Fact check: ಯುಪಿ ಚುನಾವಣೆಯಲ್ಲಿBJP 86 ಕ್ಷೇತ್ರದಲ್ಲಿ2 ಸಾವಿರಕ್ಕೂ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದೆ ಎಂಬುದು ನಿಜವೆ?

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ಸೋಲು ಗೆಲುವಿನ ನಡುವಿನ ಮತಗಳ ಅಂತರವನ್ನು ಲೆಕ್ಕಹಾಕುವಲ್ಲಿ ತೊಡಗಿದ್ದಾರೆ. ಬಿಜೆಪಿ 86 ಸ್ಥಾನಗಳಲ್ಲಿ 2000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. 1000, 500 ಮತ್ತು 200ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿರುವ ಸ್ಥಾನಗಳ ಸಂಖ್ಯೆಯನ್ನು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಇತ್ತೀಚಿನ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಭಾರತದ ಚುನಾವಣಾ ಆಯೋಗದ ಪ್ರಕಾರ, ಕೇವಲ 29 ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿನ ಅಂತರವು 2000 ಮತಗಳಿಗಿಂತ ಕಡಿಮೆಯಿದೆ.

ಈ 29 ಸ್ಥಾನಗಳಲ್ಲಿ, ಗೆಲುವಿನ ಅಂತರ 11 ಸ್ಥಾನಗಳಲ್ಲಿ 500 ಕ್ಕಿಂತ ಕಡಿಮೆ, ನಾಲ್ಕು ಸ್ಥಾನಗಳಲ್ಲಿ 500 – 1000 ನಡುವೆ ಮತ್ತು 14 ಸ್ಥಾನಗಳಲ್ಲಿ 1000-2000 ಮತಗಳ ನಡುವೆ ಇದೆ. ಅಲ್ಲದೆ, ಗೆಲುವಿನ ಅಂತರ 200 ಮತಗಳಿಗಿಂತ ಕಡಿಮೆ ಇರುವ ಒಂದು ಸ್ಥಾನವೂ ಇಲ್ಲ. ಈ 29 ಕ್ಷೇತ್ರಗಳ ಪಟ್ಟಿ ಮತ್ತು ಗೆಲುವಿನ ಅಂತರವನ್ನು ಕೆಳಗಿನ ಚಾರ್ಟ್‌ನಲ್ಲಿ ನೋಡಬಹುದು.

ಯುಪಿಯಲ್ಲಿ  200 ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವ ಒಂದೇ ಒಂದು ಕ್ಷೇತ್ರವೂ ಇಲ್ಲ, ಇದು ವೈರಲ್ ಪೋಸ್ಟ್‌ಗಳಲ್ಲಿ ಮಾಡಿದ ಹೇಳಿಕೆಯನ್ನು ಅಲ್ಲೆಗೆಳೆಯುವಂತಿದೆ. ಇದಲ್ಲದೆ,  24 ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿನ ಅಂತರವು 2000-5000 ಮತಗಳ ನಡುವೆ ಇದೆ. ಗೆಲುವಿನ ಅಂತರವು 2000-5000 ಮತಗಳ ನಡುವೆ ಇರುವ ಸ್ಥಾನಗಳನ್ನು ನಾವು ಪರಿಗಣಿಸಿದರೂ ಸಹ, ಗೆಲುವಿನ ಅಂತರವು 5000 ಮತಗಳಿಗಿಂತ ಕಡಿಮೆ ಇರುವ ಒಟ್ಟು ಸ್ಥಾನಗಳ ಸಂಖ್ಯೆಯು 53 ಸ್ಥಾನಗಳಲ್ಲಿ ಮಾತ್ರ ಇರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದಲ್ಲಿ ಕೇವಲ 29 ಸ್ಥಾನಗಳನ್ನು 2000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ. ಹಾಗಾಗಿ ಪೋಸ್ಟ್‌ನ ಪ್ರತಿಪಾದಿಸಿ 86 ಎನ್ನುವುದು ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check: ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತರೂ ರಾಹುಲ್‌ ಗಾಂಧಿ ಬ್ಯಾಡ್ಮಿಟನ್ ಆಡುತ್ತಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights