FACT CHECK | ಇಂಡಿಗೊ ವಿಮಾನದ ರೆಕ್ಕೆಯ ಮೇಲೆ ನೇತಾಡುತ್ತಿದ್ದ ಹಾವು ಎಂಬ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಬಿಹಾರದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದ ರೆಕ್ಕೆಯಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿದ್ದು, 30,000 ಅಡಿ ಎತ್ತರದಲ್ಲಿ ಸಣ್ಣ ಹಾವು ವಿಮಾನದ ರೆಕ್ಕೆಯಲ್ಲಿ ನೇತಾಡುತ್ತಿದೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತದೆ.
Snake seen hanging on the wing of Indigo flight in the air, you can see it in Indian Fight..
This incident took place on Indigo Flight from India’s Bhagalpur (Bihar) Airport to Delhi,
it is really worrying how this could have happened, it should be understood that safety is… pic.twitter.com/yf0zLOCbhV
— Deepak Chandra (@BolbhaiChandra) November 19, 2024
ಇಂಡಿಗೋ ವಿಮಾನದ ರೆಕ್ಕೆಯ ಮೇಲೆ ಗಾಳಿಯಲ್ಲಿ ನೇತಾಡುತ್ತಿರುವ ಹಾವು, ನೀವು ಅದನ್ನು ಇಂಡಿಯನ್ ಫ್ಲೈಟ್ನಲ್ಲಿ ನೋಡಬಹುದು. ಭಾರತದ ಭಾಗಲ್ಪುರ (ಬಿಹಾರ) ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ಇದು ಹೇಗೆ ಸಂಭವಿಸಬಹುದು ಎಂಬುದು ನಿಜವಾಗಿಯೂ ಚಿಂತೆಯಾಗುತ್ತಿದೆ, ಸುರಕ್ಷತೆಯು ಬಹಳ ಮುಖ್ಯ ಎಂದು ಅರ್ಥಮಾಡಿಕೊಳ್ಳಬೇಕು ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಈ ವಿಡಿಯೋ ಕುರಿತು ಯಾವುದೇ ಖಚಿತವಾದ ಮಾಹಿತಿ ಲಭ್ಯವಾಗಲಿಲ್ಲ. ಮತ್ತಷ್ಟು ಸರ್ಚ್ ಮಾಡಿದಾಗ ಪೋಸ್ಟ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಡಿಜಿಟಲ್ ಎಡಿಟ್ ಮೂಲಕ ತಿರುಚಲಾಗಿದೆ ಎಂದು TV9 ವರದಿ ಮಾಡಿದೆ.
ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಾವಿನ ಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಸಹಜವಾಗಿ ಕಾಣದೆ ಕೃತಕವೆನ್ನಿಸುತ್ತದೆ. ಅಲ್ಲದೆ ಹಾವಿನ ಚಲನವಲನ ಸಹಜವಾಗಿಲ್ಲ. ಇದನ್ನು ಕೃತಕವಾಗಿ ರಚಿಸಿರುವಂತೆ ತೋರುತ್ತಿದೆ.
ಅಲ್ಲದೆ ವಿಮಾನವು ಅಷ್ಟು ಎತ್ತರವನ್ನು ತಲುಪಿದಾಗ, ಅಂತಹ ಸಣ್ಣ ಸರೀಸೃಪವು ತಂಪಾದ ವಾತಾವರಣದಲ್ಲಿ ಬದುಕಲು ಸಾಧ್ಯವಿಲ್ಲ. ಹಾವು ಶೀತ-ರಕ್ತದ ಪ್ರಾಣಿಯಾಗಿದ್ದು, ಬದುಕಲು ಒಂದು ನಿರ್ದಿಷ್ಟ ತಾಪಮಾನದ ಅಗತ್ಯವಿದೆ. ಈ ರೀತಿಯ ಹೆಚ್ಚಿನ ತಾಪಮಾನದಲ್ಲಿ, ಹಾವು ಬದುಕಲು ಅಸಾಧ್ಯವಾಗಿದೆ. ಈ ವಾತಾವರಣದ ಜೊತೆಗೆ ಇಷ್ಟು ಎತ್ತರದಲ್ಲಿ ಆಮ್ಲಜನಕದ ಕೊರತೆ ಮತ್ತು ಗಂಟೆಗೆ ಸುಮಾರು 900 ಕಿ.ಮೀ ವೇಗದಲ್ಲಿ ಹಾರುವ ವಿಮಾನದ ವೇಗ ಮತ್ತು ಅದರ ಸುತ್ತಲಿನ ಗಾಳಿಯಿಂದಾಗಿ ಹಾವು ಕೆಳಕ್ಕೆ ಉರುಳುತ್ತದೆ. ಅಲ್ಲದೆ, ವಿಮಾನದ ನಿರಂತರ ಕಂಪನದಿಂದಾಗಿ ಹಾವು ತನ್ನ ರೆಕ್ಕೆಗೆ ಹೆಚ್ಚು ಕಾಲ ಅಂಟಿಕೊಳ್ಳುವುದಿಲ್ಲ.
ಹಾಗೆಯೆ ವಿಡಿಯೋ ನೋಡಿದಾಗ ಹಾವಿನ ಮೇಲೆ ಬಿಸಿಲು ಬಿದ್ದಂತೆ ಕಾಣುತ್ತದೆ. ಹಾವಿನ ಚಲನೆಯನ್ನು ಹೈಲೈಟ್ ಮಾಡಲು ಮಾತ್ರ ಇಲ್ಲಿ ಹೆಚ್ಚಿನ ಬ್ರೈಟ್ನೆಸ್ ನೀಡಿದಂತೆ ತೋರುತ್ತದೆ. ನೈಸರ್ಗಿಕ ಸೂರ್ಯನ ಬೆಳಕು ಇದ್ದರೆ, ಹಾವು ಹೊರತುಪಡಿಸಿ, ಫ್ಲಿಪ್ ಟ್ರ್ಯಾಕ್ ಫೇರಿಂಗ್ ಕೂಡ ಬೆಳಕಿನಿಂದ ಕಾಣಬೇಕಿತ್ತು. ಅಲ್ಲದೆ ಹಾವಿನ ನೆರಳು ಕೂಡ ಕಾಣಿಸುವುದಿಲ್ಲ.
2013 ರಲ್ಲಿ, ಕೇರ್ನ್ಸ್ನಿಂದ ಪಪುವಾ ನ್ಯೂಗಿನಿಯಾಗೆ ಎರಡು ಗಂಟೆಗಳ ಕ್ವಾಂಟಾಸ್ ಏರ್ಲೈನ್ಸ್ ವಿಮಾನದ ರೆಕ್ಕೆಯ ಮೇಲೆ ಡ್ರ್ಯಾಗನ್ ಕಾಣಿಸಿಕೊಂಡಿತ್ತು. ಆದರೆ ಈ ಘಟನೆಯಲ್ಲಿ ಹಾವು ಇಳಿಯುವ ವೇಳೆಗೆ ಮೃತಪಟ್ಟಿರುವುದು ಕಂಡುಬಂದಿದೆ. ಗಾಳಿಯ ವೇಗಕ್ಕೆ ಹಾವು ಬೀಸುತ್ತಿರುವುದನ್ನು ಈ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಷ್ಟು ಎತ್ತರದಲ್ಲಿ ಹಾವು ಬದುಕಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಡಿಜಿಟಲ್ ಮೂಲಕ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಈ ವಿಡಿಯೋದಲ್ಲಿ ತೋರಿಸಿರುವ ದೃಶ್ಯ ನಿಜವಾಗಿ ನಡೆದಿಲ್ಲ. ಇಂತಹ ಘಟನೆ ನಡೆಯುವುದೇ ಇಲ್ಲ ಎಂದು ಹೇಳಲು ಬರುವುದಿಲ್ಲ. ಆದರೆ ಈ ವೈರಲ್ ವಿಡಿಯೋದ ದೃಶ್ಯಗಳು ಡಿಜಿಟಲ್ ಎಡಿಟ್ ಮೂಲಕ ರಚಿಸಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಗಳು ಅಂಜಲಿ ಮದುವೆಯಾಗಿದ್ದು ಮುಸ್ಲಿಂ ವ್ಯಕ್ತಿಯನ್ನೇ?

