FACT CHECK | ದುಬೈನ ಬುರ್ಜ್ ಖಲೀಫಾ ಕಟ್ಟಡ ಬೆಂಕಿಗೆ ಆಹುತಿಯಾಗಿದೆ ಎಂದು AI ಫೋಟೊ ಹಂಚಿಕೆ
ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಹೊಂದಿರುವ ದುಬೈನ ಬುರ್ಜ್ ಖಲೀಫಾ ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗಿದೆ.

ಬುರ್ಜ್ ಖಲೀಫಾಕ್ಕೀಗ ಭರ್ತಿ 14 ವರ್ಷ ತುಂಬಿದೆ. ಇದೇ ಸಂದರ್ಭದಲ್ಲಿ ಈ ಗಗನ ಚುಂಬಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳುವ ಪೋಸ್ಟ್ಗಳು ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ಕಾಣಿಸಿಕೊಂಡಿವೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಗಗನಚುಂಬಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಯಾವುದೇ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಬುರ್ಜ್ ಖಲೀಫಾಗೆ ಬೆಂಕಿ ಬಿದ್ದಿದ್ದರೆ, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸುದ್ದಿವಾಹಿನಿಗಳು ದೊಡ್ಡ ಮಟ್ಟದಲ್ಲಿ ವರದಿ ಮಾಡುತ್ತಿದ್ದವು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರ ಫೇಕ್ ಎಂದು ನಿರೂಪಿಸಲು ಹೆಚ್ಚಿನ ಶ್ರಮ ಬೇಕಾಗಲಿಲ್ಲ, ಯಾಕೆಂದರೆ ಈ ಜಾಗತಿಕ ಕಟ್ಟಡವನ್ನು ವೀಕ್ಷಿಸಲು ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ. ಆದರೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾದ ಬೇರೆ ಬೇರೆ ಕೋನಗಳಿಂದ ಕಟ್ಟಡದ ಚಿತ್ರವನ್ನು ಪ್ರವಾಸಿಗರು ಸೆರೆಹಿಡಿದಿರುತ್ತಾರೆ. ಆದರೆ ಅಂತಹ ಚಿತ್ರಗಳು ಎಲ್ಲಿಯೂ ಲಭ್ಯವಾಗಿಲ್ಲ. ಫೇಸ್ಬುಕ್, ಇನ್ಸ್ಟಾಗ್ರಾಮ್, ಟಿಕ್ಟಾಕ್, ಸ್ನ್ಯಾಪ್ಚಾಟ್ ಮತ್ತು ಎಕ್ಸ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿಯೂ ಬೇರೆ ಫೋಟೊಗಳು ಕಂಡುಬಂದಿಲ್ಲ. ಹಾಗಾಗಿ ಈ ಫೋಟೋವನ್ನು ಡಿಜಿಟಲ್ ಉಪಕರಣಗಳ ಸಹಾಯದಿಂದ ರಚಿಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆ.

ಬೆಂಕಿಯಿಂದ ಆವೃತವಾಗಿರುವ ಬುರ್ಜ್ ಖಲೀಫಾದ ಕಟ್ಟಡದ ಫೋಟೋವನ್ನು AI- ಉಪಕರಣ ಸಹಾಯದಿಂದ ರಚಿಸಲಾಗಿದೆ ಎಂಬುದನ್ನು ಇಂಡಿಯಾ ಟುಡೆ ಪತ್ತೆ ಹಚ್ಚಿದೆ. AI ಪತ್ತೆ ಸಾಫ್ಟ್ವೇರ್ HIVE ಮಾಡರೇಶನ್ ಮಿಡ್ಜರ್ನಿ ಉಪಕರಣವನ್ನು ಬಳಸಿಕೊಂಡು ಈ ಚಿತ್ರವನ್ನು AI- ಮೂಲಕ ರಚಿಸಲಾಗಿದೆ ಎಂದು ಖಚಿತವಾಗಿದೆ.
Hi! This is Ashish, a fact checker based out of Delhi. I’m reaching out for your help for a story. Would you be able to confirm if you visited today and no such hazard has taken place.
The viral photo being shared is here: https://t.co/kZGIieCAC5— Ashish Kashyap (@_ashishkashyap) April 5, 2024
ದುಬೈ ಸರ್ಕಾರದ ಮಾಧ್ಯಮ ಕಚೇರಿಯಲ್ಲಿ ಕೆಲಸ ಮಾಡುವ ಯುಎಇ ಮೂಲದ ಪತ್ರಕರ್ತ ಮುಹಮ್ಮದ್ ಬಿನ್ ಅಲ್-ನವೈಫ್ ಅವರು ಎಕ್ಸ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಬುರ್ಜ್ ಖಲೀಫಾ ಕಟ್ಟಡದಲ್ಲಿ ಯಾವುದೇ ಬೆಂಕಿ ಕಂಡುಬಂದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿವ ಚಿತ್ರ ಫೇಕ್ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬುರ್ಜ್ ಖಲೀಫಾ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದ ಹಂಚಿಕೊಂಡ ಚಿತ್ರವನ್ನು AI ನಿಂದ ರಚಿಸಲಾದ ಫೇಕ್ ಚಿತ್ರ ಎಂಬುದು ದೃಢಪಟ್ಟಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ತಮ್ಮನ್ನು ಕಳ್ಳ ಎಂದು ಹೇಳಿಕೊಂಡರೆ

