ಅಫ್ಘಾನ್ ಮಾಜಿ ರಾಯಭಾರಿ ನಜೀಬುಲ್ಲಾ ಅಲಿಖಿಲ್ ಮಗಳ ಅಪಹರಣ; ಭಾರತದ ಹೇಳಿಕೆ ತಿರಸ್ಕರಿಸಿದ ಪಾಕ್‌!

ಇಸ್ಲಾಮಾಬಾದ್‌ನಲ್ಲಿ ಅಫ್ಘಾನಿಸ್ತಾನ ಮಾಜಿ ರಾಯಭಾರಿಯವರ ಮಗಳನ್ನು ಅಪಹರಿಸಿರುವ ಕುರಿತು ಭಾರತ ನೀಡಿರುವ ಹೇಳಿಕೆಯನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ.

ಕಳೆದ ವಾರ ಇಸ್ಲಾಮಾಬಾದ್‌ನಲ್ಲಿ ಅಫಘಾನ್ ರಾಯಭಾರಿ ಮಗಳನ್ನು ಅಪಹರಿಸಿದ್ದು ಅತ್ಯಂತ ಆಘಾತಕಾರಿ ಘಟನೆ ಎಂದು ಭಾರತದ ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ಹೇಳಿತ್ತು.

ಅಫ್ಘಾನ್ ರಾಯಭಾರಿ ನಜೀಬುಲ್ಲಾ ಅಲಿಖಿಲ್ ಅವರ 26 ವರ್ಷದ ಮಗಳು ಸಿಲ್ಸಿಲಾ ಅಲಿಖಿಲ್ ಅವರನ್ನು ಕಳೆದ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಅಪಹರಿಸಿ ಹಲವು ಗಂಟೆಗಳ ಕಾಲ ಬಂಧಿಸಿದ್ದರು.

ಈ ಘಟನೆಯ ಬಗ್ಗೆ ಭಾರತೀಯ ಎಂಇಎ ಮಾಡಿದ ಟೀಕೆಯನ್ನು ಅನಪೇಕ್ಷಿತ ಮತ್ತು ಅನಗತ್ಯ ಎಂದು ಹೇಳಿರುವ ಪಾಕಿಸ್ಥಾನ, ಈ ವಿಷಯದಲ್ಲಿ ಭಾರತಕ್ಕೆ ಯಾವುದೇ ಸ್ಥಾನಮಾನವಿಲ್ಲ” ಎಂದು ವಿದೇಶಾಂಗ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಮಂಗಳವಾರ ಅಲಿಖಿಲ್ ಅವರನ್ನು ಅಪಹರಿಸಲಾಗಿಲ್ಲ ಎಂಬ ಪೊಲೀಸರ ಹೇಳಿಕೆಯನ್ನು ಪುನರುಚ್ಚರಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಹೊತ್ತಿಉರಿದ ದಕ್ಷಿಣ ಆಫ್ರಿಕಾ; ದೇಶಕ್ಕೆ ಶತಕೋಟಿ ನಷ್ಟ: ಅಧ್ಯಕ್ಷ ಸಿರಿಲ್ ರಾಮಾಫೋಸಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights