ಫ್ಯಾಕ್ಟ್ಚೆಕ್: ಅರಳಿ ಮರದಲ್ಲಿ ಮಾವಿನಕಾಯಿ ಬಿಡುವುದುಂಟೆ? ಈ ಸ್ಟೋರಿ ಓದಿ
ಮನೆಯಲ್ಲಿ ಅಜ್ಜಿಯೋ, ಅಜ್ಜನೊ ಇದ್ದರೆ ಈ ಮಾತು ಪದೇ ಪದೇ ಕೇಳಿ ಬರುವುದು ಸಹಜ “ಕಾಲ ಕೆಟ್ಟೋಯ್ತು ಕಣ್ರಿ ಏನ್ ಕಲಿಗಾಲ ಬಂತಪ್ಪ ನಮ್ ಕಾಲದಲ್ಲಿ ಹೀಗಿರ್ಲಿಲ್ಲ” ಎಂದು ಹೇಳಿಯೇ ಇರುತ್ತಾರೆ. ಕಲಿಯುಗದಲ್ಲಿ ಇನ್ನು ಏನೇನು ನೋಡ್ಬೇಕೊ ಎಂದು ಉದ್ಗಾರ ತೆಗೆಯುವುದುಂಟು. ಈ ಮಾತಿಗೆ ಅನುಗುಣವಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತಿದ್ದು ಈ ಮಾತಿಗೆ ಪುಷ್ಠಿ ನೀಡುವಂತಿದೆ.
ಋಷಿಕೇಶದಲ್ಲಿ ಅರಳಿ ಮರವೊಂದು ಮಾವಿನಕಾಯಿ ಬಿಟ್ಟಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ವೀರಭ್ರಂಹ್ಮೇಂದ್ರ ಸ್ವಾಮಿಯವರು ಹೇಳಿರುವುದೇನೆಂದರೆ ಯಾವಾಗ ಕಲಿಯುಗದಲ್ಲಿ ಅಧರ್ಮ ಅವಧಿ ಮೀರಿದರೆ
ಅರಳಿಮರದಲ್ಲಿ ಮಾವಿನಕಾಯಿ ಬಿಡುತ್ತೆ ಎಂದು ಭವಿಷ್ಯವಾಣಿ ನುಡಿದಿದ್ದರಂತೆ ಅದರಂತೆ ಋಷಿಕೇಷದ ಅರಳಿಮರದಲ್ಲಿ ಮಾವಿನಕಾಯಿ ಬಿಟ್ಟಿರವುದನ್ನು ಈ ವೀಡಿಯೋದಲ್ಲಿ ನೋಡಿರಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್ವೊಂದು ಹಂಚಿಕೊಂಡಿದ್ದಾರೆ.
ऋषिकेश में त्रिवेणीघाट पुलिस चौकी के सामने,,पीपल के पेड़ पर आम लगे है,समझ से बाहर है,,? pic.twitter.com/NlrRfBMtD2
— sanjay suryavansi )) jai hind…. (@SanjayS17005055) June 2, 2021
ಏನ್ಸುದ್ದಿ.ಕಾಂನ ಓದುಗರು ಕೂಡ ಈ ವಿಡಿಯೊವನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಇದೇ ವಿಡಿಯೋವನ್ನು ತೆಲುಗಿನ ಜನಪ್ರಿಯ ಸುದ್ದಿ ವಾಹಿನಿ ABN ಕೂಡ ಪ್ರಸಾರ ಮಾಡಿದೆ. ಈ ವಿಡಿಯೋ ಪೋಸ್ಟ್ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಈ ವೀಡಿಯೊವನ್ನು ವಿವರಿಸುವ ಆಜ್ ತಕ್ ಬರೆದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೋದಲ್ಲಿ ಕಾಣುವ ಹೋರ್ಡಿಂಗ್ಗಳ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಆಜ್ ತಕ್ ಬರೆದಿರುವ ಈ ಲೇಖನದ ಪ್ರಕಾರ, ಗಾಳಿ ಬೀಸಿದ ರಭಸಕ್ಕೆ ಅರಳಿ ಮರದ ಪಕ್ಕದ್ಲಿಯೇ ಇದ್ದ ಮಾವಿನ ಮರದ ಸಣ್ಣ ಕೊಂಬೆಗಳು ಮುರಿದು ಅರಳಿ ಮರದ ಮೇಲೆ ಬಿದ್ದಿವೆ. 2021 ಜೂನ್ ತಿಂಗಳಿನಲ್ಲಿ ಋಷಿಕೇಶದಲ್ಲಿ ಉಂಟಾದ ಚಂಡಮಾರುತದಿಂದ ಮರಗಳು ಉರುಳಿದ ವರದಿಗಳಾಗಿವೆ. ಈ ಸಂದರ್ಭದಲ್ಲಿ ಅರಳಿ ಮರದ ಮೇಲೆ ಮಾವಿನ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಕೊಂಬೆಯಲ್ಲಿದ ಮಾವಿನ ಕಾಯಿಗಳು ಅರಳಿ ಮರದ ಮೇಲೆ ಬಿದ್ದಿವೆ.

ಫ್ಯಾಕ್ಟ್ಲಿ ತಂಡ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು ಅರಳಿ ಮರದಲ್ಲಿ ಮಾವಿನಕಾಯಿ ಬಂದಿಲ್ಲ, ಜೋರಾಗಿ ಬೀಸಿದ ಗಾಳಿಗೆ ಸಮೀಪದ ಮಾವಿನ ಮರದ ಕೊಂಬೆಗಳು ಮುರಿದು ಅರಳಿ ಮರದ ಮೇಲೆ ಬಿದ್ದಿದೆ ಎಂದು ಸ್ಪಷ್ಟಪಡಿಸಿದರು. ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ದೈನಿಕ್ ಭಾಸ್ಕರ್ ಸುದ್ದಿ ತಾಣ ಪ್ರಕಟಿಸಿದಂತೆ ಈ ವಿಡಿಯೋದಲ್ಲಿ ಅರಳಿ ಮರವು ಮಾವಿನ ಕಾಯಿಗಳನ್ನು ಬಿಟ್ಟಿಲ್ಲ ಎಂದು ಬರೆದಿರುವ ಲೇಖನವನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜೋರಾಗಿ ಬೀಸಿದ ಚಂಡುಮಾರುತದ ರಭಸಕ್ಕೆ ಋಷಿಕೇಷದಲ್ಲಿ ಅರಳಿ ಮರದ ಪಕ್ಕದಲ್ಲಿದ್ದ ಮಾವಿನ ಮರದ ಕೊಂಬೆಗಳು ಬಿದ್ದಿವೆ, ಅರಳಿ ಮರದ ಮೇಲೆ ಬಿದ್ದ ಮಾವಿನ ಕೊಂಬೆಯಲ್ಲಿ ಮಾವಿನಕಾಯಿ ಇದ್ದರಿಂದ ಅರಳಿ ಮರದಲ್ಲಿ ಮಾವಿನಕಾಯಿ ಕಾಣಿಸಿವೆ. ಇದನ್ನೆ ಕೆಲವರು ಸುಳ್ಳು ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ತೀವ್ರ ಚಳಿಯಿಂದ ಈ ವ್ಯಕ್ತಿ ಸಾವನಪ್ಪಿದ್ದು ನಿಜವೇ?

