ಫ್ಯಾಕ್ಟ್‌ಚೆಕ್: ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂಬುದು ಸುಳ್ಳು

ಮಹಿಳೆಯರನ್ನು ಚುಡಾಯಿಸಿದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಘಟನೆಯು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಈ ವ್ಯಕ್ತಿಯನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದವನೆಂದು ಹೇಳಲಾಗುತ್ತಿದೆ. ಹಲವು ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/RaghavChaturbe2/status/1622943174888161289?ref_src=twsrc%5Etfw%7Ctwcamp%5Etweetembed%7Ctwterm%5E1622943174888161289%7Ctwgr%5E7f02bbe573933d41b58ad4274ebcae9fc2bc3a0b%7Ctwcon%5Es1_&ref_url=https%3A%2F%2Fwww.altnews.in%2Fman-accused-of-sexual-harassment-of-minor-girls-falsely-claimed-to-be-muslim%2F

“ಮುಸ್ಲಿಂ ಯುವಕನೊಬ್ಬ ಹಿಂದೂ ಮಹಿಳೆಗೆ ಮಾರುಕಟ್ಟೆಯಲ್ಲಿ ಕಿರುಕುಳ ನೀಡಿದ್ದಾನೆ ಎಂದು ರಾಘವ್ ಚತುರ್ಬೇದಿ ಎಂಬ ಟ್ವಿಟರ್ ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಇದೇ ವಿಡಿಯೋ 2020ರಲ್ಲಿ ವೈರಲ್ ಆಗಿತ್ತು

ಜನವರಿ 21, 2020 ರಂದು, ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅದೇ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಪೋಸ್ಟ್‌ಗಳ ಪ್ರಕಾರ, ವ್ಯಕ್ತಿ 5 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಟ್ವಿಟ್ಟರ್ ಬಳಕೆದಾರ @cbpunjabi ಟ್ವೀಟ್ ಮಾಡಿದ್ದಾರೆ, “(ಟಿಟಿಸಿ ನ್ಯೂಸ್) ಅಂಬಾಲಾದ ಜೈನ್ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ, ಸ್ಥಳೀಯ ಮಹಿಳೆಯರು ವ್ಯಕ್ತಿಯನ್ನು ಹಿಡಿದು ಬೆತ್ತಲೆಯಾಗಿ ಮೆರವಣಿಗೆ ಮಾಡಿದರು. ಇಂತಹ ಅಸಹ್ಯಕರ ಆಲೋಚನೆಗಳನ್ನು ಹೊಂದಿರುವ ಪುರುಷರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿತ್ತು. ಹಾಗಿದ್ದರೆ ಈ ಘಟನೆಯಲ್ಲಿ ವಾಸ್ತವ ಏನಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ಸರ್ಚ್‌ ಮಾಡಿದಾಗ, ಜನವರಿ 20, 2020 ರಂದು ಪ್ರಕಟಿಸಲಾದ ಟೈಮ್ಸ್ ಆಫ್ ಇಂಡಿಯಾದ ವರದಿ ಲಭ್ಯವಾಗಿದೆ. ” ಅಪ್ರಾಪ್ತ ಬಾಲಕಿಯ ಸಂಬಂಧಿಕರು ಆತನ ಕೃತ್ಯದಿಂದ ಕೋಪಗೊಂಡು ಆತನನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ವರದಿಯಾಗಿದೆ.

ದುಷ್ಕೃತ್ಯ ಎಸಗಿದ ಪವನ್ ಅಲಿಯಾಸ್ ಸೋನು ಎಂಬುವನನ್ನು ಅಪ್ರಾಪ್ತ ಬಾಲಕಿಯರ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಥಳಿಸಿದ್ದಾರೆ. ನಗರ ಪೊಲೀಸರು ಪವನ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಕಿರುಕುಳದ ಶಿಕ್ಷೆ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

“ ಬಾಲಕಿಯರು ಶಾಲೆ ಮುಗಿಸಿ ಮನೆಗೆ ಹಿಂದಿರುಗುವಾಗ ಪವನ್ ಎಂಬ ವ್ಯಕ್ತಿ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ. ಪುಟ್ಟ ಬಾಲಕಿ ಜನವರಿ 20 ರಂದು ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ, ಆಗ ಪೋಷಕರು ಯಾಕೆ ಎಂದು ವಿಚಾರಿಸಿದಾಗ ಅವಳ ತರಗತಿಗಳು ಬೇಗನೆ ಮುಗಿಯುತ್ತವೆ, ಇದರ ಪರಿಣಾಮವಾಗಿ ಅವಳು ಒಬ್ಬಂಟಿಯಾಗಿ ಮನೆಗೆ ಮರಳಬೇಕಾಗುತ್ತದೆ ಆಗ ಪವನ್ ಎಂಬ ವ್ಯಕ್ತಿಯ ವರ್ತನೆಯನ್ನು ವಿವರಿಸಿದ್ದಾಳೆ. ಅಂತಿಮವಾಗಿ, ಹುಡುಗಿ ತನ್ನ ತಾಯಿಗೆ ಪವನ್ ಬಗ್ಗೆ ತಿಳಿಸಿದಾಗ, ತಾಯಿ ತನ್ನ ಸ್ನೇಹಿತರ ಜೊತೆಗೆ ತನ್ನ ಮಗಳನ್ನು ಹಿಂಬಾಲಿಸಿ ಪವನ್‌ನನ್ನು ಹಿಡಿದಿದು ವಿವಸ್ತ್ರಗೊಳಿಸಿ ಥಳಿಸಿದ್ದಾರೆ.

ಒಟ್ಟಾರೆಯಾಗಿ ಹೆಳುವುದಾದರೆ, 2020ರ ಘಟನೆಯನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಘಟನೆಯಲ್ಲಿ ದುಷ್ಕೃತ್ಯ ಎಸಗಿದ ವ್ಯಕ್ತಿ ಮುಸ್ಲಿಂ ಅಲ್ಲ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ. ಘಟನೆಯನ್ನು ಕೋಮು ದ್ವೇಷದ ಹಿನ್ನಲೆಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕೆಲಸ ಮಾಡದ AAP ಶಾಸಕನಿಗೆ ಮಹಿಳೆಯೊಬ್ಬರು ಕೆನ್ನೆಗೆ ಬಾರಿಸಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights