FACT CHECK | ತನ್ನ ಸ್ವಂತ ಮಗನನ್ನೆ ಮದುವೆಯಾದ ಹಿಂದೂ ಮಹಿಳೆ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ತನ್ನ ಗಂಡನನ್ನು ಕಳೆದುಕೊಂಡ ನಂತರ ಆಕೆ ತನ್ನ ಮಗ ವಿಕಾಸ್ ಪಾಠಕ್ ನನ್ನು ಮದುವೆಯಾಗಿದ್ದಾಳೆ. ಈಕೆಯ ಹೆಸರು ಜ್ಯೋತಿ ಪಾಠಕ್ ಎಂಬ ನಿರೂಪಣೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ವಿಕಾಸ್ ಪಾಠಕ್ ಎನ್ನುವ ವ್ಯಕ್ತಿ, ಮೂರು ವರ್ಷದ ಹಿಂದೆ ತನ್ನ ತಂದೆ ಅಪಘಾತವೊಂದರಲ್ಲಿ ಸಾವಿಗೀಡಾದ ನಂತರ ತಾಯಿ ಜ್ಯೋತಿ ಪಾಠಕ್ ಅವರನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಅದನ್ನು ಧರ್ಮದ ಆಧಾರದಲ್ಲಿ ಟೀಕಿಸುತ್ತಿದ್ದು, ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೊ ವೀಕ್ಷಿಸಿದ್ದು, ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ದಾರೆ.

ಪತಿ ನಿಧನದ ನಂತರ ಜ್ಯೋತಿ ಪಾಠಕ್ ಖಿನ್ನತೆಗೆ ಒಳಗಾಗಿದ್ದರು ಮತ್ತು ಯಾರೊಂದಿಗೂ ಮಾತನಾಡಲು ನಿರಾಕರಿಸಿದರು ಎಂದು ವಿಡಿಯೋದ ಹಿನ್ನಲೆ ಧ್ವನಿಯ-ನಿರೂಪಣೆಯಲ್ಲಿ ಮಹಿಳೆಯು ತನಗೆ ‘ಸ್ನೇಹಿತ’ ಅಥವಾ ‘ಪಾಲುದಾರ’ನ ಅಗತ್ಯತೆಯ ಬಗ್ಗೆ ಹೇಳಿದ್ದಳು ಎಂದೂ ನಿರೂಪಿಸಲಾಗಿದೆ. ಕೊನೆಗೆ ಮಗನನ್ನೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದಳು ಎಂದು ಹೇಳಲಾಗಿದೆ. ಇದೇ ವಿಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾಸನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಫೆಬ್ರವರಿ 2022 ರಲ್ಲಿ ಔಟ್‌ಲುಕ್ ಇಂಡಿಯಾ ಪ್ರಕಟಿಸಿದ  ಲೇಖನ ಲಭ್ಯವಾಗಿದೆ. ಲೇಖನದ ಪ್ರಕಾರ ಮಹಿಳೆಯ ಹೆಸರು ವಿಜಯ್ ಕುಮಾರಿ ಮತ್ತು ಆಕೆಯ ಮಗ ಕನ್ಹಯ್ಯಾ ಎಂದು  ಉಲ್ಲೇಖಿಸಲಾಗಿದೆ.

BBC NewsTimes of IndiaCNNThe Daily StarInternational Business TimesNew York Daily News,  ನ್ಯೂಸ್ ಮುಂತಾದ ಪ್ರಮುಖ ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಹಲವಾರು ಇತರ ವರದಿಗಳು ಲಭ್ಯವಾಗಿದೆ.

ವಿಜಯಕುಮಾರಿ 1993ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಕೊಲೆಯೊಂದರ ಆರೋಪದ ಮೇಲೆ ಜೈಲು ಸೇರಿ 20 ವರ್ಷ ಶಿಕ್ಷೆ ಅನುಭವಿಸಿದ್ದರು. 2013ರಲ್ಲಿ ಆಕೆಯ ಮಗ ಕನ್ಹಯ್ಯ ಜಾಮೀನು ಮೊತ್ತ ಸಲ್ಲಿಸಿ ತಾಯಿಯ ಬಿಡುಗಡೆಗೆ ಕಾರಣರಾಗಿದ್ದರು. ಆಗ ತೆಗೆದ ಚಿತ್ರವನ್ನು ಮದುವೆಯ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ವಿಕಾಸ್ ಪಾಠಕ್ ಎಂಬ ಹಿಂದೂ ವ್ಯಕ್ತಿ ತನ್ನ ತಾಯಿ ಜ್ಯೋತಿ ಪಾಠಕ್ ಅವರನ್ನು ವಿವಾಹವಾದರು ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ, ತಾಯಿ-ಮಗನ ಜೋಡಿಯ ಫೋಟೋ 2013 ರ ಹಿಂದಿನದು. 20 ವರ್ಷಗಳ ಜೈಲುವಾಸ ಅನುಭವಿಸಿದ ತನ್ನ ತಾಯಿ ವಿಜಯ್ ಕುಮಾರಿಯನ್ನು ಜಾಮೀನು ನೀಡಿ ಬಿಡುಗಡೆಗೊಳಿಸಿದ್ದ ಮಗ ಕನ್ಹಯ್ಯ. ತಾಯಿ ಮತ್ತು ಮಗನ ಚಿತ್ರವನ್ನು 2013ರಲ್ಲಿ ಹಲವು ಸುದ್ದಿ ಸಂಸ್ಥೆಗಳು ಪ್ರಕಟಿಸಿದ್ದವು. ಇದೇ ಚಿತ್ರವನ್ನು ಈಗ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನ್ಯೂಯಾರ್ಕ್‌ನಲ್ಲಿ ವಿರಾಟ್ ಕೊಹ್ಲಿಯ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights