FACT CHECK | BJP ಬೆಂಬಲಿಗರು ಎಸ್ಸಿ/ಎಸ್ಟಿ ಮುರ್ದಾಬಾದ್ ಎಂದು ಘೊಷಣೆ ಕೂಗಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಎಸ್ಸಿ/ಎಸ್ಟಿ ಮುರ್ದಾಬಾದ್ ಎಂದು ಬಿಜೆಪಿ ಬೆಂಬಲಿಗರು ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಳಕೆದಾರರು, “ಬಿಜೆಪಿ ಪಕ್ಷದ ನೈಜ ಮುಖ. ದಲಿತರಿಗೆ ದಿಕ್ಕಾರ ಕೂಗುತ್ತಿರುವ ಕುತಂತ್ರಿಗಳು” ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಿಜೆಪಿ ಪಕ್ಷದ ನೈಜ ಮುಖ. ದಲಿತರಿಗೆ ದಿಕ್ಕಾರ ಕೂಗುತ್ತಿರುವ ಕುತಂತ್ರಿಗಳು” ಎಂದಿದೆ. ಹೇಳಿಕೆಯೊಂದಿಗೆ ಹಾಕಲಾದ ವೀಡಿಯೋದಲ್ಲಿ ಬಿಜೆಪಿ ಧ್ವಜ ಹಿಡಿದಿರುವವರು ಎಸ್‌ಸಿ ಎಸ್ಟಿ ಮುರ್ದಾಬಾದ್ ಎಂದು ಕೂಗುವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
https://twitter.com/NaadaPremiSha/status/1783161843277500762
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ವೇಳೆ ಯಾವುದೇ ಸೂಕ್ತ ಫಲಿತಾಂಶಗಳು ಸಿಕ್ಕಿಲ್ಲ. ಆದರೆ ವಿವಿಧ ಭಾಷೆಗಳಲ್ಲಿ ಇದೇ ರೀತಿಯ ಕ್ಲೇಮ್ ಗಳನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಆದರೆ ಈ ವೀಡಿಯೋ ಎಲ್ಲಿಂದ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
Idu edited , nivu kooda heegena? Ad bere video, ide bere video
— ಕಿಚ್ಚನ ಅಭಿಮಾನಿ ರೂಪೇಶ (@kingkicchafan7) April 25, 2024
ಇದೇ ವೇಳೆ ಎಕ್ಸ್‌ನಲ್ಲಿ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು “ಇದು ಎಡಿಟೆಡ್, ನೀವು ಕೂಡಾ ಹೀಗೇನಾ, ಅದು ಬೇರೆ ವೀಡಿಯೋ ಇದೆ ಬೇರೆ ವೀಡಿಯೋ” ಎಂದು ಬರೆದಿರುವುದನ್ನು ಗಮನಿಸಬಹುದು. ನಂತರ ಗೂಗಲ್‌ನಲ್ಲಿ “sc st murdabad” ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈವೇಳೆ ವಿವಿಧ ವಿಡಿಯೋಗಳು ಲಭ್ಯವಾಗಿವೆ.
9 ಜನವರಿ 2020ರ ನಾಸೀರ್ ಟೈಮ್ಸ್ ಫೇಸ್‌ಬುಕ್ ಪೋಸ್ಟ್ ನಲ್ಲಿ “ಆರೆಸ್ಸೆಸ್ ನ ಹೊಸ ಸ್ಲೋಗನ್ ಎಸ್‌ಸಿ ಎಸ್ಟಿ ಮುರ್ದಾಬಾದ್” ಶೀರ್ಷಿಕೆಯಡಿಯಲ್ಲಿ ಗುಂಪೊಂದು ಎಸ್‌ಸಿ ಎಸ್ಟಿ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಲಭ್ಯವಾಗಿದೆ.
22 ಏಪ್ರಿಲ್ 2019ರ ನ್ಯಾಷನಲ್ ಇಂಡಿಯಾ ನ್ಯೂಸ್ ಯೂಟ್ಯೂಬ್ ಚಾನೆಲ್ “ಬಿಜೆಪಿಯವರು ಬಹಿರಂಗವಾಗಿ ಎಸ್‌ಸಿ/ಎಸ್ಟಿ ಮುರ್ದಾಬಾದ್, ಮೀಸಲಾತಿ ಹಾಯ್ ಎಂದು ಘೋಷಣೆಗಳನ್ನು ಕೂಗಿದ್ದಾರೆ” ಎಂಬ ಶೀರ್ಷಿಕೆಯಡಿ ವೀಡಿಯೋ ಪ್ರಕಟಿಸಿದ್ದು ಇದರಲ್ಲೂ ಗುಂಪೊಂದು ಎಸ್‌ಸಿ ಎಸ್ಟಿ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವುದು ಕಂಡುಬದಿದೆ.
ವಿಶೇಷವೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿರುವ ಈ ವೀಡಿಯೋಗಳಲ್ಲಿರುವ ಆಡಿಯೋ, ಕ್ಲೇಮಿನಲ್ಲಿರುವ ಆಡಿಯೋಕ್ಕೂ ಸಾಮ್ಯತೆ ಹೊಂದಿರುವುದನ್ನು ಗಮನಿಸಿದ್ದೇವೆ. ಈ ಬಗ್ಗೆ ಸರ್ಚ್ ಮಾಡಿದಾಗ 18 ಏಪ್ರಿಲ್ 2024ರ ಹಿಂದಿ ಓನ್ಲಿ ಫ್ಯಾಕ್ಟ್ ವರದಿಯನ್ನು ಗಮನಿಸಿದ್ದೇವೆ. ಇದರಲ್ಲಿ ಏಪ್ರಿಲ್ 22, 2019ರಂದು ಪಬ್ಲಿಕ್ ಟಿವಿ ಬಿಹಾರ ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿರುವ ವೀಡಿಯ ಬಗ್ಗೆ ಹೇಳಲಾಗಿದೆ.
ಆ ಪ್ರಕಾರ, “ಬಿಜೆಪಿ ಬೆಂಬಲಿತ, ನಿತೀಶ್ ಕುಮಾರ್ ಅವರ ಬಿಹಾರದ ಸಿವಾನ್‌ನ ಜೆಡಿಯು ಅಭ್ಯರ್ಥಿ ಹಿಂದೂ ಯುವ ವಾಹಿನಿ ರಾಜ್ಯಾಧ್ಯಕ್ಷರ ಪತ್ನಿ ಕವಿತಾ ಸಿಂಗ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಎಸ್‌ಸಿ/ಎಸ್ಟಿ ಮುರ್ದಾಬಾದ್, ಮೀಸಲಾತಿ ಹಾಯ್ ಹಾಯ್ ಎಂಬ ಘೋಷಣೆಗಳು ಕೂಗಲಾಗಿದೆ. ಈ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಮೀಸಲಾತಿ ವಿರೋಧಿ, ದಲಿತ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರದಿಂದಿರಿ. ಇದು ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ನಿಜವಾದ ಮುಖ ಮತ್ತು ಸ್ವಭಾವ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.” ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ಎಸ್‌ಸಿ ಎಸ್ಟಿ ಮುರ್ದಾಬಾದ್ ಎಂದು ಬಿಜೆಪಿ ಬೆಂಬಲಿಗರು ಘೋಷಣೆ ಕೂಗುತ್ತಿರುವ ವಿಡಿಯೋವನ್ನು ಎಡಿಟ್ ಮಾಡಿ ಹಂಚಿರುವುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕಾಂಗ್ರೆಸ್ ಸರ್ಕಾರ ಪ್ರತಿ ಯೂನಿಟ್ ವಿದ್ಯುತ್‌ಗೆ 7.25 ರೂ ಹೆಚ್ಚಳ ಮಾಡಿದೆ ಎಂಬುದು ಸುಳ್ಳು


