Fact check: ಉತ್ತರ ಪ್ರದೇಶ ರಸ್ತೆ ಕುರಿತು ಸುಳ್ಳು ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದ BJP ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಟ್ವಿಟರ್ ನಲ್ಲಿ “ಉತ್ತರ ಪ್ರದೇಶದ ಆಗ್ರಾ-ಲಖನೌ ಹೆದ್ದಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ” “ಆಗ್ರಾ-ಲಖನೌ” ಹೆದ್ದಾರಿಯನ್ನು ಯೋಗಿ ಆದಿತ್ಯನಾಥ್ ನಿರ್ಮಿಸಿದ್ದಾರೆ ಎನ್ನುವ ಪೋಸ್ಟ್ ಹಾಕುವ ಮೂಲಕ ಭಾರಿ ವೈರಲ್ ಮಾಡುತ್ತಿದ್ದಾರೆ.
ಆದರೆ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಪೋಸ್ಟ್‌ನ ವಾಸ್ತವವನ್ನು ಹಲವರು ಪ್ರಶ್ನೆ ಮಾಡುತ್ತಿದ್ದು ತೇಜಸ್ವಿ ಸೂರ್ಯ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ’ಸೂರ್ಯನ ಕೆಳಗೂ ಕತ್ತಲೆಯಿದೆ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ತೇಜಸ್ವಿ ಸೂರ್ಯ ಅವರ ಪೋಸ್ಟ್ ನಲ್ಲಿ ಇರುವುದೇನು ಎಂದು ಪರಿಶೀಲಿಸೋಣ.
Lucknow to Kannauj in Yogi Ji’s #ExpressswayPradesh#UPYogiHaiYogi pic.twitter.com/dZ6bcg8fVp
— Tejasvi Surya (@Tejasvi_Surya) February 17, 2022
ಫ್ಯಾಕ್ಟ್‌ಚೆಕ್:
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಂಸದ ತೇಜಸ್ವಿ ಸೂರ್ಯ, ಆಗ್ರಾ-ಲಖನೌ ಹೆದ್ದಾರಿಯಲ್ಲಿ ಪ್ರಯಾಣಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಅದನ್ನು “ಲಕ್ನೋ ಟು ಕನ್ನೌಜ್ ಇನ್ ಯೋಗಿ ಜಿ ಎಕ್ಸ್‌ಪ್ರೆಸ್‌ವೇ” ಎಂದು ಬರೆದುಕೊಂಡಿದ್ದರು. ಜೊತೆಗೆ #UPYogiHaiYogi ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ, “ದೀಪದ ಕೆಳಗೆ ಕತ್ತಲೆ ಎಂಬುದಾಗಿ ಒಬ್ಬರು ಕೇಳಿದ್ದರು. ಬಿಜೆಪಿ ನಾಯಕರ ಅಜ್ಞಾನವನ್ನು ನೋಡಿದರೆ ‘ಸೂರ್ಯ’ ಎಂದರೆ ಸೂರ್ಯನ ಕೆಳಗೂ ಕತ್ತಲೆ ಎಂದು ಹೇಳಬಹುದು. ಅವರು ಹೊಗಳುತ್ತಿರುವ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇ ನಿರ್ಮಿಸಿದ್ದು ನಾವು, ಯೋಗಿ ಆದಿತ್ಯನಾಥ್ ಅಲ್ಲ. ನೋಡಿ ಒಮ್ಮೆ ಇವರು ಅದನ್ನು ಮತ್ತೆ ಉದ್ಘಾಟನೆ ಮಾಡಿಯಾರು” ಎಂದು ವ್ಯಂಗ್ಯವಾಡಿದ್ದಾರೆ.
चिराग तले अंधेरा तो सुना था…भाजपाइयों के अज्ञान को देखकर तो ये कहा जा सकता है कि ‘सूर्या’ मतलब सूर्य तले अंधेरा है।जिस आगरा-लखनऊ एक्सप्रेसवे की तारीफ़ के पुल ये बाँध रहे हैं, इन्हें मालूम होना चाहिए वो अनुपयोगी जी ने नहीं हमने बनवाया था।
देखना कहीं ये भी तो उद्घाटन नहीं कर गये। pic.twitter.com/kyeEL9KniN
— Akhilesh Yadav (@yadavakhilesh) February 17, 2022
ಬೆಂಗಳೂರಿನ ಕಿತ್ತು ಹೋದ ರಸ್ತೆಗಳು…
ದೆಹಲಿ ಹೈಕಮಾಂಡ್ ಗೆ ಜೈಕಾರ ಕೂಗುವುದರಲ್ಲೇ ಸಮಯ ಕಳೆಯುವ ಜನಪ್ರತಿನಿಧಿಗಳು.. https://t.co/LnyzCFhq9p— ಅರುಣ್ ಜಾವಗಲ್ | Arun Javgal (@ajavgal) February 17, 2022
302 ಕಿಮೀ ಉದ್ದದ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಅನ್ನು 2016 ರಲ್ಲಿ ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉದ್ಘಾಟಿಸಿದರು. ಇದನ್ನು ಫೆಬ್ರವರಿ 2017 ರಲ್ಲಿ ಸಾರ್ವಜನಿಕ ಬಳಕೆಗೆ ಬಿಡಲಾಯಿತು.
2017 ರಲ್ಲಿ ಅಧಿಕಾರ ಕಳೆದುಕೊಂಡ ಅಖಿಲೇಶ್ ಯಾದವ್, ಆಡಳಿತ ಪಕ್ಷ ಬಿಜೆಪಿಯು ತನ್ನ ಯೋಜನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ತನ್ನ ಸರ್ಕಾರ ಮಾಡಿದ ಕೆಲಸಗಳ ಕ್ರೆಡಿಟ್ ಅನ್ನು ಬಿಜೆಪಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಆಗಾಗ್ಗೆ ಆರೋಪಿಸಿದ್ದಾರೆ.
ಇಷ್ಟಾದರೂ ಟ್ವೀಟ್ ಡಿಲೀಟ್ ಮಾಡದ ಸಂಸದ ತೇಜಸ್ವಿ ಸೂರ್ಯ, ತಮ್ಮ ಸುಳ್ಳುಗಳಿಗೆ ಸಮರ್ಥನೆ ನೀಡುತ್ತಿದ್ದಾರೆ.
Lucknow to Kannauj in Yogi Ji’s #ExpressswayPradesh#UPYogiHaiYogi pic.twitter.com/dZ6bcg8fVp
— Tejasvi Surya (@Tejasvi_Surya) February 17, 2022
ತೇಜಸ್ವಿ ಸೂರ್ಯ ಟ್ವೀಟ್‌ಗೆ ರಾಜ್ಯದ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದು, ಮೊದಲು ಬೆಂಗಳೂರಿನ ರಸ್ತೆಗಳ ಬಗ್ಗೆ ಮಾತನಾಡುವಂತೆ ತಿಳಿಸಿದ್ದಾರೆ.
ಬೆಂಗಳೂರಿನ ಕಿತ್ತು ಹೋದ ರಸ್ತೆಗಳು…
ದೆಹಲಿ ಹೈಕಮಾಂಡ್ ಗೆ ಜೈಕಾರ ಕೂಗುವುದರಲ್ಲೇ ಸಮಯ ಕಳೆಯುವ ಜನಪ್ರತಿನಿಧಿಗಳು.. https://t.co/LnyzCFhq9p— ಅರುಣ್ ಜಾವಗಲ್ | Arun Javgal (@ajavgal) February 17, 2022
ಸಿಲ್ಕ್ ಬೋರ್ಡ್ ರಸ್ತೆಯ ಸಮಸ್ಯೆಗಳ ಬಗ್ಗೆ ಯಾವಾಗ ಮಾತನಾಡುತ್ತಿರಿ.. ಅದನ್ನು ಯಾವಾಗ ಸರಿ ಪಡಿಸುತ್ತಿರಿ. ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ಜನ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಮಾತಾಡಿ ಇಲ್ಲ ಅಲ್ಲಿಯೇ ಹೋಗಿಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂತೋರಿಗೆ ಓಟ್ ಹಾಕಿದಿವಲ್ಲ, ನಾವು ತಲೆ ಚಚ್ಚ್ಕೋಬೇಕು.
ರಾಜ್ಯದ ಸಮಸ್ಯೆಗಳ ಬಗ್ಗೆ, ಬೇಕಿರುವ ಅನುದಾನಗಳ ಬಗ್ಗೆ, ಇಲ್ಲಿ ನೆಡಿತಿರೋ ಪ್ರಮುಖ ವಿಷ್ಯಗಳನ್ನ ಅಲ್ಲಿ ಹೋಗಿ ಮಾತಾಡಕ್ಕೆ ಇವ್ರುನ್ನ ಕಳ್ಸಿದ್ರೆ.
ನೋಡಿ ಹಿಂಗೆ !!!!
ಬೇಕಿದ್ರೆ ಇನ್ನೂ ಬೆಂಕಿಗೆ ತುಪ್ಪ ಸುರಿತಾರೆ.
ಹಿಂಗೆ ಮಾಡಿದ್ರೆ ಮುಂದೆ ಅಲ್ಲಿ ಅವಕಾಶ ಸಿಗುತ್ತೆ ಅಂತ ಇರ್ಬೇಕು— Karthik K (@khkarthik) February 17, 2022
ಒಟ್ಟಾರೆಯಾಗಿ ಹೇಳುವುದಾರೆ ಅಖಿಲೇಶ್ ಯಾದವ್ ಅವರ ಆಡಳಿತಾವದಧಿಯಲ್ಲಿ ನಿರ್ಮಿಸಿದ ರಸ್ತೆಯನ್ನು ಯೋಗಿ ಆದಿತ್ಯನಾಥ್ ಅಧಿಕಾರವಧಿಯಲ್ಲಿ ನಿರ್ಮಿಸಲಾಗಿದೆ ಎಂದು ತೇಜಸ್ವಿ ಸೂರ್ಯ ತಮ್ಮ ಟ್ವೀಟ್ ನಲ್ಲಿ ಸುಳ್ಳು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Fact check: ಪ್ರೀತಿಸಿದ ಹುಡುಗಿಯನ್ನೆ ಕತ್ತು ಸೀಳಿ ಕೊಂದ ‘ಭಗ್ನ ಪ್ರೇಮಿ’ – ಘಟನೆಗೆ ಕೋಮು ಬಣ್ಣ ಹಚ್ಚಿ ಹಂಚಿಕೆ

