ವಿಶ್ವದ ದೊಡ್ಡಣ್ಣನಿಗೆ ಮತ್ತೊಂದು ಸಂಕಷ್ಟ : ಮೃಗಾಲಯದ ಹುಲಿಗೂ ಬಂತು ಕೊರೊನಾ!

ಇದುವರೆಗೂ ಮಹಾಮಾರಿ ಕೊರೊನಾ ಯಾವುದರಿಂದ ಬಂತು ಅನ್ನೋದು ದೃಢಪಟ್ಟಿಲ್ಲ. ಆದರೆ ಇಷ್ಟುದಿನ ಮನುಷ್ಯ ದೇಹ ಎಗ್ಗಿಲ್ಲದೇ ಹೊಕ್ಕು ಅಟ್ಟಹಾಸ ಮೆರೆದು ಪ್ರಾಣ ಬಲಿ ಪಡೆಯುತ್ತಿದ್ದ ಕೊರೊನಾ ಸದ್ಯ ಪ್ರಾಣಿಗಳ ದೇಹವನ್ನು ಹೊಕ್ಕಿ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ಇದರಿಂದ ವಿಶ್ವದ ದೊಡ್ಡನಿಗೆ ಮತ್ತೊಂದು ಕೊರೊನಾ ಸಂಕಷ್ಟ ಎದುರಾಗಿದೆ.

ಹೌದು… ಹಾಂಕಾಂಗ್ ನಲ್ಲಿ ಎರಡು ನಾಯಿಗಳಿಗೆ ಕಿಲ್ಲರ್ ಕೊರೊನಾ ಸೋಂಕು ತಗುಲಿದ್ದರ ಜೊತೆಗೆ ಅಮೆರಿಕಾದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಗಳಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ  ನ್ಯೂಯಾರ್ಕ್ ಬ್ರಾಂಕ್ಸ್ ಮೃಗಾಲಯ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, “ ಇಲ್ಲಿನ ಹುಲಿಯೊಂದಕ್ಕೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಈ ಸೋಂಕು ಮೃಗಾಲಯದ ಹುಲಿಗಳ ಉಸ್ತುವಾರಿ ಹೊಂದಿದ್ದ ಪಾಲಕನಿಂದ ಹುಲಿಗೆ ಬಂದಿರುವ ಸಾಧ್ಯತೆ ಇದೆ” ಎಂದು ಸ್ಪಷ್ಟನೆ ನೀಡಿದೆ.

ನಾಡಿಯ ಎಂಬ ನಾಲ್ಕು ವರ್ಷದ ಮಲಯನ್ ಹುಲಿ ಮತ್ತು ಅವಳ ಸಹೋದರಿ ಅಜುಲ್ ಮತ್ತು ಎರಡು ಅಮುರ್ ಹುಲಿಗಳು ಹಾಗೂ ಮೂರು ಆಫ್ರಿಕನ್ ಸಿಂಹಗಳು ಸಹ ಒಣ ಕೆಮ್ಮಿನಿಂದ ಬಳಲಿದ್ದು, ಶೀಘ್ರದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಪ್ರಾಣಿಸಂಗ್ರಹಾಲಯದ ವನ್ಯಜೀವಿ ಸಂರಕ್ಷಣಾ ಸೊಸೈಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಿಂದ ಮೃಗಾಲಯದಲ್ಲಿರುವ ಹುಲಿ ಮತ್ತು ಸಿಂಹಗಳನ್ನು ಹೆಚ್ಚಿನ ನಿಗಾದಲ್ಲಿ ಪಾಲನೆ ಮಾಡಲಾಗುತ್ತಿದೆ. ಅವುಗಳ ತೂಗದಲ್ಲಿ ಇಳಿಕೆ ಕಂಡುಬಂದಲ್ಲಿ ಚಿಕಿತ್ಸೆ ನೀಡಲು ವಿಶೇಷ ತಂಡವನ್ನು ರಚಿಸಲಾಗಿದೆ. ಆದರೆ ಪ್ರಾಣಿ ದೇಹದಲ್ಲಿ ಕೊರೊನಾ ಸೋಂಕು ಯಾವ ರೀತಿ ವರ್ತಿಸುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.ಹೀಗಾಗಿ ಉತ್ತಮ ಚಿಕತ್ಸೆ ನೀಡುವಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹುಲಿ ಗುಣಮುಖವಾಗುವ ಸಿರೀಕ್ಷೆ ಇದೆ” ಎಂದು ಪ್ರಕಟನೆಯಲ್ಲಿ ಹೇಳಲಾಗುತ್ತಿದೆ.

ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು 183 ದೇಶಗಳಲ್ಲಿ ಕೊರೋನಾ ವೈರಸ್​ ಹರಡಿದೆ. ಜಗತ್ತಿನಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ವಿಶ್ವಾದ್ಯಂತ ಈವರೆಗೆ ಒಟ್ಟು 69,419 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಇದರಲ್ಲಿ ಅಮೆರಿಕದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ನ್ಯೂಯಾರ್ಕ್ ನಲ್ಲಿ 1,23,160 ಮಂದಿಗೆ ಸೋಂಕು ತಗುಲಿದ್ದು, 4159 ಜನ ಮಹಾಮಾರಿ ಕೊರೊನಾದಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನೂ ನ್ಯೂಜರ್ಸಿಯಲ್ಲಿ 37,505 ಜನರಿಗೆ  ಕೊರೊನಾ ಸೋಂಕು ಹರಡಿದ್ದು, 917 ಮಂದಿ ಸೋಂಕಿಗೆ ಒಳಪಟ್ಟಿದ್ದು, ಮಿಚಿಗನ್ ನಲ್ಲಿ 15,718 ಜನಕ್ಕೆ ಸೋಂಕು ತಗುಲಿದ್ದು, 617 ಜನ ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 15,151 ಪ್ರಕರಣಗಳು ಪತ್ತೆಯಾದರೆ 349 ಮಂದಿ ಸಾವಿನ ಬಾಗಿಲು ದಾಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights