ಫ್ಯಾಕ್ಟ್ಚೆಕ್ : ದೆಹಲಿಯ ರಸ್ತೆಯೊಂದರಲ್ಲಿ ಮಹಿಳೆಯೊಬ್ಬರು ಚರಂಡಿಗೆ ಬಿದ್ದ ದೃಶ್ಯಗಳನ್ನು ಉತ್ತರ ಪ್ರದೇಶದ್ದು ಎಂದು ತಪ್ಪಾಗಿ ಹಂಚಿಕೆ
ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿಯೊಬ್ಬರು ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಕೆಲಸಕ್ಕೆ ಹೋಗುವರಿಂದ ಹಿಡಿದು ಮನೆಯಲ್ಲೆ ಇದ್ದು ಕೆಲಸ ಮಾಡುವ ಪ್ರತಿಯೊಬ್ಬರಿಗೂ ಈ ಮಹಾಮಳೆ ಹೊಡೆತ ನೀಡಿದೆ. ಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳೆ ನದಿಯಂತಾಗಿದೆ. ಕೆಲವರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಮಹಿಳೆಯೊಬ್ಬರು ಗುಂಡಿಗೆ ಬಿದ್ದ ದೃಶ್ಯಗಳು ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗಿವೆ.

ತೆರೆದ ಚರಂಡಿಗೆ ಬಿದ್ದ ಮಹಿಳೆಯನ್ನು ಪುರುಷರ ಗುಂಪೊಂದು ಮೇಲೆತ್ತುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೋಸ್ಟ್ ನಲ್ಲಿ (ಆರ್ಕೈವ್ ಮಾಡಲಾಗಿದೆ) ಹೇಳಲಾಗಿದೆ. ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವೀಡಿಯೊದ ಕೀಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ವೀಡಿಯೊದ ವಿಸ್ತೃತ ಆವೃತ್ತಿಯನ್ನು 23 ಆಗಸ್ಟ್ 2022 ರಂದು ಸ್ಥಳೀಯ ಸುದ್ದಿ ಚಾನೆಲ್ನಿಂದ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೊ ಲಭ್ಯವಾಗಿದೆ. ಈ ಘಟನೆಯು ದೆಹಲಿಯ ಬೇಗಂಪುರದಲ್ಲಿ ನಡೆದಿದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಘಟನೆ ನಡೆದಿರುವ ಸುತ್ತ ಮುತ್ತಲಿನ ಪ್ರದೇಶದಲ್ಲಿ ‘ಫ್ಯಾಷನ್ ವರ್ಲ್ಡ್’, ಹಾಸ್ಪಿಟಲ್’ ಮತ್ತು ‘ಸಾಹಿಲ್ ಫಿಟ್ನೆಸ್ ಕ್ಲಬ್’ ಹೆಸರಿನ ಅಂಗಡಿಗಳ ಆಮಫಲಕಗಳನ್ನು ಕಾಣಬಹುದಾಗಿದೆ.
ಇದನ್ನೆ ಕ್ಲೂಆಗಿ ತೆಗೆದುಕೊಂಡು, ನಾವು ಬೇಗಂಪುರ ಪ್ರದೇಶದಲ್ಲಿ ‘ಫ್ಯಾಶನ್ ವರ್ಲ್ಡ್’ ಮತ್ತು ‘ಸಾಹಿಲ್ ಫಿಟ್ನೆಸ್ ಕ್ಲಬ್’ ಎನ್ನುವ ಹೆಸರಿನ ಅಂಗಡಿಗಳು ಇದೆಯೇ ಎಂದು ಸರ್ಚ್ ಮಾಡಿದಾಗ ಅಂತಹ ಯಾವುದೇ ಪುರಾವೆಗಳು ಪತ್ತೆಯಾಗಲಿಲ್ಲ. ನಂತರ ನಾವು ಬೇಗಂಪುರದಲ್ಲಿರುವ ವಿವಿಧ ಸೂಪರ್ ಸ್ಪೆಷಾಲಿಟಿ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹುಡುಕಿದೆವು. ನಾವು “ಹಿರಾಸ್ ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್” ವೊಂದು ಕಂಡುಬಂದಿದ್ದು, ಅದರ ಗೂಗಲ್ ಸ್ಟ್ರೀಟ್ ವ್ಯೂ ಇಮೇಜ್ ವೈರಲ್ ವೀಡಿಯೊದಲ್ಲಿ ನೇಮ್ ಬೋರ್ಡ್ನೊಂದಿಗೆ ಹೊಂದಿಕೆಯಾಗುತ್ತದೆ.


ಗೂಗಲ್ ಸ್ಟ್ರೀಟ್ ವ್ಯೂ ಬಳಸಿ, ಮತ್ತಷ್ಟು ಸರ್ಚ್ ನಡೆಸಿದಾಗ, ಈ ಘಟನೆಯು ಮುಖ್ಯ ಬರ್ವಾಲಾ ರಸ್ತೆ, ಬೇಗಂಪುರ ವಿಸ್ತರಣೆ, ದೆಹಲಿ-110086 ಬಳಿ ಸಂಭವಿಸಿದೆ ಎಂದು ಕಂಡುಕೊಂಡಿದ್ದೇವೆ. ಘಟನೆ ನಡೆದ ತೆರೆದ ಚರಂಡಿಯ ಫೋಟೋ ಕೂಡ ಸಿಕ್ಕಿದೆ. ಹೀರಾ ಆಸ್ಪತ್ರೆಯ ಮುಂಭಾಗದಲ್ಲಿ ತೆರೆದ ಚರಂಡಿ ಇದೆ. ದೆಹಲಿ ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ನ ವೆಬ್ಸೈಟ್ನ ಪ್ರಕಾರ, ಬೇಗಂಪುರವು ಹೊಸ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ ಒಂದು ವಾರ್ಡ್ ಆಗಿದೆ.


ಇದಲ್ಲದೆ, ಅದೇ ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಲೋಕೋಪಯೋಗಿ ಇಲಾಖೆಗೆ ಟ್ವಿಟರ್ ಬಳಕೆದಾರರೊಬ್ಬರು ದೂರನ್ನು ನೀಡಿರುವ ಟ್ವೀಟ್ ಲಭ್ಯವಾಗಿದೆ. ಅವರು “ಈ ದೂರು MCD (ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) @MCD_Delhi ಗೆ ಸಂಬಂಧಿಸಿದೆ” ಎಂದು ಉಲ್ಲೇಖಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ, PWD ದೆಹಲಿಯು ಈ ರೀತಿಯ ರಸ್ತೆ ದೂರುಗಳಿಗೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಹೆಸರಾಗಿದೆ ಎಂದು ಹೇಳಿದ್ದಾರೆ.
https://twitter.com/Bnnn303/status/1563570848514027520
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯ ತೆರೆದ ಚರಂಡಿಯಿಂದ ಮಹಿಳೆಯನ್ನು ರಕ್ಷಿಸುತ್ತಿರುವ ವೀಡಿಯೊವನ್ನು ಉತ್ತರ ಪ್ರದೇಶದ ಘಟನೆ ಎಂದು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ಖ್ಯಾತ ಪತ್ರಕರ್ತ ರವೀಶ್ ಕುಮಾರ್ NDTVಗೆ ರಾಜೀನಾಮೆ ನೀಡಿದ್ದಾರೆಯೆ?

