ಫ್ಯಾಕ್ಟ್‌ಚೆಕ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ಎಂದು 2014 ಹಳೆಯ ಫೋಟೋ ಹಂಚಿಕೊಂಡ ಮಾಧ್ಯಮಗಳು!

ಇತ್ತೀಚೆಗೆ ಭಾರತವನ್ನು ಬಹಿರಂಗವಾಗಿ ಹೊಗಳುತ್ತಾ ತನ್ನ ದೇಶದಲ್ಲಿರೋ ಸರ್ಕಾರವನ್ನು ವಿಮರ್ಶೆ ಮಾಡುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​​ ಖಾನ್​​​ ಮೇಲೆ ಗುಂಡಿನ ದಾಳಿ ನಡೆದಿದೆ. ಇಂದು ವಜೀರಾಬಾದ್‌ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ರ್ಯಾಲಿಯಲ್ಲಿ ಭಾಗಿಯಾಗಿದ್ದ ಇಮ್ರಾನ್​​ ಖಾನ್​​ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

NDTV, 24 News DON ನಂತಹ ಮುಖ್ಯವಾಹಿನಿ ಮಾಧ್ಯಮಗಳು ಘಟನೆಯೊಂದಿಗೆ ಹಳೆಯ ಫೋಟೋವನ್ನು ಹಂಚಿಕೊಂಡಿವೆ ಎಂದು ಝುಬೇರ್ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಬಹುತೇಕ ಮಾಧ್ಯಮಗಳು ಇಮ್ರಾನ್‌ ಖಾನ್ ಮೇಲೆ ನಡೆದಿರುವ ಗುಂಡಿನ ದಾಳಿಯ ಸುದ್ದಿಯೊಂದಿಗೆ ಹಳೆಯ ಫೋಟೋವನ್ನು ಹಂಚಿಕೊಂಡಿದೆ ಎಂದು ಆಲ್ಟ್‌ನ್ಯೂಸ್‌ನ  ಫ್ಯಾಕ್ಟ್‌ ಚೆಕ್ಕರ್ ಮೊಹಮ್ಮದ್ ಝುಬೇರ್ ಪೋಸ್ಟ್‌ಅನ್ನು ಟ್ವಿಟ್ ಮಾಡಿದ್ದಾರೆ.

ಯಾಕೆ ಹಳೆಯ ಫೋಟೋವನ್ನು ಬಳಸಿಕೊಳ್ಳುತ್ತೀರಿ ? ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಮುಖ್ಯವಾಹಿನಿ ಮಾಧ್ಯಮಗಳು ಹಂಚಿಕೊಂಡಿರುವುದು ಹಳೆಯ ಫೋಟೋಗಳೇ? ಎಂದು ಪರಿಶೀಲಿಸೋಣ.

ಇನ್ನು, ಪಾಕಿಸ್ತಾನ ಪಂಜಾನ್​ ಪ್ರಾಂತ್ಯದ ಗುಜ್ರಾನ್‌ವಾಲಾ ಎಂಬಲ್ಲಿ ಈ ಘಟನೆ ನಡೆದಿದೆ. ರ್ಯಾಲಿ ವೇಳೆ ತೆರೆದ ವಾಹನದಲ್ಲಿ ಇಮ್ರಾನ್​ ಖಾನ್​ ಸೇರಿದಂತೆ ತನ್ನ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಮ್ರಾನ್​ ಖಾನ್​ ಕಾಲಿಗೆ ಗಾಯಗಳಾಗಿವೆ. ಅಲ್ಲದೇ ಇಮ್ರಾನ್​ ಜತೆಗಿದ್ದ ಇನ್ನೂ ಹಲವರು ಗಾಯಗೊಂಡಿದ್ದಾರೆ. ಘಟನೆ ನಂತರ ಇಮ್ರಾನ್ ಖಾನ್ ಅವರನ್ನು ಕಂಟೈನರ್‌ನಿಂದ ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನ ಪಂಜಾನ್​ ಪ್ರಾಂತ್ಯದ ಗುಜ್ರಾನ್‌ವಾಲಾ ಎಂಬಲ್ಲಿ ಇಮ್ರಾನ್ ಖಾನ್ ಮತ್ತು ಆತನ ಬೆಂಬಲಿಗರ ಮೇಲೆ ದಾಳಿ ನಡೆದಿರುವುದು ನಿಜ ಆದರೆ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋಗಳು 2014 ರಲ್ಲಿ ಆಹೋರಾತ್ರಿ ಧರಣಿಯ ವೇಳೆಯದ್ದು ಎಂಬುದು ಸ್ಪಷ್ಟವಾಗಿದೆ. ಈ ಫೋಟೋವನ್ನು ಸ್ವತಃ ಇಮ್ರಾನ್ ಖಾನ್ ತಮ್ಮ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಧಿಕಾರಿಗಳ ಮೇಲೆ ರೇಗುವುದು ನಿಲ್ಲಿಸಿ ಎಂದು ಕೇಜ್ರಿವಾಲ್‌ರವರ ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights