FACT CHECK | ದಲಿತ ಹೆಣ್ಣು ಮಕ್ಕಳ ಬಗ್ಗೆ ಗೋಳ್ವಾಲ್ಕರ್ ತಮ್ಮ ಪುಸ್ತಕದಲ್ಲಿ ಈ ರೀತಿ ಹೇಳಿಲ್ಲ
ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು” ಎಂದು ಎಂ.ಎಸ್ ಗೋಳ್ವಾಲ್ಕರ್‌ರವರು ತಮ್ಮ “ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು, ನಿಜವಾಗಿಯೂ ಎಂ.ಎಸ್ ಗೋಳ್ವಾಲ್ಕರ್ ತಮ್ಮ ಪುಸ್ತಕದಲ್ಲಿ ಈ ರೀತಿ ಹೇಳಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳನ್ನು ಪರಿಶೀಲಿಸಲು ಎಂ.ಎಸ್ ಗೋಳ್ವಾಲ್ಕರ್‌ರವರ “ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು ಎಂದು ಹೇಳಿರುವುದು ನಿಜವೇ ಎಂದು ಪರಿಶೀಲಿಸಿದಾಗ, ಅಂತಹ ಪ್ರಸ್ತಾಪಗಳನ್ನು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಾಸ್ತವವಾಗಿ ಈ ಪುಸ್ತಕವು ಹಿಂದೂ ಸಮಾಜ, ರಾಷ್ಟ್ರೀಯತೆ ಮತ್ತು ಸಾಮಾಜಿಕ ರಚನೆಗಳ ವಿಮರ್ಶೆಗಳ ಮೇಲೆ ಕೇಂದ್ರೀಕರಿಸುತ್ತದೆ. ಎಡಿಟ್ ಮಾಡಿ ತಿರುಚಲಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಇದರಿಂದ ದೃಢವಾಗಿದೆ.
ನಾವು MSGolwalkar ಅವರ ‘ಬಂಚ್ ಆಫ್ ಥಾಟ್ಸ್’ ಅನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ ಮತ್ತು ಇದರಲ್ಲಿ OBC, SC, ಅಥವಾ ST ಸಮುದಾಯಗಳ ಹುಡುಗಿಯರನ್ನು ಪ್ರೀತಿಯ ಸೋಗಿನಲ್ಲಿ ಬಲೆಗೆ ಹಾಕಿಕೊಂಡು ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು ಎಂದು ಸೂಚಿಸುವ ಯಾವುದೇ ಹೇಳಿಕೆ ಕಂಡುಬಂದಿಲ್ಲ. ಅಲ್ಲದೇ ಈ ಪುಸ್ತಕವು ನೇರವಾಗಿ ಅಥವಾ ಪರೋಕ್ಷವಾಗಿ ಅಂತಹ ವಿಚಾರಗಳನ್ನು ಅನುಮೋದಿಸುವುದಿಲ್ಲ. ಬದಲಾಗಿ, ಎಂ.ಎಸ್ ಗೋಳ್ವಾಲ್ಕರ್ ರವರ ಚರ್ಚೆಗಳು ಹಿಂದೂ ಸಮಾಜದ ವಿವಿಧ ಅಂಶಗಳು, ರಾಷ್ಟ್ರೀಯತೆ ಮತ್ತು ಕೆಲವು ಸಾಮಾಜಿಕ ರಚನೆಗಳು ಮತ್ತು ಧಾರ್ಮಿಕ ಪರಿವರ್ತನೆಗಳ ವಿಮರ್ಶೆಗಳ ಮೇಲೆ ಕೇಂದ್ರೀಕರಿಸುತ್ತವೆ.

2018ರ ಸೆಪ್ಟೆಂಬರ್‌ನಲ್ಲಿ , ಮಾಧ್ಯಮ ವರದಿಗಳು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗೋಲ್ವಾಲ್ಕರ್‌ರ ಬಂಚ್ ಆಫ್ ಥಾಟ್ಸ್‌ನ ಅಂಶಗಳನ್ನು ಉದ್ದೇಶಿಸಿ ಮಾತನಾಡಿದ್ದನ್ನು ಉಲ್ಲೇಖಿಸಿದ್ದು, “ಬಂಚ್ ಆಫ್ ಥಾಟ್ಸ್” ಇದು ನಿರ್ದಿಷ್ಟ ಸಂದರ್ಭದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಮತ್ತು ಶಾಶ್ವತವಾಗಿ ಮಾನ್ಯವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮತ್ತು ಬಂಚ್ ಆಫ್ ಥಾಟ್ಸ್ ನ “ಕೆಲವು ಆಯ್ದ ಭಾಗಗಳನ್ನು ಮಾತ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮಾನ್ಯವೆಂದು ಅಂಗೀಕರಿಸುತ್ತದೆ” ಎಂದು ಭಾಗವತ್ ಹೇಳಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಎಂ.ಎಸ್ ಗೋಳ್ವಾಲ್ಕರ್‌ರವರು ತಮ್ಮ“ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಆದರೆ ಪುಸ್ತಕದಲ್ಲಿ ಈ ರೀತಿ ಬರೆಯಲಾಗಿದೆ ಎಂದು ಎಡಿಟ್ ಮಾಡಿದ ಫೋಟೊವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಡ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೇಜ್ರಿವಾಲ್‌ನನ್ನು ದೆಹಲಿಯಿಂದ ಓಡಿಸಿ ಎಂದು ಆಟೋದ ಮೇಲೆ ಬರೆದಿರುವುದು ನಿಜವೇ?

