ದಾಳಿಯ ಸಂದರ್ಭದಲ್ಲಿ ಇದರ ಕ್ಯಾಬಿನ್ ಪ್ರತ್ಯೇಕ ಗಾಳಿ ಪೂರೈಕೆಯನ್ನು ಪಡೆಯುತ್ತದೆ.

ವಾಹನಕ್ಕೆ ವಿಶೇಷ ವಸ್ತುವಿನ ಲೇಪನವಿದ್ದು, ಢಿಕ್ಕಿ ಹೊಡೆದ ಸಂದರ್ಭದಲ್ಲಿ ರಂಧ್ರ ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ. ಬೋಯಿಂಗ್ ಕಂಪನಿ ತನ್ನ ಎಎಚ್-64 ಅಪಾಚೆ ಟ್ಯಾಂಕ್ ದಾಳಿಯ ಹೆಲಿಕಾಪ್ಟರ್‌ಗಳಿಗೆ ಬಳಸುವ ವಸ್ತುಗಳನ್ನೇ ಇದಕ್ಕೆ ಬಳಸಲಾಗುತ್ತದೆ.

ಇದನ್ನೂ ಓದಿ: ಜಿಎಸ್‌ಟಿ ಏರಿಕೆ: ಜನವರಿಯಿಂದ ಬಟ್ಟೆ, ಪಾದರಕ್ಷೆ ಸೇರಿದಂತೆ ವಿವಿಧ ವಸ್ತುಗಳು ದುಬಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights