ಮೈಸೂರಿನಲ್ಲಿ ಭಕ್ತರಿಗೆ ನೀಡಲು ಸಿದ್ದವಾಗುತ್ತಿದೆ 2 ಲಕ್ಷ ಲಡ್ಡು! : ಯಾಕೆ ಗೊತ್ತಾ?

ಮೈಸೂರಿನಲ್ಲಿ ಭಕ್ತರಿಗೆ ನೀಡಲು 2 ಲಕ್ಷ ಲಡ್ಡು ಸಿದ್ದವಾಗುತ್ತಿದೆ. ಯಾಕೆ ಗೊತ್ತಾ..? ಅದೇ ಕಣ್ರಿ ಹೊಸ ವರ್ಷದ ಸಂಭ್ರಮದಲ್ಲಿರುವ ಎಲ್ಲರಿಗೂ ಈ ಬಾರಿ ಲಡ್ಡು ಹಂಚಿಸಲು ತಯಾರಿ ನಡೆದಿದೆ.

ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ನೀಡಲಾಗುತ್ತದೆ. ಇದು ಸುದರ್ಶನ ನರಸಿಂಹ ಕ್ಷೇತ್ರವೆಂದೇ ಹೆಸರುವಾಸಿಯಾಗಿದೆ. 1994 ರಿಂದಲೂ ಹೊಸವರ್ಷದ ಮೊದಲ ದಿನ ಈ ರೀತಿ ಒಂದು ಸಾವಿರ ಲಡ್ಡುಗಳನ್ನು ವಿತರಿಸಲಾಗಿತ್ತು.

ಈ ಬಾರಿ ಎರಡು ಲಕ್ಷ ಲಡ್ಡುಗಳನ್ನು ವಿತರಿಸಲು ತಯಾರಿ ನಡೆದಿದೆ. ವಾರದಿಂದಲೇ ಲಡ್ಡುಗಳನ್ನು ತಯಾರಿಸುವ ಕಾರ್ಯ ಆರಂಭಗೊಂಡಿದ್ದು, ಡಿಸೆಂಬರ್ 31ಕ್ಕೆ ಲಡ್ಡುಗಳ ತಯಾರಿ ಅಂತ್ಯಗೊಳ್ಳಲಿದೆ.

50 ಮಂದಿ ನುರಿತ ಬಾಣಸಿಗರಿಂದ ಲಡ್ಡುಗಳನ್ನು ತಯಾರಾಗುತ್ತಿದೆ. ಲಡ್ಡುಗಳ ತಯಾರಿಗಾಗಿ 50 ಕ್ವಿಂಟಾಲ್ ಕಡ್ಲೆಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4,000 ಲೀಟರ್ ಖಾದ್ಯ ತೈಲ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100 ಕೆ.ಜಿ ಬಾದಾಮಿ, 200 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ ಬೂರಾ ಸಕ್ಕರೆ, 10 ಕೆ.ಜಿ ಪಿಸ್ತಾ, 20 ಕೆ.ಜಿ ಏಲಕ್ಕಿ, 20 ಕೆ.ಜಿ ಜಾಕಾಯಿ ಮತ್ತು ಜಾಪತ್ತೆ, 5 ಕೆ.ಜಿ ಕರ್ಪೂರ,100 ಕೆ.ಜಿ ಲವಂಗ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಯೋಗನರಸಿಂಗಸ್ವಾಮಿ ದೇಗುಲದ ಸಂಸ್ಥಾಪಕರಾದ ಭಾಷ್ಯಂ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights