FACT CHECK | ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಗಳು ಅಂಜಲಿ ಮದುವೆಯಾಗಿದ್ದು ಮುಸ್ಲಿಂ ವ್ಯಕ್ತಿಯನ್ನೇ?

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

Fact Check: ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರಾ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮದುವೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತ ಮತ್ತು ಅಂಜಲಿ ಬಿರ್ಲಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. “ಬಿಜೆಪಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಮಗಳು ಅಂಜಲಿಯನ್ನು ಅನೀಸ್ಗೆ ವಿವಾಹ ಮಾಡಿಕೊಟ್ಟಿದ್ದಾರೆ. ಇಷ್ಟಕ್ಕೂ, ದೇಶದ ಎಲ್ಲಾ ಮುಸ್ಲಿಂ ವಿರೋಧಿ ನಾಯಕರು ತಮ್ಮ ಅಳಿಯಂದಿರಾಗಿ ಅನೀಸ್ ಮತ್ತು ಮುಖ್ತಾರ್ ಅವರನ್ನು ಆಯ್ಕೆ ಮಾಡಲು ಕಾರಣವೇನು?” ಎಂದು ಹೇಳಿಕೆಯಲ್ಲಿದೆ.

ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಮಗಳು ಅಂಜಲಿ ಬಿರ್ಲಾರವರನ್ನು ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ, ಅಂಜಲಿ ಬಿರ್ಲಾ ಅವರನ್ನು ವಿವಾಹವಾದ ವ್ಯಕ್ತಿಯ ಬಗ್ಗೆ ಗೂಗಲ್ ಸರ್ಚ್ ಮಾಡಿದಾಗ, ನವೆಂಬರ್ 13, 2024 ರಂದು ಎನ್ ಡಿಟಿವಿ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿ ವರದಿಯೊಂದು ಲಭ್ಯವಾಗಿದೆ.

“ಓಂ ಬಿರ್ಲಾ ಅಳಿಯ ಅನೀಶ್ ರಜನಿ: ಓಂ ಬಿರ್ಲಾ ಅವರ ಮಗಳು ಅಂಜಲಿ ಮದುವೆಯಾದ ಅನೀಶ್ ರಜನಿ ಯಾರು?, ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಹೇಳಿಕೆಗಳು ಎಷ್ಟು ನಿಜ?” ಎಂಬ ಆ ವರದಿಯ ಪ್ರಕಾರ, ಓಂ ಬಿರ್ಲಾ ಅವರ ಅಳಿಯ ಅನೀಶ್ ರಜನಿ ಸಿಂಧಿಯಾಗಿದ್ದು, ಕೋಟಾದಲ್ಲಿ ಉದ್ಯಮ ನಡೆಸುತ್ತಿದ್ದಾರೆ. “ಓಂ ಬಿರ್ಲಾ ಅವರ ಅಳಿಯ ಅನೀಶ್ ಅವರ ತಂದೆ ನರೇಶ್ ರಜನಿ ಕೋಟಾದ ಪ್ರಮುಖ ಹಿಂದೂ ಕೈಗಾರಿಕೋದ್ಯಮಿ. ಅನೀಶ್ ಅವರ ತಂದೆ ನರೇಶ್ ರಜನಿ ದೇವಾಲಯ ನಿರ್ಮಾಣ ಮತ್ತು ಸನಾತನ ಧರ್ಮ ಉನ್ನತಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ” ಎಂದು ವರದಿ ಹೇಳಿದೆ.

Fact Check: ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರಾ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಅನೀಶ್ ರಜನಿ ಅವರ ಸಂಬಂಧಿಕರು ತೈಲ ಉದ್ಯಮದಲ್ಲಿ ಭಾಗಿಯಾಗಿದ್ದಾರೆ ಎಂದು ಫ್ರೀ ಪ್ರೆಸ್ ಜರ್ನಲ್ವರದಿ ಮಾಡಿದೆ. ಇದಲ್ಲದೆ, ಅವರು ರಜನಿ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಎಕೆಆರ್ ಗ್ರೀನ್ಕೊ ಪ್ರೈವೇಟ್ ಲಿಮಿಟೆಡ್, ಪ್ರೈಮೆರೊ ವೇಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಧನೀಶ್ ಟ್ರೇಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್ಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗಯಾದ ಮಾಜಿ ಸಂಸದ ಮತ್ತು ಬಿಜೆಪಿ ಮುಖಂಡ ಹರಿ ಮಾಂಝಿ ಅವರು ಅನೀಶ್ ರಜನಿ ಅವರ ಧಾರ್ಮಿಕ ಹಿನ್ನೆಲೆಯ ಬಗ್ಗೆ ವೈರಲ್ ಆದ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಅವರು ಕೋಟಾದ ವ್ಯಾಪಾರ ಕುಟುಂಬದಿಂದ ಬಂದ ಸಿಂಧಿ ಹಿಂದೂ ಎಂದು ಸ್ಪಷ್ಟಪಡಿಸಿದ್ದಾರೆ. ರಜನಿ ಕುಟುಂಬವು 12 ಕ್ಕೂ ಹೆಚ್ಚು ಶಿವ ದೇವಾಲಯಗಳನ್ನು ನಿರ್ಮಿಸುವುದು ಸೇರಿದಂತೆ ಧಾರ್ಮಿಕ ಕಾರಣಗಳಿಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಮಾಂಝಿ ಹೇಳಿದ್ದಾರೆ. ವದಂತಿಗಳನ್ನು ನಿರಾಕರಿಸಲು, ಅವರು ಅನೀಶ್ ರಜನಿ ಮತ್ತು ಅಂಜಲಿ ಬಿರ್ಲಾ ಅವರ ವಿವಾಹ ಆಮಂತ್ರಣ ಪತ್ರಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಅನೀಶ್ ಅವರು ಮತ್ತು ನರೇಶ್ ರಜನಿ ಮತ್ತು ಸಿಮ್ರಾನ್‌ ಅವರ ಅವರ ಪುತ್ರ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ಪಿಟಿಐ ನ್ಯೂಸ್, ದಿ ವೀಕ್ ಮತ್ತು ಎಬಿಪಿ ಲೈವ್ ನಂತಹ  ಅನೇಕ ಸುದ್ದಿ ಸಂಸ್ಥೆಗಳು ಅನೀಶ್ ಸಿಂಧಿ ವ್ಯಾಪಾರ ಕುಟುಂಬಕ್ಕೆ ಸೇರಿದವರು, ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಎಂದು ವೈರಲ್ ಹೇಳಿಕೆಯನ್ನು ತಳ್ಳಿಹಾಕಿವೆ. ಹಾಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಳಿಯ ಅನೀಶ್ ರಜನಿ ಸಿಂಧಿ ಹಿಂದೂ ಕುಟುಂಬಕ್ಕೆ ಸೇರಿದವರು, ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾರವರ ಪುತ್ರಿ ಅಂಜಲಿ ಬಿರ್ಲಾರವರು ಸಿಂಧಿ ಹಿಂದೂ ಕೋಟಾದ ಪ್ರತಿಷ್ಠಿತ ವ್ಯಾಪಾರ ಕುಟುಂಬದ ಉದ್ಯಮಿ ಅನಿಶ್ ರಜನಿಯವರನ್ನು ವಿವಾಹವಾಗಿದ್ದಾರೆ. ಅನಿಶ್‌ ರಜನಿಯವರು ಮುಸ್ಲಿಂ ಧರ್ಮದವರಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸರ್ಕಾರಿ ನೌಕರರ ನಿವೃತ್ತಿ ವಯಸ್ಸಅನ್ನು 62 ವರ್ಷಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights