ಫ್ಯಾಕ್ಟ್‌ಚೆಕ್: ಕ್ರಿಕೆಟ್ ಪಂದ್ಯದ ವೇಳೆ ಅಂಪೈರ್ ಸಹಿತ ಆಟಗಾರರೆಲ್ಲರೂ ನಮಾಜ್ ಮಾಡಿದ್ದು ನಿಜವೇ?

ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ನಮಾಜ್ ಮಾಡುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ದೃಶ್ಯಾವಳಿಗಳು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 14 ಮಾರ್ಚ್ 2021 ರಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಮಾಡಿದ ಟ್ವೀಟ್‌ನಲ್ಲಿ ಇದೇ ರೀತಿಯ ವೀಡಿಯೊ ಕಂಡುಬಂದಿದೆ. ಈ ಟ್ವಿಟರ್ ಬಳಕೆದಾರರು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಜೇನುನೊಣಗಳ ದಾಳಿಯ ದೃಶ್ಯಗಳು ಎಂದು ಹಂಚಿಕೊಂಡಿದ್ದಾರೆ.

https://twitter.com/MittiDaPutla/status/1371137390593638400

ಹೆಚ್ಚಿನ ಮೂಲಗಳನ್ನು ಸರ್ಚ್ ಮಾಡಿದಾಗ, 15 ಮಾರ್ಚ್ 2021 ರಂದು ‘ಇಂಡಿಯಾ ಟಿವಿ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಈ ಘಟನೆಯ ವಿವರಗಳು ಕಂಡುಬಂದಿದ್ದು, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕ ದಿನ ಪಂದ್ಯದ ವೇಳೆ ವೆಸ್ಟ್ ಇಂಡೀಸ್‌ನ ಆಂಟಿಗುವಾದಲ್ಲಿ ಜೇನುನೊಣಗಳು ದಾಳಿ ನಡೆಸಿದ್ದವು ಎಂದು ಇಂಡಿಯಾ ಟಿವಿ ಲೇಖನ ವರದಿ ಮಾಡಿದೆ.

ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಮೂರನೇ ಮತ್ತು ಅಂತಿಮ ODI ಪಂದ್ಯವು ಕ್ರಿಕೆಟ್ ಮೈದಾನದಲ್ಲಿ ವಿರಳವಾಗಿ ಕಂಡುಬರುವ ವಿಚಿತ್ರ ದೃಶ್ಯಗಳಿಂದ ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತು. ವಾಸ್ತವವಾಗಿ, ಮೂರು ಪಂದ್ಯಗಳ ODI ಸರಣಿಯ ಕೊನೆಯ ಪಂದ್ಯವೂ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.

ಇನಿಂಗ್ಸ್‌ನ 38ನೇ ಓವರ್‌ನಲ್ಲಿ ವಿಂಡೀಸ್‌ನ ಆಂಡರ್ಸನ್ ಫಿಲಿಪ್ ಬೌಲಿಂಗ್ ಮಾಡಲು ಬಂದಾಗ ಸಾಮಾನ್ಯ ಕ್ರಿಕೆಟ್ ಪಂದ್ಯ ‘ಬೀಜರಾ’ ಎಂದು ತೋರಿತು. ಮೊದಲ ಎಸೆತದ ನಂತರ, ಜೇನುನೊಣಗಳ ಸಮೂಹವು ಇದ್ದಕ್ಕಿದ್ದಂತೆ ದಾಳಿ ಮಾಡಿದವು. ಇದನ್ನು ತಪ್ಪಿಸಲು ಅಂಪೈರ್ ಸೇರಿದಂತೆ ಎಲ್ಲಾ ಆಟಗಾರರು ಪಂದ್ಯ ನಿಲ್ಲಿಸಿ ಮೈದಾನದಲ್ಲಿ ಮಲಗಿದರು. ಈ ಮೂಲಕ ಸ್ವಲ್ಪ ಹೊತ್ತು ಪಂದ್ಯ ನಿಲ್ಲಿಸಿ ಮತ್ತೆ ಆಟ ಆರಂಭವಾಯಿತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ನಮಾಜ್ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತಿದ್ದಾರೆ.

ಅದೇ ರೀತಿ ವರದಿ ಮಾಡುತ್ತಾ, ಕೆಲವು ಇತರ ಸುದ್ದಿ ವೆಬ್‌ಸೈಟ್‌ಗಳು ಸಹ ಮಾರ್ಚ್ 2021 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪಾಕಿಸ್ತಾನ ಕ್ರಿಕೆಟ್ ಆಟಗಾರ ಮುಹಮ್ಮದ್ ರಿಜ್ವಾನ್ ಭಾರತ ಮತ್ತು ದಕ್ಷಿಣ ಆಫ್ರಿಕಾದೊಂದಿಗಿನ ಪಂದ್ಯಗಳಲ್ಲಿ ಪಾನೀಯಗಳ ವಿರಾಮದ ನಡುವೆ ಮೈದಾನದಲ್ಲಿ ಒಂದೆರಡು ಬಾರಿ ನಮಾಜ್ ಮಾಡಿದರು. ಆದರೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಜೇನುನೊಣಗಳ ದಾಳಿಯಿಂದಾಗಿ ಆಟಗಾರರು ನೆಲದ ಮೇಲೆ ಮಲಗಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜೇನುನೊಣಗಳ ದಾಳಿಯಿಂದಾಗಿ ಕ್ರಿಕೆಟ್ ಆಟಗಾರರು ನೆಲದ ಮೇಲೆ ಮಲಗಿರುವ ಹಳೆಯ ವೀಡಿಯೊವನ್ನು ಅವರು ನಮಾಜ್ ನೀಡುತ್ತಿರುವ ಇತ್ತೀಚಿನ ವಿಇಯೋ ಎಂದು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಾಮೂನ್ ಪಾತ್ರೆಗೆ ಮುಸ್ಲಿಂ ವ್ಯಕ್ತಿ “ಮೂತ್ರ” ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights