FACT CHECK | ಐಶ್ವರ್ಯಾ ರೈಗೆ ಡಿವೋರ್ಸ್ ನೀಡಿದ್ರಾ ಅಭಿಷೇಕ್ ಬಚ್ಚನ್ ! ವೈರಲ್ ವಿಡಿಯೋದ ಅಸಲೀಯತ್ತೇನು?

ಕಳೆದ ಒಂದು ವರ್ಷದಿಂದ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಅವರ ಮಧ್ಯೆ ಸರಿ ಇಲ್ಲ, ಇವರಿಬ್ಬರು ಡಿವೋರ್ಸ್ ತಗೊಳ್ತಿದ್ದಾರೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ಅನಂತ್ ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ರೈ ಅವರು ಮಗಳ ಜೊತೆ ಬಂದು ಕ್ಯಾಮರಾಕ್ಕೆ ಪೋಸ್ ಕೊಟ್ಟರೆ, ಇಡೀ ಬಚ್ಚನ್ ಕುಟುಂಬ ಏಕಕಾಲಕ್ಕೆ ಕ್ಯಾಮರಾ ಮುಂದೆ ಬಂದಿತ್ತು. ಈ ವದಂತಿ ಬಗ್ಗೆ ಅಭಿಷೇಕ್ ಅವರು ಮೌನ ಮುರಿದಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಬಾಲಿವುಡ್ ತಾರಾ ದಂಪತಿ ಐಶ್ವರ್ಯ ರೈ ಬಚ್ಚನ್‌ರೊಂದಿಗೆ ಅಭಿಷೇಕ್ ಬಚ್ಚನ್ ವಿಚ್ಛೇದನ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಡಿವೋರ್ಸ್ ಗೆ ಸಂಬಂಧಿತ ಪೋಸ್ಟ್‌ಗೆ ಅಭಿಷೇಕ್ ಬಚ್ಚನ್ ರಿಯಾಕ್ಟ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯ ರೈ ಬಚ್ಚನ್‌ರೊಂದಿಗೆ ಅಭಿಷೇಕ್ ಬಚ್ಚನ್ ನಡುವೆ ವಿರಸ ಮೂಡಿ ವಿಚ್ಚೇದನ ಪಡೆಯಲಾಗಿದೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ ಎನ್ನಲಾದ ವಿಡಿಯೋ ಡೀಪ್ ಫೇಕ್​ ತಂತ್ರಜ್ಞಾನ ಬಳಸಿ ತಯಾರಿಸಿದ್ದು ಎಂಬುದು ಸಾಬೀತಾಗಿದ್ದು, 2022ರಲ್ಲಿ ‘ನನ್ಹಿ ಕಲಿ’ ಎಂಬ NGO ಗಾಗಿ ಅಭಿಷೇಕ್ ಪ್ರಚಾರ ಮಾಡಿದ್ದ ವಿಡಿಯೋವನ್ನು AI(ಕೃತಕ ತಂತ್ರಜ್ಞಾನ) ಬಳಸಿ ಧ್ವನಿಯನ್ನು ನಕಲು ಮಾಡಿ ತಿರುಚಲಾಗಿದೆ. ವಿಚ್ಚೇದನ ಪಡೆಯುತ್ತಿದೇವೆ ಎಂದು ಹೇಳಿರುವ ವಿಡಿಯೋ ನಕಲಿ ಎಂಬುದು ಸ್ಪಷ್ಟವಾಗಿದೆ.

 

View this post on Instagram

 

A post shared by Project Nanhi Kali (@nanhikali)

‘ನನ್ಹಿ ಕಲಿ’ ಎಂಬ ಎನ್‌ಜಿಓ ಸಂಸ್ಥೆಯೊಂದರ ಪ್ರಚಾರದ ಭಾಗವಾಗಿ ಅಭಿಷೇಕ್ ಬಚ್ಚನ್‌ರವರು ಜನರಿಗೆ ಫೋಟೋ ಫ್ರೇಮ್‌ಗಳನ್ನು ಖರೀದಿಸಲು ಕರೆ ನೀಡುತ್ತಿದ್ದು, ವಿಡಿಯೋದಲ್ಲಿ ‘ನನ್ಹಿ ಕಲಿ’ ಹೇಗೆ ಭಾರತದಲ್ಲಿ ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂಬುದನ್ನು ವಿವರಿಸಿದ್ದರು. ಈ ವಿಡಿಯೋವನ್ನು 2022ರ ನವೆಂಬರ್ 7ರಂದು ‘ನನ್ಹಿ ಕಲಿ’ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿತ್ತು.

ಇದೇ ವಿಡಿಯೋವನ್ನು ಬಳಸಿ ವಿಚ್ಛೇದನದ ಬಗ್ಗೆ ಡೀಪ್ ಫೇಕ್ ವಿಡಿಯೋ ತಯಾರಿಸಲಾಗಿದ್ದು ಅಭಿಷೇಕ್ ಹಿಂದೆ ಇರುವ ದೀಪದ ಚಿತ್ರವು ವಿಡಿಯೋ ತಿರುಚಿರುವುದಕ್ಕೆ ಸಾಕ್ಷಿ ಆಗಿದೆ. ಈ ಹಿಂದೆ ನಟಿ  ಕಾಜಲ್, ಖ್ಯಾತ ನಟ ಅಮಿತಾಬ್‌ ಬಚ್ಚನ್ ಸೇರಿದಂತೆ ಇತರೆ ಬಾಲಿವುಡ್ ತಾರೆಗಳು ಕೂಡ ತಮ್ಮ ಬಗ್ಗೆ ಡೀಪ್ ಫೇಕ್ ವಿಡಿಯೋಗಳು ಹರಿದಾಡುತ್ತಿರುವ ಬಗ್ಗೆ ಆಗಾಗ ಮಾತಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಭಿಷೇಕ್ ಬಚ್ಚನ್ 2022ರಲ್ಲಿ ‘ನನ್ಹಿ ಕಲಿ’ ಎಂಬ NGO ಗಾಗಿ ಪ್ರಚಾರ ಮಾಡಿದ್ದ ವಿಡಿಯೋವನ್ನು ತಿರುಚಿ, ನಕಲು ಮಾಡಿ ಐಶ್ವರ್ಯ ರೈ ಬಚ್ಚನ್‌ರೊಂದಿಗೆ ಅಭಿಷೇಕ್ ಬಚ್ಚನ್ ವಿಚ್ಛೇದನ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿತ್ತಿರುವಂತೆ ಎಡಿಟ್‌ ಮಾಡಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಂಗ್ಲಾದಲ್ಲಿ ಕರೆ ನೀಡಲಾಗಿದೆ ಎಂಬುದು ಹಳೆಯ ಸುದ್ದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights