FACT CHECK | ದೇವರ ತೀರ್ಥವನ್ನು ಎಸೆದು ಕುಡಿದವರಂತೆ ನಟಿಸಿದ್ರಾ ಆಂಧ್ರ ಮಾಜಿ ಸಿಎಂ ? ಈ ಸ್ಟೋರಿ ಓದಿ

ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಆಡಳಿತದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ತುಪ್ಪದಲ್ಲಿ ಹಸುವಿನ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಾಡಿದ್ದ ಆರೋಪ ದೇಶಾದ್ಯಂತ ಚರ್ಚೆಯಾಗಿತ್ತು. ವೈಎಸ್‌ಆರ್‌ಸಿ ಈ ಆರೋಪವನ್ನು ತಳ್ಳಿಹಾಕಿದೆ. ಈ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೂಡಾ ಒತ್ತಾಯಿಸುತ್ತಿದೆ.

ಈ ನಡುವೆ ತೆಲುಗು ದೇಶಂ ಪಕ್ಷ (ಟಿಡಿಪಿ),  ವಿರೋಧ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ” ತಿರುಮಲದ ಲಡ್ಡು ಇವರಿಗೆ ವಾಸನೆ ಬರುತ್ತದೆ. ಇವರು ಮನೆಯಲ್ಲಿಯೇ ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಅಲ್ಲಿ ತೀರ್ಥವನ್ನು ಕೊಟ್ಟರೆ, ಕುಡಿದಂತೆ ನಟಿಸಿ, ಎಸೆಯುತ್ತಾರೆ. ಈ ಜಗನ್‌ ಮೋಹನ್‌ ರೆಡ್ಡಿ ಕಳೆದ 5 ವರ್ಷಗಳಿಂದ ದೇವರನ್ನು ಅಪವಿತ್ರಗೊಳಿಸಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ನೋಡಿದ ಹಿಂದೂ ಪರ ಸಂಘಟನೆಗಳು ಸೇರಿದಂತೆ ಹಲವು ಹಿಂದೂ ಪರ ಕಾರ್ಯಕರ್ತರು ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 14 ಜನವರಿ 2024 ರಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಂಕ್ರಾಂತಿ ಆಚರಣೆಯಲ್ಲಿ ಭಾಗವಹಿಸಿರುವ ಕುರಿತು ತೆಲುಗು ಸುದ್ದಿವಾಹಿನಿ ಸಾಕ್ಷಿ ಟಿವಿ ಪ್ರಸಾರ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ. ಇದರಲ್ಲಿ ಜಗನ್‌ ಮೋಹನ್‌ ರೆಡ್ಡಿ ತನ್ನ ಪತ್ನಿಯೊಂದಿಗೆ ಚರಣಾಮೃತವನ್ನು ಸ್ವೀಕರಿಸುವ ಮತ್ತು ಕುಡಿಯುತ್ತಿರುವ 2:58-ನಿಮಿಷದ ಪೂರ್ಣ ವಿಡಿಯೋವನ್ನು ನೋಡಬಹುದು.

ದಿ ಹಿಂದೂ ವರದಿಯ ಪ್ರಕಾರ , ಅಂದಿನ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಪತ್ನಿ ವೈಎಸ್ ಭಾರತಿ ಅವರ ಜೊತೆ 14 ಜನವರಿ 2024 ರಂದು ತಾಡೆಪಲ್ಲಿಯಲ್ಲಿರುವ ಕಚೇರಿಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ಭಾಗವಹಿಸಿದ್ದರು. ದಂಪತಿಗಳು ಗೋಶಾಲೆಯಲ್ಲಿ ಹಸುಗಳನ್ನು ಪೂಜಿಸಿದರು ಎಂದು ವರದಿಯಲ್ಲಿ ಸ್ಪಷ್ಟ ಪಡಿಸಲಾಗಿದೆ. ಇದರ ಜೊತೆಗೆ ವಿನಾಯಕ, ವೆಂಕಟೇಶ್ವರ ಸ್ವಾಮಿ ಮತ್ತು ಕನಕದುರ್ಗಾ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು ಎಂದು ಉಲ್ಲೇಖಿಸಲಾಗಿದೆ.

 

 

 

 

 

 

 

 

 

 

 

 

ಇನ್ನು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ  YSR ಕಾಂಗ್ರೆಸ್ ಪಕ್ಷವು ಟಿಡಿಪಿಯ ಹೇಳಿಕೆಯನ್ನು ಖಂಡಿಸಿದೆ ಮತ್ತು ತಮ್ಮ ಅಧಿಕೃತ X ಖಾತೆಯಿಂದ ಮೂಲ ಮತ್ತು ದೀರ್ಘ ಆವೃತ್ತಿಯಲ್ಲಿ ಕಂಡು ಬಂದ ನೈಜ ವಿಡಿಯೋವನ್ನು ಹಂಚಿಕೊಂಡು ಟಿಡಿಪಿಗೆ ತಿರುಗೇಟು ನೀಡಿದೆ.  YSR ಕಾಂಗ್ರೆಸ್ ಪಕ್ಷ ಹಂಚಿಕೊಂಡ ಪೋಸ್ಟ್‌ನಲ್ಲಿ ಜಗನ್‌ ಮೋಹನ್‌ ರೆಡ್ಡಿ ತೀರ್ಥ ಸೇವನೆ ಮಾಡುತ್ತಿರುವ ಸ್ಪಷ್ಟ ಚಿತ್ರಣವನ್ನು ನೋಡಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ತೀರ್ಥ ಸ್ವೀಕರಿಸಿ ಅದನ್ನು ಕುಡಿಯದೆ ಎಸೆದಿದ್ದಾರೆ. ಇವರು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಲು ಎಡಿಟ್‌ ಮಾಡಿದ ವಿಡಿಯೋವನ್ನು ಟಿಡಿಪಿ ಪಕ್ಷವು ಹಂಚಿಕೊಂಡಿದೆ. ವಾಸ್ತವವಾಗಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ತೀರ್ಥ ಸೇವಸೆ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಜ್ಯಸಭಾ ಸದಸ್ಯೆ ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights