ಫ್ಯಾಕ್ಟ್‌ಚೆಕ್: ದೈತ್ಯಾಕಾರದ ಮಾನವನ ಅಸ್ಥಿಪಂಜರ ಪತ್ತೆ! ವಾಸ್ತವೇನು?

ಇತ್ತೀಚೆಗೆ ಉತ್ಖನನದ ವೇಳೆ ಸಿಕ್ಕಿದ ದೈತ್ಯ ಮಾನವ ಅಸ್ಥಿಪಂಜರದ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಷ್ಟು ದೈತ್ಯಾಕಾರದ ಮನುಷ್ಯನ ಅಸ್ಥಿಪಂಜರಗಳು ನಿಜವಾಗಿಯೂ ಪತ್ತೆಯಾಗಿವಿಯೇ ಎಂದು  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, ಅದೇ ಫೋಟೋ ‘ಡಿಸೈನ್ ಕ್ರೌಡ್’ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದು ಕಂಡುಬಂದಿದೆ. ‘ಡಿಸೈನ್ ಕ್ರೌಡ್’ ಈ ಚಿತ್ರವನ್ನು Mzpresto ಅವರ ಕಲಾಕೃತಿ ಎಂದು ವಿವರಿಸಿದೆ.

Giant Skeletons Seem Too Real To Be A Hoax
ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಅಂತರ್ಜಾಲದಲ್ಲಿ ಹುಡುಕಿದಾಗ, ‘ಡಿಸೈನ್ ಕ್ರೌಡ್’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ Mzpresto ನ ಪೋರ್ಟ್‌ಫೋಲಿಯೊದಲ್ಲಿ ಅದೇ ಫೋಟೋವನ್ನು ಕಂಡುಕೊಂಡಿದ್ದೇವೆ. Mzprezto ಯುಕೆ ಮೂಲದ ಫೋಟೋಶಾಪ್ ಡಿಸೈನರ್. Mzpresto ಈ ಚಿತ್ರವನ್ನು PS ಬೋನಸ್ ಸ್ಪರ್ಧೆಗಾಗಿ ಫೋಟೋಶಾಪ್ ನಲ್ಲಿ ರಚಿಸಲಾದ ಡಿಜಿಟಲ್‌ ಫೋಟೋಗಳು ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದಾರೆ.

ಪುರಾತತ್ವ ವೈಪರೀತ್ಯಗಳು 12′ ಸ್ಪರ್ಧೆ”. ಫೋಟೋದ ವಿವರಣೆಯು ಹೀಗೆ ಹೇಳುತ್ತದೆ, “ಎಂಝ್‌ಪ್ರೆಸ್ಟೋ, ಬ್ರಿಟಿಷ್ ವಿನ್ಯಾಸಕಾರ, ಈ ಫೋಟೋಶಾಪ್ ಅನ್ನು 23 ಅಕ್ಟೋಬರ್, 2008 ರಂದು ಡಿಸೈನ್‌ಕ್ರೌಡ್ (ಸಮುದಾಯ ಸ್ಪರ್ಧೆಗಳು) ಗಾಗಿ ಆಸ್ಟ್ರೇಲಿಯಾದಲ್ಲಿ ಮಾರಟದ ಕಾರಣಕ್ಕೆ  ರಚಿಸಿದ್ದಾರೆ. ಫೋಟೋಶಾಪ್ ಅನ್ನು ‘PS ಬೋನಸ್ ಸ್ಪರ್ಧೆ: ಪುರಾತತ್ವ ವೈಪರೀತ್ಯಗಳು 12’ ಯೋಜನೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಲಾಕೃತಿಗೆ 5 ರಲ್ಲಿ 3 ಸ್ಟಾರ್‌ಗಳನ್ನು ನೀಡಲಾಯಿತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವು ಡಿಜಿಟಲ್ ಕಲಾಕೃತಿಯಾಗಿದೆ, ದೈತ್ಯ ಮಾನವ ಅಸ್ಥಿಪಂಜರದ ನೈಜ ಚಿತ್ರವಲ್ಲ ಎಂದು ಖಚಿತವಾಗಿ ಹೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಡಿಜಿಟಲ್ ಆಗಿ ರಚಿಸಲಾದ ಚಿತ್ರವಾಗಿದೆ. Mzprezto, ಯುಕೆ ಮೂಲದ ಫೋಟೋಶಾಪ್ ಡಿಸೈನರ್ ಈ ಕಲಾಕೃತಿಯನ್ನು ‘PS ಬೋನಸ್ ಸ್ಪರ್ಧೆ ಪುರಾತತ್ವ ವೈಪರೀತ್ಯಗಳು 12’ ಯೋಜನೆಗಾಗಿ ರಚಿಸಿದ್ದಾರೆ. ಅದು ನಿಜವಾದ ಫೋಟೋ ಅಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಗುವಿಗೆ ಕಚ್ಚಿದ 30 ಸೆಕೆಂಡುಗಳಲ್ಲಿ ಸಾವನಪ್ಪಿದ ಹಾವು! ನಡೆದಿದ್ದೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights