ಫ್ಯಾಕ್ಟ್ಚೆಕ್ : GST ತೆರಿಗೆ ಬಗ್ಗೆ ಸುಳ್ಳು ಹೇಳಿದ ಪೋಸ್ಟ್ ಕಾರ್ಡ್ ಕನ್ನಡ
18 ಜುಲೈ 2022 ರಂದು 47ನೇ GST ಕೌನ್ಸಿಲ್ ದಿನಬಳಕೆಯ ವಸ್ತುಗಳಿಗೆ ಜಿಎಸ್ಟಿ ವಿಧಿಸಲು ನಿರ್ಧಿರಿಸಿದೆ. ಅಲ್ಲದೆ ಈಗಾಗಲೇ ಕೆಲವು ವಸ್ತುಗಳಿಗೆ ಇದ್ದ ಜಿಎಸ್ಟಿ ದರವನ್ನು ಏರಿಕೆ ಮಾಡಿವೆ. ಇದಕ್ಕೆ ವಿರೋಧ ಬಂದ ಸಂದರ್ಭದಲ್ಲಿ GST ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ತೆರಿಗೆ ವಿಧಿಸಿತ್ತು ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಾಲು, ಮೊಸರು, ಪನ್ನೀರು ಮತ್ತು ಇನ್ನಿತರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದೆ ಎಂದು ಕೇಂದ್ರ ಸರ್ಕಾರವನ್ನು ಜನಸಾಮಾನ್ಯರು ತರಾಟೆಗೆ ತೆಗೆದುಕೊಂದ ಬೆನ್ನಲೆ, ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸುವ ಪೋಸ್ಟ್ಅನ್ನು ಪೋಸ್ಟ್ಕಾರ್ಡ್ ಕನ್ನಡ ಪ್ರಕಟಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಅವರ ಪೋಟೋವನ್ನು ಒಳಗೊಂಡ ದರಗಳನ್ನು ಹೋಲಿಸುವ ಮೂಲಕ, ಸರಕುಗಳ ಮೇಲಿನ GST ದರಗಳು GST ಪೂರ್ವದ ತೆರಿಗೆ ದರಗಳಿಗೆ ಹೋಲಿಸಿದರೆ ಕಡಿಮೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ವ್ಯಾಪಕವಾಗಿ ಹಂಚಿಕೊಂಡಿದೆ. ಈ ವೈರಲ್ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಅಬಕಾರಿ ಸುಂಕ, ಸೇವಾ ತೆರಿಗೆ, ರಾಜ್ಯ ವ್ಯಾಟ್ ಮತ್ತು ಇತರ ಪರೋಕ್ಷ ತೆರಿಗೆಗಳನ್ನು ಬದಲಿಸುವ ಮೂಲಕ ಸರಕು ಮತ್ತು ಸೇವಾ ತೆರಿಗೆ (GST) ಅನ್ನು ಪರಿಚಯಿಸಲಾಯಿತು. ಇತರ ಪರೋಕ್ಷ ತೆರಿಗೆಗಳ ಹೆಚ್ಚುವರಿ ಹೊರೆಯನ್ನು ತಡೆಯುವುದು ಜಿಎಸ್ಟಿಯ ಮುಖ್ಯ ಗುರಿಯಾಗಿದೆ ಎಂದು ಹೇಳಲಾಗಿದೆ. ಹಿಂದಿನ ತೆರಿಗೆ ಪದ್ಧತಿಯಲ್ಲಿ, ತೆರಿಗೆ ರಚನೆಯು ಸೆಸ್, ಹೆಚ್ಚುವರಿ ಸುಂಕಗಳು ಇತ್ಯಾದಿ ಸೇರಿದಂತೆ ತೆರಿಗೆ ದರಗಳ ಬಹುಸಂಖ್ಯೆಯೊಂದಿಗೆ ಸಂಕೀರ್ಣವಾಗಿತ್ತು.

ಇದಲ್ಲದೆ, ಹಿಂದಿನ ತೆರಿಗೆ ಪದ್ಧತಿಯಲ್ಲಿ, ಕೇಂದ್ರ ಮತ್ತು ರಾಜ್ಯಗಳು ಪ್ರತ್ಯೇಕವಾಗಿ ತೆರಿಗೆ ವಿಧಿಸುತ್ತಿದ್ದವು. ಮತ್ತು ರಾಜ್ಯ ತೆರಿಗೆಗಳು ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿವೆ. ಉದಾಹರಣೆಗೆ, ನಿರ್ದಿಷ್ಟ ಸರಕುಗಳ ಮೇಲೆ, ರಾಜ್ಯ ವ್ಯಾಟ್ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರುತ್ತದೆ. ಆದರೂ, ಎಲ್ಲಾ ರಾಜ್ಯಗಳ ದರವು ಏಕರೂಪವಾಗಿರುವಂತೆ ಕೆಲವು ವಸ್ತುಗಳ ಪೂರ್ವ GST ತೆರಿಗೆ ದರಗಳನ್ನು ಪೋಸ್ಟ್ ಮಾಡಲಾಗಿರುವ ಪಟ್ಟಿಯಲ್ಲಿ ನಮೂದಿಸಲಾಗಿದೆ. ಇದು ಜಿಎಸ್ಟಿ ದರಗಳನ್ನು ಉದ್ದೇಶಿತ ಏಕರೂಪದ ಪೂರ್ವ-ಜಿಎಸ್ಟಿ ತೆರಿಗೆಗಳೊಂದಿಗೆ ಹೋಲಿಸುವುದು ಸರಿಯಾದ ಕ್ರಮ ಅಲ್ಲ.
ಜಿಎಸ್ಟಿ ನಂತರ ತೆರಿಗೆ ಕಡಿಮೆಯಾಗಿದೆಯೇ?
GST ಯನ್ನು ಪರಿಚಯಿಸಿದ ನಂತರ ಬಹುಸಂಖ್ಯೆಯ ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಗಳು ನಿಜವಾಗಿಯೂ ಕಡಿಮೆಯಾಗಿದೆ ಎಂಬುದು ನಿಜವಾದರೂ, GST ಪೂರ್ವದ ತೆರಿಗೆ ಪದ್ಧತಿಗೆ ಹೋಲಿಸಿದರೆ ಹೊಸ GST ಆಡಳಿತದ ಅಡಿಯಲ್ಲಿ ತೆರಿಗೆಯು ಹೆಚ್ಚು ಇರುವ ಕೆಲವು ಸರಕುಗಳು ಮತ್ತು ಸೇವೆಗಳಿವೆ. ಉದಾಹರಣೆಗೆ, GST ಪೂರ್ವದ ಆಡಳಿತದಲ್ಲಿ ಶೇ 15% ಇದ್ದ ಸೇವಾ ತೆರಿಗೆಯು ಇಂದು 18% ರಷ್ಟು ತೆರಿಗೆಯಾಗಿವೆ. ಅಂದರೆ ಈಗಿನ ದರಗಳು ಹೆಚ್ಚಾಗಿವೆ.
ಅಂತೆಯೇ, ಪರಿಷ್ಕೃತ ದರಗಳ ಪ್ರಕಾರ, ಮೊಸರು, ಅಕ್ಕಿ, ಗೋಧಿ, ಹಿಟ್ಟು ಮುಂತಾದ ಅಗತ್ಯ ವಸ್ತುಗಳ ಮೇಲೆ 5% ಜಿಎಸ್ಟಿ (ಅವುಗಳನ್ನು ಮೊದಲೇ ಪ್ಯಾಕ್ ಮಾಡಿದ್ದರೆ) ವಿಧಿಸಲಾಗಿದೆ. ಆದರೆ, ಜಿಎಸ್ಟಿ-ಪೂರ್ವ ಆಡಳಿತದಲ್ಲಿ ಈ ವಸ್ತುಗಳಿಗೆ ಕಡಿಮೆ ತೆರಿಗೆಯನ್ನು ವಿಧಿಸಲಾಗಿತ್ತು . ಗೋಧಿ, ಅಕ್ಕಿ, ಹಿಟ್ಟಿನ ಮೇಲೆ ಕ್ರಮವಾಗಿ 2.5%, 2.75% ಮತ್ತು 3.5% ಜಿಎಸ್ಟಿ ಪೂರ್ವದ ಆಡಳಿತದಲ್ಲಿ ತೆರಿಗೆ ವಿಧಿಸಲಾಗಿತ್ತು.

ಆದ್ದರಿಂದ, ವೈರಲ್ ಪೋಸ್ಟ್ನಲ್ಲಿ ಪಟ್ಟಿ ಮಾಡಲಾದ ಪೂರ್ವ ಮತ್ತು ನಂತರದ GST ತೆರಿಗೆ ದರಗಳ ಹೋಲಿಕೆಯು GST ಪೂರ್ವದ ಆಡಳಿತಕ್ಕೆ ಹೋಲಿಸಿದರೆ GST ಅಡಿಯಲ್ಲಿ ಕಡಿಮೆ ತೆರಿಗೆಯನ್ನು ಹೊಂದಿರುವ ಸರಕುಗಳು ಮತ್ತು ಸೇವೆಗಳ ಆಯ್ದ ಹೋಲಿಕೆಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ GST ಪೂರ್ವದ ಆಡಳಿತಕ್ಕೆ ಹೋಲಿಸಿದರೆ GST ಅಡಿಯಲ್ಲಿ ಕಡಿಮೆ ತೆರಿಗೆ ವಿಧಿಸುವ ಸರಕುಗಳು ಮತ್ತು ಸೇವೆಗಳು ಎಂದು ಕೆಲವು ವಸ್ತುಗಳ ಪಟ್ಟಿಯನ್ನು ಮಾತ್ರ ಮಾಡಿ ಹೋಲಿಕೆ ಮಾಡಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ:ಫ್ಯಾಕ್ಟ್ಲಿ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಎಂಬುದು ನಿಜವೆ?

