ಫ್ಯಾಕ್ಟ್ಚೆಕ್ : ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರ್ಬಂಧಿಸಲಾಗತ್ತೇ?
ದೆಹಲಿಯ ಜಗನ್ನಾಥ ದೇವಾಲಯದ ಗರ್ಭಗುಡಿ ಪ್ರವೇಶಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಕಾಶ ನೀಡಲಿಲ್ಲ, ಆದರೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೇವಸ್ಥಾನದ ಗರ್ಭಗುಡಿಗೆ ಹೋಗಲು ಅವಕಾಶ ನೀಡಲಾಗಿದೆ, ನೋಡಿ ಅಧಿಕಾರದಲ್ಲಿದ್ದರೂ ಹೇಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
https://twitter.com/DrDatta01/status/1672982573222612992?ref_src=twsrc%5Etfw%7Ctwcamp%5Etweetembed%7Ctwterm%5E1672982573222612992%7Ctwgr%5E40452238f3849c41fa6338511c0de3c34e4e50b4%7Ctwcon%5Es1_&ref_url=https%3A%2F%2Fnewschecker.in%2Ffact-check%2Fimage-of-president-droupadi-murmu-at-jagannath-temple-goes-viral-with-misleading-claim
ದೆಹಲಿಯ ಜಗನ್ನಾಥ ದೇವಾಲಯದ ಗರ್ಭಗುಡಿ ಪ್ರವೇಶಿಸದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನಿರ್ಬಂಧಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
Why is President #Murmu ji not allowed inside the temple? While union minister @AshwiniVaishnaw has access till inside?
Why this continuous discrimination? pic.twitter.com/WBbZcLMADz
— YSR (@ysathishreddy) June 25, 2023
ಕೇಂದ್ರ ರೈಲ್ವೆ ಸಚಿವರನ್ನು ದೇವಸ್ಥಾನದ ಗರ್ಭಗುಡಿಗೆ ಬಿಡುವ ಇವರು, ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ಬಿಡುವುದಿಲ್ಲ ಯಾಕೆ ಹೇಳಿ ಎಂಬ ಹೇಳಿಕೆಯೊಂದಿಗೆ ಟ್ವೀಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಎರಡು ಬೇರೆ ಬೇರೆ ಸಂದರ್ಭದ ಚಿತ್ರಗಳನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಪರಿಶೀಲಿನೆಯಿಂದ ತಿಳಿದುಬಂದಿದೆ. ಅಂದರೆ ಇದೇ 2023 ಜೂನ್ 23ರಂದು ದ್ರೌಪದಿ ಮುರ್ಮ ಅವರ ಭೇಟಿಯ ಸಂದರ್ಭದ್ದು ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜುಲೈ 12, 2021 ರ ರಥಯಾತ್ರೆಯ ಸಂದರ್ಭದಲ್ಲಿ ಭೇಟಿ ನೀಡಿದ್ದರು ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
भगवान जगन्नाथ की रथ यात्रा के शुभारंभ के अवसर पर सभी देशवासियों, विशेष रूप से भगवान जगन्नाथ के श्रद्धालुओं को मैं हार्दिक बधाई और शुभकामनाएं देती हूं।
मैं महाप्रभु जगन्नाथ से प्रार्थना करती हूं कि भक्ति और समर्पण का यह त्योहार, सभी के जीवन में सुख, शांति और समृद्धि लेकर आए।… pic.twitter.com/qfRIyWastZ
— President of India (@rashtrapatibhvn) June 20, 2023
ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯವರನ್ನು ನ್ಯೂಸ್ ಚೆಕ್ಕರ್ ಪ್ಯಾಕ್ಟ್ಚೆಕ್ ತಂಡವು ಸಂಪರ್ಕಿಸಿ ಮಾತನಾಡಿದಾಗ, ಬಾಲ್ಯದಿಂದಲೂ ದ್ರೌಪದಿ ಮುರ್ಮ ಜಗನ್ನಾಥನ ಭಕ್ತರಾಗಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.
Sought blessings of Chaturdhamurti at Lord Jagannath Temple, New Delhi on auspicious occasion of #RathaYatra.
I pray to the Lord for the wellbeing of all.
Jai Jagannath pic.twitter.com/CSFXr8Xryb— Ashwini Vaishnaw (@AshwiniVaishnaw) July 12, 2021
ದೆಹಲಿಯ ಹೌಜ್ ಖಾಸ್ನಲ್ಲಿರುವ ಜಗನ್ನಾಥ ದೇವಾಲಯದ ಸಂಘಟಕರಾದ ಶ್ರೀ ನೀಲಾಚಲ ಸೇವಾ ಸಂಘವನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ, ಅವರ ಪ್ರಕಾರ ಮುರ್ಮ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಷ್ಟ್ರಪತಿಗಳು ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿದ್ದರು , ರಥಯಾತ್ರೆಯ ಸಮಯದಲ್ಲಿ ಜನಸಂದಣಿ ಇರುವ ಕಾರಣ, ಭದ್ರತ ಕಾರಣಗಳಿಂದಾಗಿ ರಾಷ್ಟ್ರಪತಿಗಳೇ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ಹೊರಗಿನಿಂದ ದರ್ಶನ ಪಡೆಯಲು ನಿರ್ಧರಿಸಿದ್ದಾರೆ ಎಂದು ಆಯೋಜಕರು ಹೇಳಿದರು, ಅವರ ಭೇಟಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಚಾರ ಇರಲಿಲ್ಲ ಎಂದು ಹೇಳಿದ್ದಾರೆಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ମହାପ୍ରଭୁ ଶ୍ରୀଜଗନ୍ନାଥଙ୍କ ରଥଯାତ୍ରା ଉପଲକ୍ଷେ ମୁଁ ସମସ୍ତ ଦେଶବାସୀଙ୍କୁ, ବିଶେଷ କରି ମହାପ୍ରଭୁ ଶ୍ରୀଜଗନ୍ନାଥଙ୍କ ଭକ୍ତମାନଙ୍କୁ ହାର୍ଦ୍ଦିକ ଅଭିନନ୍ଦନ ଓ ଶୁଭେଚ୍ଛା ଜଣାଉଛି। ମହାପ୍ରଭୁ ଶ୍ରୀଜଗନ୍ନାଥଙ୍କ ନିକଟରେ ପ୍ରାର୍ଥନା କରୁଛି ଯେ ଭକ୍ତି ଓ ସମର୍ପଣର ଏ ମହାପର୍ବ ସମସ୍ତଙ୍କ ଜୀବନରେ ସୁଖ, ଶାନ୍ତି ଓ ସମୃଦ୍ଧି ଆଣିଦେଉ। ଜୟ ଜଗନ୍ନାଥ… pic.twitter.com/j0yIzDaBw7
— President of India (@rashtrapatibhvn) June 20, 2023
ರೈಲ್ವೆ ಸಚಿವ ಅಶ್ವಿನಿ ವೈಶ್ಣವ್ ಗರ್ಭಗುಡಿಯಲ್ಲಿ ಇರುವ ಚಿತ್ರದ ಬಗ್ಗೆ ಪ್ರಸ್ತಾಪಿಸಿದಾಗ, ಮಾಹಿತಿ ನೀಡಿರುವ ಆಡಳಿತ ಮಂಡಳಿಯು ಇದು ಛೇರಾ ಪಹನ್ರಾ ಸಂದರ್ಭದಲ್ಲಿ ಸೆರೆಹಿಡಿದ ಚಿತ್ರ ಎಂದು ತಿಳಿಸಿದ್ದಾರೆ.ಗರ್ಭ ಗುಡಿಯ ವೇದಿಕೆಯನ್ನು ಒರೆಸುವುದು ಅಥವಾ ಗುಡಿಸುವ ಸಂದರ್ಭ ಹೊರತುಪಡಿಸಿ, ಎಲ್ಲಾ ಭಕ್ತರು ಹೊರಗಿನಿಂದಲೇ ದೇವರ ದರ್ಶನವನ್ನು ಪಡೆಯುತ್ತಾರೆ ಎಂದು ಹೇಳಿದರು.
ಅಶ್ವಿನಿ ವೈಷ್ಣವ್ ಅವರ ಚಿತ್ರದ ಬಗ್ಗೆ ಕೇಳಿದಾಗ, ಆಯೋಜಕರು ಚಿತ್ರವು ಛೇರಾ ಪಹನ್ರಾ ಆಚರಣೆಯ ಸಮಯದಲ್ಲಿ ಸೆರೆಹಿಡಿದ ಚಿತ್ರ ಎಂದು ಹೇಳಿದರು, ಆದರೆ ರಾಷ್ಟ್ರಪತಿಗಳು ಈ ಆಚರಣೆಗಳಿಗೆ ಬಂದಿರಲಿಲ್ಲ, ಎಂದು ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯ ಜಗನ್ನಾಥ ದೇವಾಲಯದ ಗರ್ಭಗುಡಿ ಪ್ರವೇಶಿಸದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ತಡೆಯಲಾಗಿತ್ತು ಎಂಬುದು ಸುಳ್ಳು. ದ್ರೌಪದಿ ಮುರ್ಮ ಅವರನ್ನು ಗರ್ಭಗುಡಿಗೆ ಪ್ರವೇಶಿಸದಂತೆ ಯಾರೂ ಕೂಡ ತಡೆದಿರಲಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಮುಸ್ಲಿಮರು ರಸ್ತೆಗಳಲ್ಲಿ ನಮಾಜ್ ಮಾಡುತ್ತಿರುವ ಚಿತ್ರ ಪ್ಯಾರಿಸ್ನದಲ್ಲ

