FACT CHECK | ನಟ ವಿಜಯ್ ಸೇತುಪತಿ ಹಂಚಿಕೊಂಡ ಕೋಟ್ ರತನ್ ಟಾಟಾ ಹೇಳಿಕೆಯಲ್ಲ! ಫೇಕ್ ಪೋಸ್ಟ್ ಎಂದ ನೆಟ್ಟಿಗರು
ದೇಶದ ಅತಿ ದೊಡ್ಡ ಬಿಸಿನೆಸ್ ಟ್ರಸ್ಟ್ ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್ ಟಾಟಾ ತಮ್ಮ 86ನೇ ವಯಸ್ಸಿಗೆ ವಯೋಸಹಜ ಕಾಯಿಲೆಯಿಂದ ಇತ್ತೀಚೆಗೆ ನಿಧನರಾಗಿದ್ದಾರೆ. ಭಾರತ ಮಾತ್ರವಲ್ಲ, ಇಡೀ ಪ್ರಪಂಚವೇ ಹೆಮ್ಮಪಡುವ ವ್ಯಕ್ತಿಯಾಗಿದ್ದರು ರತನ್ ಟಾಟಾ. ರತನ್ ಟಾಟಾ ಇನ್ನಿಲ್ಲ ನಿಜ. ಆದರೆ ಅವರ ಮಾತು ಎಂದೆಂದಿಗೂ ಜೀವಂತ. ಯುವಕರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿ ಅವರನ್ನು ಪ್ರೋತ್ಸವಾಹಿಸಿದವರು ರತನ್. ಆದರೆ, ಇದೀಗ ರತನ್ ಟಾಟಾ ಹೇಳಿದ್ದಾರೆ ಎನ್ನಲಾಗುತ್ತಿರುವ ಕೋಟ್ ವೈರಲ್ ಆಗುತ್ತಿದೆ.
ವಿಜಯ್ ಸೇತುಪತಿ ಅವರು ರತನ್ ಟಾಟಾ ಹೇಳಿದ್ದಾರೆ ಎನ್ನಲದ ಕೋಟ್‌ವೊಂದನ್ನು ಹಂಚಿಕೊಂಡು ಶ್ರದ್ದಾಂಜಲಿ ಸೂಚಿಸಿದ್ದಾರೆ. ‘‘ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ’’. ಹೀಗೆ ರತನ್ ಟಾಟಾ ಹೇಳಿದ್ದರು ಎಂದು ತಮಿಳು ನಟ ವಿಜಯ್ ಸೇತುಪತಿ ತಮ್ಮ ಎಕ್ಸ್ ಖಾತೆಲ್ಲಿ ಹಂಚಿಕೊಳ್ಳಲಾಗುತ್ತಿದೆ.
Rest in peace sir
#RatanTata pic.twitter.com/1tSMrFXjTL— VijaySethupathi (@VijaySethuOffl) October 10, 2024
ನಟ ವಿಜಯ್ ಸೇತುಪತಿ ಹಂಚಿಕೊಂಡಿರುವ ರತನ್ ಟಾಟಾ ಹೇಳಿದ್ದಾರೆ ಎನ್ನಲಾದ ಕೋಟ್‌ವೊಂದನ್ನು ವಾಸ್ತವವಾಗಿ ರತನ್ ಟಾಟಾ ಹೇಳಿಲ್ಲ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸುತ್ತಾ, ಸೇತುಪತಿಯವರನ್ನು ನೀವು ಫೇಕ್ ಸಾಲುಗಳನ್ನು ಟಾಟಾ ಅವರದ್ದು ಎಂದು ಹಂಚಿಕೊಂಡಿದ್ದೀರಿ ಎಂದು ವ್ಯಂಗ್ಯ ಮಾಡಿದ್ದಾರೆ.
Now it’s perfect pic.twitter.com/DxE4rGsd2K
— Vigneshwaran (@Iamvicky099) October 11, 2024
ಉದ್ಯಮಿ ರತನ್ ಟಾಟಾ ಹೆಸರಿನಲ್ಲಿ ಹಲವು ಕೋಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿರುತ್ತವೆ ಅಂತಹ ಕೋಟ್‌ಗಳನ್ನು ಹಂಚಿಕೊಂಡ ಪೋಸ್ಟ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
‘‘ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ’’. ಹೀಗೆ ರತನ್ ಟಾಟಾ ಹೇಳಿದ್ದರು ಎಂದು ಹೈದರಾಬಾದ್ ಪೋಸ್ಟ್ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.
ಹಾಗಿದ್ದರೆ ತಮಿಳು ನಟ ವಿಜಯ್ ಸೇತುಪತಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಹಂಚಿಕೊಂಡತೆ ” ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ” ಎಂಬ ಕೋಟ್‌ಅನ್ನು ರತನ್ ಟಾಟಾ ಹೇಳಿದ್ದಾರೆಂದು ಹಂಚಿಕೊಳ್ಳುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ರತನ್ ಟಾಟಾ ಹೇಳಿದ್ದಾರೆ ಎನ್ನಲಾದ ಕೊಟೇಶನನ್ನು ವಾಸ್ತವವಾಗಿ ಅವರೇ ಹೇಳಿದ್ದಾರೆಯೇ ಎಂದು ಪರಿಶೀಲಿಸಲು ವೈರಲ್ ಆಗಿರುವ ಕೋಟ್ ಅನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ರತನ್ ಟಾಟಾ ಅವರೇ ಈ ರೀತಿ ಹೇಳಿದ್ದಾರೆ ಎಂಬ ಅನೇಕ ಫೋಟೋಗಳು ಲಭ್ಯವಾಗಿವೆ. ಆದರೆ, ಅದಕ್ಕೆ ಭಿನ್ನವಾದ ಮತ್ತೊಂದು ವಿಡಿಯೋ ಲಭ್ಯವಾಗಿದ್ದು ಲರ್ನ್ ವಿಥ್ ಜಸ್ಪಾಲ್ ಎಂಬ ಯೂಟ್ಯೂಬ್ ಖಾತೆಯಲ್ಲಿ ವಿದೇಶಿ ಆ್ಯಂಕರ್ ಒಬ್ಬರು ರತನ್ ಟಾಟಾ ಅವರನ್ನು ಸಂದರ್ಶನ ಮಾಡುವ ವಿಡಿಯೋ ಇದಾಗಿದ್ದು. ಆಗಸ್ಟ್ 19, 2022 ರಂದು ಅಪ್ಲೋಡ್ ಮಾಡಲಾಗಿದೆ.
https://www.youtube.com/watch?v=U05yCm36uCU&embeds_referring_euri=https%3A%2F%2Ftv9kannada.com%2F&source_ve_path=MjM4NTE
ಈ ವಿಡಿಯೋ ಪೋಸ್ಟ್‌ನಲ್ಲಿ ಆ್ಯಂಕರ್ ರತನ್ ಟಾಟಾ ಅವರನ್ನು ಕುರಿತು, ‘ನೀವು ಈ ಹಿಂದೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ ಎಂದು ಹೇಳಿದ್ದೀರಿ, ಈ ರೀತಿಯ ವಾಕ್ಯ ನಿಮಗೆ ಹೇಗೆ ಬರುತ್ತದೆ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರತನ್ ಟಾಟಾ, ‘ಕ್ಷಮಿಸಿ ನಾನು ನಿಮಗೆ ಬೇಸರ ಮಾಡುತ್ತಿದ್ದೇನೆ, ಟ್ವಿಟ್ಟರ್ ಮತ್ತು ಫೇಸ್ಬುಕ್ ನಾನು ಹೇಳಿದ್ದೇನೆ ಎಂದು ಆ ಕೋಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ನಾನು ಎಂದಿಗೂ ಆ ರೀತಿಯ ಸ್ಟೇಟ್ಮೆಂಟ್ ಕೊಟ್ಟಿಲ್ಲ’ ಎಂದು ಹೇಳಿದ್ದಾರೆ.
“I never said that!”: Ratan Tata on a viral quotehttps://t.co/SXPEurOzzs pic.twitter.com/PS89o1qU83
— The Times Of India (@timesofindia) February 4, 2022
ಅಂದರೆ ನಟ ವಿಜಯ್ ಸೇತುಪತಿ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳು ರತನ್ ಟಾಟಾ ನಿಧನರಾದ ಬಳಿಕ ಅವರ ಸಾವಿಗೆ ಸಂತಾಪ ಸೂಚಕವಾಗಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ರತನ್ ಟಾಟಾ ಅವರದ್ದು ಎಂದು ಕೋಟ್ ಮಾಡಿರುವ ಹೇಳಿಕೆ ವಾಸ್ತವವಾಗಿ ರತನ್ ಟಾಟಾ ಹೇಳಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾ ಹೇಳಿದ್ದಾರೆ ಎನ್ನಲಾಗುತ್ತಿರುವ ಅನೇಕ ಕೋಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ವಾಸ್ತವವಾಗಿ ಅದನ್ನು ರತನ್ ಟಾಟಾರವರೇ ಹೇಳಿದ್ದಾರೆ ಎನ್ನಲಾಗದು. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿ. ಯಾಕೆಂದರೆ ಸಂಬಂಧವಿಲ್ಲದ ಸಾಲುಗಳನ್ನು ರತನ್ ಟಾಟಾ ಹೆಸರಿನಲ್ಲಿ ಹಂಚಿಕೆಯಾಗಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೆ

