ಫ್ಯಾಕ್ಟ್‌ಚೆಕ್ : ‘ಪ್ರವಾಹದಲ್ಲಿ ಕೋಚ್ಚಿ ಹೋದ ಜೀಪ್’ ಇದು ಭಾರತದಲ್ಲ

ಜೀಪ್‌ವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ತೆಲಂಗಾಣದ ಜಗ್ತಿಯಾಲ್‌ನಲ್ಲಿ ನಡೆದ ಘಟನೆ ಎಂದು ಹಂಚಿಕೊಳ್ಳಲಾಗಿದೆ. ಕೊಚ್ಚಿಹೋದ ಜೀಪಿನಲ್ಲಿದ್ದ ಪತ್ರಕರ್ತರೊಬ್ಬರು  ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ಇದು ನಿಜವೇ ಎಂದು ಪರಿಶೀಲಿಸೋಣ.

ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜುಲೈ 12 ರಂದು, ತೆಲುಗು ಸುದ್ದಿ ವಾಹಿನಿ ಎನ್‌ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರ ಜಮೀರ್ ಅವರು ಪ್ರಯಾಣಿಸುತ್ತಿದ್ದ ಜೀಪು  ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಶುಕ್ರವಾರ, ಜುಲೈ 15 ರಂದು ಅವರ ದೇಹ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗಿದೆ.  ವಿಡಿಯೊ ಪೋಸ್ಟ್‌ಅನ್ನು ಹಲವರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ, ” ದ್ವೀಪದ ಮಧ್ಯದಲ್ಲಿ ಸಿಲುಕಿರುವ 9 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಕವರ್ ಮಾಡಲು ಹೋಗುತ್ತಿದ್ದ ವರದಿಗಾರರು, ರಾಯಕಲ್ ಮಂಡಲದ ಗೋದಾವರಿ ನದಿ ಪ್ರವಾಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, 2020 ರಲ್ಲಿ YouTube ನಲ್ಲಿ ಪೋಸ್ಟ್ ಮಾಡಿದ ಅದೇ ವೀಡಿಯೊ ಲಭ್ಯವಾಗಿದೆ. ಆದರೂ, ವೈರಲ್ ವೀಡಿಯೊ ಕನಿಷ್ಠ ಎರಡು ವರ್ಷಗಳಷ್ಟು ಹಳೆಯದು ಮತ್ತು ಪಾಕಿಸ್ತಾನದ್ದು ಎಂದು ನಾವು ಕಂಡುಕೊಂಡಿದ್ದೇವೆ. ಇದಲ್ಲದೆ, ವರದಿಗಾರ ಪ್ರಯಾಣಿಸುತ್ತಿದ್ದ ವಾಹನವು ಕೆಂಪು ಬಣ್ಣದ ಸ್ವಿಫ್ಟ್ ಡಿಜೈರ್ ಆಗಿದ್ದು, ವೈರಲ್ ವೀಡಿಯೊದಲ್ಲಿರುವ ವಾಹನವು ಜೀಪ್ ಆಗಿದೆ.

“ಪ್ರವಾಹದಿಂದಾಗಿ ಪೊಟೋಹರ್ ಜೀಪ್ ಅಪಘಾತ (sic)” ಎಂದು ಯೂಟ್ಯೂಬ್ ವೀಡಿಯೊದ ಶೀರ್ಷಿಕೆ ಹೇಳಿದೆ. ಯೂಟ್ಯೂಬ್‌ನಲ್ಲಿ ಚಿಕ್ಕದಾಗಿ ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ ಮತ್ತು ವೀಡಿಯೊ ಬಲೂಚಿಸ್ತಾನ್‌ನಿಂದ ಬಂದಿದೆ ಎಂದು ಶೀರ್ಷಿಕೆ ನೀಡಿದೆ.  ಸುಜುಕಿ ಜೀಪ್ ಪೊಟೊಹಾರ್ ಅನ್ನು ನೋಡಿದ್ದೇವೆ ಮತ್ತು ಸುಜುಕಿಯ ಜೀಪ್‌ಗಳ ಈ ಆವೃತ್ತಿಯನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗಿದೆ ಮತ್ತು ಮಾರಾಟ ಮಾಡಲಾಗಿದೆ ಎಂದು ಕಂಡುಬಂದಿದೆ.

ಜೀಪ್‌ನ ಸಂಖ್ಯೆ ಮತ್ತು ಪರವಾನಗಿ ಫಲಕವನ್ನು ಗಮನಿಸಿದಾಗ, ಅದು ಭಾರತದಲ್ಲಿ ಬಳಸುವ ಸಂಖ್ಯೆಯಂತೆ ಕಂಡುಬಂದಿಲ್ಲ ಅದರ  ಸ್ವರೂಪದಲ್ಲಿ ಬದಲಾವಣೆಗಳಾಗಿವೆ.

ಬಲೂಚಿಸ್ತಾನ್‌ನಲ್ಲಿ ಪರವಾನಗಿ ಪ್ಲೇಟ್ ಸಂಖ್ಯೆಗಳನ್ನು ಪರಿಶೀಲಿಸಿದ್ದೇವೆ ಮತ್ತು ವೈರಲ್ ವೀಡಿಯೊ – XX – 1234 ನಲ್ಲಿ ನೋಡಿದಂತೆ ನೋಂದಣಿ ಸಂಖ್ಯೆಗಳು ಒಂದೇ ಸ್ವರೂಪದಲ್ಲಿವೆ ಎಂದು ಕಂಡುಬಂದಿದೆ.

A link to the article can be found here. (Source: Research Gate/Screenshot)
A link to the article can be found here. (Source: Research Gate/Screenshot)

ತೆಲಂಗಾಣದಲ್ಲಿ ನಡೆದದ್ದು ಏನು?

ತೆಲುಗು ಸುದ್ದಿ ವಾಹಿನಿ ಎನ್‌ಟಿವಿಯ ಪತ್ರಕರ್ತ ಜಮೀರ್ ಜುಲೈ 12 ರಂದು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿಯನ್ನು ವರದಿ ಮಾಡಲು ತೆರಳುತ್ತಿದ್ದಾಗ ನಾಪತ್ತೆಯಾಗಿದ್ದರು. ಅವರು ಗೋದಾವರಿ ಪ್ರವಾಹದಲ್ಲಿ ಸಿಲುಕಿರುವ ಒಂಬತ್ತು ಕೃಷಿ ಕಾರ್ಮಿಕರ ಬಗ್ಗೆ ವರದಿ ಮಾಡಲು ರಾಯ್ಕಲ್ ಮಂಡಲದ ಬೋರ್ನಪಲ್ಲಿ ಗ್ರಾಮಕ್ಕೆ ತೆರಳುತ್ತಿದ್ದರು.

ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಿರಿಯ ವರದಿಗಾರ ಸೂರ್ಯ ರೆಡ್ಡಿ ಅವರ ಕಾರನ್ನು ಪ್ರವಾಹದಿಂದ ಹೊರತೆಗೆಯುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ ಜಮೀರ್ ಕೆಂಪು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ದೃಢಪಟ್ಟಿದ್ದು, ವೈರಲ್ ವಿಡಿಯೊದಲ್ಲಿ  ಜೀಪ್ ಕೊಚ್ಚಿ ಹೋಗುತ್ತಿರುವುದನ್ನು ತೋರಿಸುತ್ತದೆ.

ತೆಲುಗು ಪತ್ರಕರ್ತ ಜಮೀರ್ ಪ್ರಾಣಿಸುತ್ತಿದ್ದ ಕಾರು ಪ್ರವಾಹಕ್ಕೆ ಸಿಲುಕಿದ ಘಟನೆಯನ್ನು, ಎರಡು ವರ್ಷದ ಹಿಂದೆ ಪಾಕಿಸ್ತಾನದಲ್ಲಿ ನಡೆದಿರುವ ಜೀಪ್‌ ಅಪಘಾತದ ವಿಡಿಯೋದೊಂದಿಗೆ ಹಂಚಿಕೊಂಡು ತೆಲಂಗಾಣದಲ್ಲಿ ನಡೆದ ಘಟನೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ ಆಗಿರುವುದು ಪಾಕಿಸ್ತಾನದ ಹಳೆಯ ವೀಡಿಯೊ, ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೇಶಕ್ಕಾಗಿ ಮೋದಿ ಪ್ರದಕ್ಷಿಣೆ ಎಂದು ಅರ್ಚಕ ಸಂತೋಷ್ ತ್ರಿವೇದಿಯ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights