FACT CHECK | ರಾಹುಲ್‌ ಗಾಂಧಿ ಭಾರತದವರೇ ? ಅಥವಾ ಪಾಕಿಸ್ತಾನದವರೇ? ಎಂಬ ಲೇಖನವನ್ನು USA ಪ್ರಕಟಿಸಿದೆಯೇ?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ಮಂಗಳವಾರ ಅವರು ವಾಷಿಂಗ್ಟನ್‌ನ ರೇಬರ್ನ್ ಹೌಸ್‌ನಲ್ಲಿ US ಕಾಂಗ್ರೆಸ್ ಸದಸ್ಯರನ್ನು ಭೇಟಿಯಾದರು. ಇದೇ ವೇಳೆ ರಾಹುಲ್ ಜೊತೆಗಿನ ಫೋಟೋದಲ್ಲಿ ಕಾಣಿಸಿಕೊಂಡ ವ್ಯಕ್ತಿಯೊಬ್ಬರಿಂದ ಸದ್ಯ ಭಾರೀ ವಿವಾದ ಸೃಷ್ಟಿಯಾಗಿದೆ. ಹೌದು ಆ ವ್ಯಕ್ತಿ ಬೇರಾರೂ ಅಲ್ಲ ಅಮೆರಿಕದ ಸಂಸದೆ ಇಲ್ಹಾನ್ ಒಮರ್. ಭಾರತ ವಿರೋಧಿ ಹೇಳಿಕೆಗಳಿಗೆ ಹೆಸರಾದ ಇಲ್ಹಾನ್ ಒಮರ್ ಪಾಕಿಸ್ತಾನದ ನೆಚ್ಚಿನ ವ್ಯಕ್ತಿ. ಅವರು ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಘೋಷಿಸಿದರು. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಇಲ್ಹಾನ್ ಒಮರ್ ವಿರೋಧಿಸಿದ್ದರು.

ಈ ಹಿನ್ನಲೆಯಲ್ಲಿ “ರಾಹುಲ್ ಗಾಂಧಿಯನ್ನು ಭಾರತದವರಾ? ಅಥವಾ ಪಾಕಿಸ್ತಾನದವರಾ ಎಂದು ಅಮೆರಿಕ ಪ್ರಜೆಗಳು ಪ್ರಶ್ನಿಸುತ್ತಿದ್ದಾರೆ ? ವಿದೇಶಿ ನೆಲದಲ್ಲಿ ನಿಂತು ತನ್ನ ದೇಶವನ್ನೆ ಜರಿಯುವ ಏಕೈಕ ವ್ಯಕ್ತಿ ಈತ. ಇಂತಹ ವ್ಯಕ್ತಿಯನ್ನು ಎಲ್ಲಿಯೂ ಸಿಗುವುದಿಲ್ಲ” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

Image

ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ರಾಹುಲ್ ಗಾಂಧಿ ಕುರಿತ ಲೇಖನದ ಪೇಪರ್‌ ಕ್ಲಿಪ್‌ನಲ್ಲಿ ಹಿಂದಿ ಭಾಷೆಯ ಸುದ್ದಿಗಳನ್ನು ಕಾಣಬಹುದು.  ಹಾಗಿದ್ದರೆ ಈ ಹೇಳಿಕೆಯನ್ನು ಒಳಗೊಂಡ ಸುದ್ದಿ ಪ್ರಕಟವಾಗಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ್ನು ಪರಿಶೀಲಿಸಲು, ಮಾಧ್ಯಮಗಳಲ್ಲಿ ಪ್ರಕಟಗೊಂಡ ಲೇಖನವನ್ನು ಸೂಕ್ಷ್ಮವಾಗಿ ಗಮನನಿಸಿದಾಗ ಅಕ್ಷರಗಳ ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸವನ್ನು ಕಾಣಬಹುದು.

The article about Rahul Gandhi was translated to English from Hindi and was not published in an American newspaper.

ವಾಸ್ತವವಾಗಿ ಇಲ್ಲಿ ಹಿಂದಿಯಲ್ಲಿ ಪ್ರಕಟಗೊಂಡ ಲೇಖನವನ್ನು ಟೂಲ್‌ಗಳ ಸಹಾಯದಿಂದ ಡಿಜಿಟಲ್ ಆಗಿ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. ರಾಹುಲ್ ಗಾಂಧಿ ಕುರಿತ ಲೇಖನವನ್ನು ಹಿಂದಿಯಿಂದ ಇಂಗ್ಲಿಷ್‌ಗೆ ಅನುವಾದಿಸಲಾಗಿದ್ದು, ಅಮೆರಿಕದ ಯಾವುದೇ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿಲ್ಲ. ಲೇಖನದಲ್ಲಿ  ಫಾಂಟ್ ಗಾತ್ರಗಳು ಮತ್ತು ಶೈಲಿಗಳು ಹೊಂದಿಕೆಯಾಗುವುದಿಲ್ಲ. ಮೇಲ್ನೋಟಕ್ಕೆ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಅಮೆರಿಕ ಲೇಖನ ಪ್ರಟಿಸಿದೆ ಎಂದು ಫೇಕ್‌ ನ್ಯೂಸ್‌ ಪ್ರಕಟಿಸಲಾಗಿದೆ.

“ಅಮೆರಿಕ ಪೂಜ್ ರಹೇ ಹೌಂ ಕಿ ರಾಹುಲ್ ಭಾರತ್ ಸೆ ಹ್ಯಾಂ ಯಾ ಪಾಕಿಸ್ತಾನ್ ಸೆ?” ಎಂಬ ಶೀರ್ಷಿಕೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ, ಸುದ್ದಿ ಲೇಖನದ ವೈರಲ್ ಚಿತ್ರವನ್ನು ಹಿಂದಿಯಲ್ಲಿ ಪೋಸ್ಟ್ ಮಾಡಲಾದ ಪೋಸ್ಟ್‌ಗಳನ್ನು ಟ್ವಿಟರ್‌ನಲ್ಲಿ ಕಂಡುಕೊಂಡಿದ್ದೇವೆ.  ಈ ಆವೃತ್ತಿಯಲ್ಲಿ ಯಾವುದೇ ವ್ಯತ್ಯಾಸಗಳ ಕಂಡುಬರುವುದಿಲ್ಲ. ಇದು ಮೂಲ ಲೇಖನವಾಗಿರಬಹುದು ಎಂದು ಸೂಚಿಸುತ್ತದೆ.

Image

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಬಗ್ಗೆ ಗಾಂಧಿಯವರ ವಿಮರ್ಶಾತ್ಮಕ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲುತ್ತದೆ, ಅವರು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ.ಇದಲ್ಲದೆ, ಸಭೆಯೊಂದರಲ್ಲಿ ಖಲಿಸ್ತಾನಿ ಪರ ಘೋಷಣೆಗಳು ಎದ್ದಾಗ ರಾಹುಲ್ ಗಾಂಧಿಗೆ ನಗು ಮತ್ತು ನಗು ತಡೆಯಲು ಸಾಧ್ಯವಾಗಲಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ. ರಾಹುಲ್ ಗಾಂಧಿ ಹೇಳಿಕೆ ಕುರಿತು ಆಡಳಿತರೂಢ ಬಿಜೆಪಿ ತ್ಇಕ್ಷಣವಾಗಿ ಪ್ರತಿಕ್ರಿಯಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾದ ಅಮೆರಿಕ ಪ್ರಜೆಗಳು ರಾಹುಲ್ ಗಾಂಧಿಯನ್ನು ಭಾರತದ ಪರವೋ ಪಾಕಿಸ್ತಾನದ ಪರವೋ ಎಂದು ಪ್ರಶ್ನಿಸಿದ್ದಾರೆ ಎಂಬಂತಹ ಯಾವುದೇ ವರದಿಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬೆಂಗಳೂರಿನ ರಾಜಾಜಿನಗರದಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಹುಲಿಯೊಂದು ಕಾಣಿಸಿಕೊಂಡಿದೆ ಎಂಬ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights