FACT CHECK | ತಾಜ್ ಮಹಲ್ ನಿರ್ಮಾಣ ಹಂತದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಪ್ರತಿ ವರ್ಷ ನವೆಂಬರ್ 19 ರಿಂದ ನವೆಂಬರ್ 25 ಅನ್ನು ವಿಶ್ವ ಪರಂಪರೆಯ ಸಪ್ತಾಹ ಎಂದು  ಆಚರಿಸಲಾಗುತ್ತದೆ. ಈ ಆಚರಣೆಯ ಭಾಗವಾಗಿ, ಪ್ರವಾಸಿಗರು ನವೆಂಬರ್ 19, 2024 ರಂದು ತಾಜ್ ಮಹಲ್, ಆಗ್ರಾ ಕೋಟೆ, ಫತೇಪುರ್ ಸಿಕ್ರಿಯಂತಹ ಐತಿಹಾಸಿಕ ಸ್ಥಳಗಳಿಗೆ  ಭೇಟಿ ನೀಡಲವ ಭಾರತೀಯರು ಮತ್ತು ವಿದೇಶಿಯರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ.

ಇದೀಗ ಈ ತಾಜ್ ಮಹಲ್ ನಿರ್ಮಾಣ ಪ್ರಕ್ರಿಯೆಯ ದಾಖಲೀಕರಣವನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವು ಯೂಟ್ಯೂಬ್ ಬಳಕೆದಾರರು ಈ ವಿಡಿಯೋವನ್ನು ತಾಜ್ ಮಹಲ್ ನಿರ್ಮಾಣದ ಕಥೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ತಾಜ್ ಮಹಲ್ ನಿರ್ಮಾಣ ಪ್ರಕ್ರಿಯೆಯ ದಾಖಲೀಕರಣವನ್ನು ತೋರಿಸುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವನ್ನು AI ನಿಂದ ರಚಿಸಲಾಗಿದೆ, ತಾಜ್ ಮಹಲ್ ನಿರ್ಮಾಣದ ನಿಜವಾದ ವಿಡಿಯೋ ಇದಲ್ಲಎಂಬ ಮಾಹಿತಿ ಲಭ್ಯವಾಗಿದೆ.

ವಿಡಿಯೋದ ಪೂರ್ಣ ಮಾಹಿತಿ ತಿಳಿಯಲು ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಡಿಯೋವನ್ನು AI ನಿಂದ ನಿರ್ಮಿಸಲಾಗಿದೆ ಎಂದು ಹಲವಾರು ಪ್ರಮುಖ ಮಾಧ್ಯಮಗಳು ಮಾಡಿದ ವರದಿ  ಲಭ್ಯವಾಗಿದೆ. ಟಿವಿ9 ತೆಲುಗು ಕೂಡ ತನ್ನ ಎಕ್ಸ್ ಖಾತೆಯಲ್ಲಿ ಇದು ಎಐ ರಚಿತ ವಿಡಿಯೋ ಎಂದು ಪೋಸ್ಟ್ ಮಾಡಿದೆ.

ವರದಿಗಳ ಪ್ರಕಾರ, ತಾಜ್ ಮಹಲ್ ನಿರ್ಮಾಣವನ್ನು ಪೂರ್ಣಗೊಳಿಸಲು 22 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ AI ಈ ನಿರ್ಮಾಣಕ್ಕಾಗಿ ಕೇವಲ 54 ಸೆಕೆಂಡುಗಳಲ್ಲಿ ದೃಶ್ಯೀಕರಿಸಿದೆ. ಇಲ್ಲಿ ಸಾವಿರಾರು ಕಾರ್ಮಿಕರು ಹಗಲು ರಾತ್ರಿ ಕೆಲಸ ಮಾಡಿದರು. ಅಂದಿನ ದಿನಗಳಲ್ಲಿ ಅಂತಹ ಪವಾಡವನ್ನು ನಿರ್ಮಿಸುವುದು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ವಿಡಿಯೋ ತೋರಿಸುತ್ತದೆ. ಹೆಚ್ಚಿನ ಹುಡುಕಾಟ ನಡೆಸಿದಾಗ, ನವೆಂಬರ್ 3, 2024 ರಂದು ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ವಿಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ. ‘ಆಗ್ರಾ ನಗರದಲ್ಲಿ ತಾಜ್ ಮಹಲ್ ನಿರ್ಮಾಣ’ ಎಂಬ ಶೀರ್ಷಿಕೆಯ AI- ರಚಿತವಾದ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್ ಅಡಿಯಲ್ಲಿರುವ ಕಾಮೆಂಟ್‌ಗಳನ್ನು ಪರಿಶೀಲಿಸಿದಾಗ, ಇದು AI ಟೂಲ್ ಬಳಸಿ ರಚಿಸಲಾಗಿದೆ ಎಂದು ಹೇಳಲಾಗುತ್ತದೆ.

 

ಹಾಗೆಯೆ Jayprints ಎಂಬ ಇನ್​ಸ್ಟಾಗ್ರಾಮ್ ಬಳಕೆದಾರರು ಕೂಡ ಇದೇ ವಿಡಿಯೋವನ್ನು ಹಂಚಿಕೊಂಡು ಹ್ಯಾಶ್​ಟ್ಯಾಗ್​ನಲ್ಲಿ ಎಐ ಎಂದು ಬರೆದುಕೊಂಡಿದ್ದಾರೆ. ಇದರ ನಿರ್ಮಾಣ ಪ್ರಕ್ರಿಯೆಯಲ್ಲಿ, ಸಮಾಧಿಯನ್ನು ರಚಿಸಲು ದೂರದ ಸ್ಥಳಗಳಿಂದ ಕಲ್ಲುಗಳನ್ನು ವರ್ಷಗಳವರೆಗೆ ತರಲಾಗಿತ್ತು. ಯಮುನಾ ನದಿಯ ದಡದಿಂದ, 20,000 ಕುಶಲಕರ್ಮಿಗಳು ಮತ್ತು 1,000 ಕ್ಕೂ ಹೆಚ್ಚು ಆನೆಗಳು ಈ ಮೇರುಕೃತಿಯನ್ನು ರಚಿಸಲು ಅವಿರತವಾಗಿ ಶ್ರಮಿಸಿದವು. ತಾಜ್ ಮಹಲ್ ಪೂರ್ಣಗೊಳ್ಳಲು 22 ವರ್ಷಗಳನ್ನು ತೆಗೆದುಕೊಂಡಿತು, ಅದರ ಸೌಂದರ್ಯವು ಶತಮಾನಗಳಿಂದ ಉಳಿದುಕೊಂಡು ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಈ ಬಳಕೆದಾರರ ಬಯೋವನ್ನು ಪರಿಶೀಲಿಸಿದಾಗ, ಅವರು AI ಕಲಾವಿದ ಎಂಬ ಮಾಹಿತಿ ಲಭ್ಯವಾಗಿದೆ. ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ AI- ರಚಿತವಾದ ಅನೇಕ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆದ್ದರಿಂದ, ವೈರಲ್ ವಿಡಿಯೋವನ್ನು AI ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ. ಇದು ನಿಜವಾದ ವಿಡಿಯೋ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಭಾರತದ ಇತರ ಐತಿಹಾಸಿಕ ಸ್ಥಳಗಳಿಗೆ ಹೋಲಿಸಿದರೆ ತಾಜ್ ಮಹಲ್ ಬಹಳ ವಿಶಿಷ್ಟವಾಗಿದೆ. ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದು. ಇದು ಭಾರತದ ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲಿದೆ. ಇದನ್ನು 1632 ರಲ್ಲಿ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಮಹಲ್ ನೆನಪಿಗಾಗಿ ಸ್ಥಾಪಿಸಿದನು. ತಾಜ್ ಮಹಲ್ ನಿರ್ಮಾಣವು ಸುಮಾರು 1653 ರಲ್ಲಿ 32 ಮಿಲಿಯನ್ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಪೂರ್ಣಗೊಂಡಿತು. ಈ ನಿರ್ಮಾಣದಲ್ಲಿ 20000 ಜನರಿಗೆ ಉದ್ಯೋಗ ದೊರೆತಿದೆ ಎಂದು ಹೇಳಲಾಗಿದೆ. ಈ ರಚನೆಯ ಸುತ್ತ ಅನೇಕ ವಾದಗಳು ಮತ್ತು ಕಥೆಗಳೂ ಇವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಹಂಚುವ ಹಾಲಿನ ಟಬ್‌ನಲ್ಲಿ ಸ್ನಾನ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights