ಫ್ಯಾಕ್ಟ್ಚೆಕ್: ಗಿಡದಲ್ಲಿ ದುಡ್ಡು ಬಿಟ್ಟಿರುವಂತೆ ಫೇಕ್ ವಿಡಿಯೊ ಹಂಚಿಕೆ
ಕುಟುಂಬಗಳಲ್ಲಿ ಯಾರಾದರೊಬ್ಬ ಮನೆಯ ಸದಸ್ಯರು ಮನಸ್ಸಿಗೆ ಬಂದಂಗೆ ಖರ್ಚು ಮಾಡುತಿದ್ದರೆ, ದುಡ್ಡೇನು ಗಿಡದಲ್ಲಿ ಬಿಡತ್ತಾ ಎಂದು ಕೇಳುವುದುಂಟು. ಆದರೆ ಗಿಡದಲ್ಲಿ ದುಡ್ಡು ಬಿಡಲು ಸಾಧ್ಯವೇ? ಸಾಧ್ಯವಿಲ್ಲ. ಆದರೆ ಇಲ್ಲೊಂದು ವಿಡಿಯೊದಲ್ಲಿ ಗಿಡಲ್ಲಿ ದುಡ್ಡು ಬಿಟ್ಟಿದೆ ಎಂದು ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗಿಡದಲ್ಲಿ ದುಡ್ಡು ಬಿಟ್ಟಿದೆ ಎಂದು ‘ದುಡ್ಡು ಬಿಡುವ ಗಿಡ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಗಿಡದ ಬೇರುಗಳಲ್ಲಿ ನಾಣ್ಯಗಳನ್ನು ಕಂಡುಹಿಡಿದ ದೃಶ್ಯಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ ಇಬ್ಬರು ಯುವಕರು ಗಿಡವನ್ನು ಕಿತ್ತು ಬೇರುಗಳ ಒಳಗಿನಿಂದ ನಾಣ್ಯಗಳನ್ನು ಹೊರತೆಗೆಯುವುದನ್ನು ತೋರಿಸುತ್ತದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಗಿಡದಲ್ಲಿ ನಾಣ್ಯಗಳು ಕಂಡುಬರುವ ದೃಶ್ಯಗಳನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಈ ವೀಡಿಯೊಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮೂಲಗಳು ಕಂಡುಬಂದಿಲ್ಲ. ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು ಮೂಲಗಳನ್ನು ಹುಡುಕಿದಾಗ, ತರಕಾರಿಗಳು ಮತ್ತು ಸಸ್ಯಗಳ ಬೇರುಗಳಿಂದ ಹಣವನ್ನು ಹೊರತೆಗೆಯುವ ರೀತಿಯ ದೃಶ್ಯಗಳು 17 ಅಕ್ಟೋಬರ್ 2021 ರಂದು ‘ಅಲ್ ಅರೇಬಿಯಾ’ ಸುದ್ದಿ ವಾಹಿನಿ ಪ್ರಕಟಿಸಿದ ಫೇಸ್ಬುಕ್ ವೀಡಿಯೊದಲ್ಲಿ ಕಂಡುಬಂದಿವೆ. Al Arabiya ಪ್ರಕಟಿಸಿದ ವೀಡಿಯೊದ ಕೆಳಭಾಗದಲ್ಲಿ TikTok ಐಡಿ ‘rana_g707’ ನ ವಾಟರ್ಮಾರ್ಕ್ ಅನ್ನು ಕಾಣಬಹುದು.
ಕೀ ವರ್ಡ್ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ಒಬ್ಬ ವ್ಯಕ್ತಿಯು ಮರದ ಕೊಂಬೆಗಳಿಂದ ನಾಣ್ಯಗಳನ್ನು ಹೊರತೆಗೆಯುವ ಇದೇ ರೀತಿಯ ವೀಡಿಯೊ ‘rana_g707′ ನ Instagram ಹ್ಯಾಂಡಲ್ನಲ್ಲಿ ಕಂಡುಬಂದಿದೆ. ರಾಣಾ ಜಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮತ್ತೊಂದು ವೀಡಿಯೊವನ್ನು ಪ್ರಕಟಿಸಿದ ಅವರು ಸಸ್ಯದ ಬೇರುಗಳಿಂದ ಹಣವನ್ನು ಹೊರತೆಗೆಯುವ ದೃಶ್ಯಗಳನ್ನು ತೋರಿಸಿದ್ದಾರೆ. ವೀಡಿಯೊದ ವಿವರಣೆಯಲ್ಲಿ, ವೀಡಿಯೊಗಳನ್ನು ಮನರಂಜನೆ ಮತ್ತು ಮೋಜಿನ ಉದ್ದೇಶಗಳಿಗಾಗಿ ರಚಿಸಲಾಗಿದೆ ಎಂದು ರಾಣಾ ಜಿ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೊವನ್ನು ಮನೆರಂಜನೆ ಉದ್ದೇಶಗಳಿಗಾಗಿ ಚಿತ್ರೀಕರಿಸಲಾಗಿದೆ ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ‘ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ’ ಎಂದು JNU ನಲ್ಲಿ ಬರೆದದ್ದು ಈ ವಿದ್ಯಾರ್ಥಿಗಳಾ ?

