FACT CHECK | ಕುರಾನ್ ಓದುತ್ತಿರುವ ವ್ಯಕ್ತಿ ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅಲ್ಲ ! ಮತ್ತ್ಯಾರು ?

ಪೋರ್ಚುಗೀಸ್‌ನ ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಕುರ್‌ಆನ್‌ ಅನ್ನು ಓದುತ್ತಿದ್ದಾರೆ ಮತ್ತು ಅವರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬರು ಕುರ್‌ಆನ್‌ ಗ್ರಂಥವನ್ನು ಓದುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ   ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಪೋಸ್ಟ್‌ ಅನ್ನು ನೋಡಿದ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ತಮ್ಮ ಎಕ್ಸ್‌ ಖಾತೆಗಳಲ್ಲಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಲವರು ಮುಸ್ಲಿಂ ವಿರೋಧಿ ಬರಹಗಳೊಂದಿಗೆ  ವಿಡಿಯೋವನ್ನು ಹಂಚಿಕೊಂಡು, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ವಿವಿಧ ರೀತಿಯ ಅಭಿಪ್ರಾಯಗಳು ಈ ವಿಡಿಯೋ ಬಗ್ಗೆ ಅಂತರ್ಜಾಲದಲ್ಲಿ ವ್ಯಕ್ತವಾಗುತ್ತಿದೆ.

ಹಾಗಾಗಿ ವೈರಲ್ ವಿಡಿಯೋ ದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಪೋರ್ಚುಗೀಸ್‌ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ  ರೊನಾಲ್ಡೋ ಅಲ್ಲ ಎಂದು ಕೆಲವರು ಪ್ರತಿಕ್ರಿಸಿರುವುದನ್ನು ನೋಡಬಹುದು. ಪ್ರಸಿದ್ದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪವಿತ್ರ ಕುರಾನ್ ಓದುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿಲ್ಲ. ಇದು ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಹೋಲುವ U.K. ಮೂಲದ ಇರಾಕಿ ಪ್ರಜೆಯನ್ನು ತೋರಿಸುತ್ತದೆ.

ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಅನೇಕ ಪ್ರತಿಕ್ರಿಯೆಗಳಲ್ಲಿ, ಈ ವ್ಯಕ್ತಿ ರೊನಾಲ್ಡೋ ಅಲ್ಲ, ಅವರ ಹೆಸರು ಬಿವರ್ ಅಬ್ದುಲ್ಲಾ ಎಂದು ಉಲ್ಳೇಖಿಸಿದ್ದಾರೆ.

ಇದರ ಆಧಾರದ ಮೇಲೆ ಸರ್ಚ್ ಮಾಡಿದಾಗ ಅನೇಕ ಸುದ್ದಿ ವರದಿಗಳು ಲಭ್ಯವಾಗಿವೆ. ಅದರಲ್ಲಿ ಬೀವರ್‌ ಅಬ್ದುಲ್ಲಾ ಅವರು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ರೀತಿ ಇದ್ದಾರೆ. ಅದಕ್ಕಾಗಿ ಅವರು ಹೆಚ್ಚು ಜನಪ್ರಿಯರಾಗಿದ್ದಾರೆ ಮತ್ತು ಅವರು ಇಂಗ್ಲೆಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರಿಗೆ ಸಂಬಂಧಪಟ್ಟ ಹಲವು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲದಲ್ಲಿ ಲಭ್ಯವಿದ್ದು ಅಲ್ಲಿಯೂ ಕೂಡ ಪರಿಶೀಲನೆ ನಡೆಸಬಹುದಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ, ಬೀವರ್‌ ಅಬ್ದುಲ್ಲಾ ಎಂಬ ಇಂಗ್ಲೆಂಡ್‌ ಮೂಲದ ಇರಾಕಿ ಪ್ರಜೆಯೊಬ್ಬರು ಕುರಾನ್‌ ಪುಸ್ತಕವನ್ನು ಓದುತ್ತಿರುವ ವಿಡಿಯೋವನ್ನು, ಪೋರ್ಚುಗೀಸ್‌ನ ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಕುರ್‌ಆನ್‌ ಪುಸ್ತಕವನ್ನು ಓದುತ್ತಿದ್ದಾರೆ ಮತ್ತು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇರಾನ್ ನಾಯಕ ಖಮೇನಿ ಪುಟ್ಟ ಬಾಲಕಿಗೆ ಚುಂಬಿಸುತ್ತಿರುವಂತೆ ಎಡಿಟ್ ಮಾಡಿದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights