FACT CHECK | ಬಾಂಗ್ಲಾದಲ್ಲಿ ರಸ್ತೆಯಲ್ಲೆ ನಮಾಜ್ ಮಾಡುತ್ತಿದ್ದ ಕಾರಣಕ್ಕೆ ಮುಸ್ಲಿಂ ಧರ್ಮಗುರುಗಳನ್ನು ಬಂಧಿಸಿದ್ದು ನಿಜವೇ?

ರಸ್ತೆ ಬದಿಯಲ್ಲಿ ನಮಾಜ್‌ ಮಾಡುತ್ತಿದ್ದ ಮುಸ್ಲಿಂ ಧರ್ಮಗುರು ಅಥವಾ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು.

ಹೀಗಾಗಿಯೇ ಬಾಂಗ್ಲಾದೇಶ ಪೊಲೀಸರು ಮೌಲಾನಾರನ್ನು ಬಂಧಿಸಿ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಎಲ್ಲ ನಮಾಜಿಗಳನ್ನು ಹೊರಹಾಕಿದರು. ಯಾವುದೇ ಇಸ್ಲಾಮಿಕ್ ರಾಷ್ಟ್ರ ಅಥವಾ ಸೌದಿಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವುದನ್ನು ಒಪ್ಪುವುದಿಲ್ಲ ಅವರು ರಸ್ತೆಯಲ್ಲಿ ನಮಾಜ್ ಮಾಡುವವರನ್ನು ಬಂಧಿಸಿ ದಂಡ ವಿಧಿಸುತ್ತಾರೆ. ಆದರೆ ಭಾರತದಲ್ಲಿ ಮಾತ್ರ ಪ್ರತಿಪಕ್ಷಗಳು ಅಳಲು ಪ್ರಾರಂಭಿಸುತ್ತವೆ.” ಎಂದು ಬಾಂಗ್ಲಾದೇಶದ ಘಟನೆಯನ್ನು ಭಾರತಕ್ಕೆ ಹೋಲಿಸಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದ ಇಮಾಮ್ ನನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 19 ಜುಲೈ 2024 ರಂದು ಟಿಆರ್‌ಟಿ ವರ್ಲ್ಡ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ ಅದೇ ವಿಡಿಯೋ ಲಭ್ಯವಾಗಿದೆ. “ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದ ಇಮಾಮ್ ನನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸುತ್ತಾರೆ” ಎಂಬ ಶೀರ್ಷಿಕೆಯೊಂದಿಗೆ ಅದನ್ನು ಅಪ್ ಲೋಡ್ ಮಾಡಲಾಗಿದೆ.

ಬಾಂಗ್ಲಾದೇಶದ ಮುನ್ಶಿಗಂಜ್‌ನಲ್ಲಿ ಸರ್ಕಾರಿ ಉದ್ಯೋಗ ಕೋಟಾಗಳಿಗಾಗಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವ ವಹಿಸಿದ್ದಕ್ಕಾಗಿ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದರು.

ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದ ಇಮಾಮ್ ನನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

ಅಂತೆಯೇ, ಜುಲೈ 18 ರ ಅಲ್ ಜಜೀರಾದ ವರದಿ ಲಭ್ಯವಾಗಿದೆ. ಇದು ವೈರಲ್ ಕ್ಲಿಪ್‌ನಂತೆಯೇ ಅದೇ ವೀಡಿಯೊವನ್ನು ಸಹ ಒಳಗೊಂಡಿದೆ. ಇತ್ತೀಚಿನ ವೀಡಿಯೋಗಳಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಅಂತ್ಯಕ್ರಿಯೆ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಪಾದ್ರಿಯನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಾಂಗ್ಲಾದೇಶದ ಮಾಧ್ಯಮಗಳು ಕೂಡ ಈ ಘಟನೆಯ ಬಗ್ಗೆ ವರದಿ ಮಾಡಿವೆ. ಬಂಧಿತರನ್ನು ಇಮಾಮ್ ಅಬ್ದುರ್ ರೆಹಮಾನ್ ಹಿರಾನ್ ಮತ್ತು ನಗರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಸದಸ್ಯ ಕಾರ್ಯದರ್ಶಿ ವಕೀಲ ಮೆಹಬೂಬ್-ಉಲ್-ಆಲಂ ಸ್ವಪನ್ ಎಂದು ಕಲ್ಬೆಲಾ ವರದಿ ಮಾಡಿದೆ. ಅವರು ರಸ್ತೆಯಲ್ಲಿ ಇದನ್ನು ಮಾಡುತ್ತಿರುವುದರಿಂದ ಇದು “ಅರಾಜಕತೆಯನ್ನು” ಸೃಷ್ಟಿಸಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆಗೆ ತಿಳಿಸಿದರು.

 

ಬಾಂಗ್ಲಾದೇಶದ ಜನರು ಬೀದಿಗಳಲ್ಲಿ ನಮಾಜ್ ಮಾಡುತ್ತಿರುವ ದೃಶ್ಯಗಳು : 

ಪವಿತ್ರ ರಂಜಾನ್ ತಿಂಗಳ ಕೊನೆಯ ಶುಕ್ರವಾರದಂದು ಮುಸ್ಲಿಮರು ಬೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೊವನ್ನು ಯೂರೋ ನ್ಯೂಸ್  2019 ರಲ್ಲಿ ಪೋಸ್ಟ್ ಮಾಡಿದೆ. ಇದು ಬಾಂಗ್ಲಾದೇಶದಲ್ಲಿ ರಸ್ತೆಯಲ್ಲಿ ನಮಾಜ್‌ ಮಾಡುವುದನ್ನು ಅಪರಾಧ ಎಂದು ನೋಡುವುದಿಲ್ಲ ಎಂದು ಸಾಬೀತು ಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕಾಗಿ ಇಮಾಮ್ ಅವರನ್ನು ಬಂಧಿಸಲಾಗಿದೆ ಎಂಬುದು ಸುಳ್ಳು. ವಾಸ್ತವವಾಗಿ ಬಾಂಗ್ಲಾದೇಶದಲ್ಲಿ ರಸ್ತೆಯಲ್ಲಿ ನಮಾಜ್‌ ಮಾಡುವುದನ್ನು ತಪ್ಪು ಎಂದಾಗಲಿ ಅಪರಾಧ ಎಂದಾಗಲಿ ಭಾವಿಸುವುದಿಲ್ಲ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights