ಫ್ಯಾಕ್ಟ್‌ಚೆಕ್: ಮೋದಿ ಗುಜರಾತ್ ಭೇಟಿ ವೇಳೆ ಪತ್ನಿ ಜಶೋದಾಬೆನ್‌ ಅವರನ್ನು ಭೇಟಿಯಾಗಿದ್ದು ನಿಜವೇ?

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಮತ್ತು ವಿಚ್ಛೇದಿತ ಪತ್ನಿ ಜಶೋದಾಬೆನ್ ಅವರೊಂದಿಗೆ ಕುಳಿತಿರುವ ಚಿತ್ರವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಗುಜರಾತ್ ಭೇಟಿಯ ಸಂದರ್ಭದಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿಯಾದರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

“ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ದೀರ್ಘಾವಧಿಯ ಬೇರ್ಪಟ್ಟ ದಂಪತಿಗಳು ಗುಜರಾತ್ ಚುನಾವಣೆಯ ಸಮಯದಲ್ಲಿ ಭೇಟಿಯಾಗಿದ್ದಾರೆ. ಜಶೋದಾಬೆನ್ ಅವರೊಂದಿಗೆ ನರೇಂದ್ರ ಮೋದಿ” ಎಂಬ ಹೇಳಿಕೆಯೊಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್8ರಂದು NDTV ಪ್ರಕಟಿಸಿದ ಫೋಟೋವೊಂದು ಲಭ್ಯವಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯನ್ನು ಭೆಟಿಯಾಗಿರುವ ದೃಶ್ಯಗಳನ್ನು ಕಾಣಬಹುದು.

2022 ರ ಗುಜರಾತ್ ಚುನಾವಣೆಯಲ್ಲಿ ಮತ ಚಲಾಯಿಸಲು ಆಗಮಿಸಿದಾಗ, ಮೊದಲು ಪ್ರಧಾನಿ ಮೋದಿ ಅವರು ತಮ್ಮ ತಾಯಿಯಿಂದ ಆಶೀರ್ವಾದ ಪಡೆಯಲು ಗುಜರಾತ್‌ನ ಗಾಂಧಿನಗರದಲ್ಲಿರುವ ತಮ್ಮ ತಾಯಿಯ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿವೆ.  ಮೂಲ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಸಂದರ್ಭದಲ್ಲಿ ಮೋದಿ ಮತ್ತು ಅವರ ತಾಯಿ ಮಾತ್ರ ಇರುವುದು ಮೂಲ ಚಿತ್ರದಲ್ಲಿ ಸೆರೆಯಾಗಿದೆ.

ಮೋದಿ ತಮ್ಮ ತಾಯಿಯೊಂದಿಗೆ ಇರುವ ಚಿತ್ರವನ್ನು ಎಡಿಟ್ ಮಾಡುವ ಮೂಲಕ ವಿಚ್ಛೇದಿತ ಪತ್ನಿ ಜಶೋದಾಬೆನ್ ಅವರೊಂದಿಗೆ ಕುಳಿತಿರುವಂತೆ ಎಡಿಟ್ ಮಾಡುವುದರೊಂದಗೆ ನೈಜ ಚಿತ್ರವೆಂಬಂತೆ ಹಂಚಿಕೊಳ್ಳಲಾಗುತ್ತಿದೆ. ಮೂಲ ಚಿತ್ರ ಮತ್ತು ಎಡಿಟ್ ಮಾಡಿದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿದಾಗ ಎರಡರ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಬಹುದು.

ರಾನಿಪ್ ಮತಗಟ್ಟೆಯಲ್ಲಿ ಮತ ಚಲಾಯಿಸುವ ಮೊದಲು ಪ್ರಧಾನಿ ಮೋದಿ ತಾಯಿಯ ಆಶೀರ್ವಾದ ಪಡೆಯಲು ಗಾಂಧಿನಗರದಲ್ಲಿರುವ ತಮ್ಮ ತಾಯಿಯ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಉಲ್ಲೇಖಿಸಿರುವ ANI ಡಿಸೆಂಬರ್ 4 ರಂದು ಅಪ್‌ಲೋಡ್ ಮಾಡಿದ ವೀಡಿಯೊವನ್ನು ಸಹ ಕಂಡುಕೊಂಡಿದ್ದೇವೆ. ಈ ವೀಡಿಯೋ ದೃಶ್ಯಗಳಲ್ಲಿ ಜಶೋದಾಬೆನ್ ಅವರ ಯಾವುದೇ ದೃಶ್ಯಗಳನ್ನು ತೋರಿಸಲಾಗಿಲ್ಲ.

ಇದಲ್ಲದೆ, ಸಾಮಾಜಿಕ ಮಾಧ್ಯಮ ಹ್ಯಾಂಡಲ್ “Deep4IND” ಪೇಜ್‌ನಿಂದ ಉಲ್ಲೇಖಿಸಿರುವ ವೈರಲ್ ಚಿತ್ರದ ಮೇಲೆ ವಾಟರ್‌ಮಾರ್ಕ್ ಅನ್ನು ಗಮನಿಸಬಹುದು.

ಫೋಟೋಗೆ ಸಂಬಂಧಿಸಿದ ಅಂಶಗಳನ್ನು ಕ್ಲೂ ಆಗಿ ತೆಗೆದುಕೊಂಡು Instagram ನ ಹ್ಯಾಂಡಲ್ ಅನ್ನು ಸರ್ಚ್ ಮಾಡಿದಾಗ ಡಿಸೆಂಬರ್ 4 ರಂದು ಅಪ್‌ಲೋಡ್ ಮಾಡಿದ ವೈರಲ್ ಪೋಸ್ಟ್ ಲಭ್ಯವಾಗಿದೆ. ಆದರೆ ಈ ಯಾವುದೇ ಚಿತ್ರದಲ್ಲಿ ಜಶೋದಾಬೆನ್ ಅವರು ಕಂಡುಬರುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಇರುವ ಚಿತ್ರವನ್ನು ಎಡಿಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಮತ್ತು ವಿಚ್ಛೇದಿತ ಪತ್ನಿ ಜಶೋದಾಬೆನ್ ಅವರೊಂದಿಗೆ ಕುಳಿತಿರುವ ಚಿತ್ರ ಎಂಬಂತೆ ಹಂಚಿಕೊಳ್ಲಲಾಗಿದೆ. ಆದರೆ ಇದು ನೈಜ ಚಿತ್ರವಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ವಿಶ್ವಸಂಸ್ಥೆಯಿಂದ ಪಡೆದ ಸಾಲವನ್ನು ತೀರಿಸಿಯೇ ಬಿಟ್ರ ಮೋದಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights