FACT CHECK | ಕಾಂಗ್ರೆಸ್ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಧರಿಸಿದ್ದ ‘ಶೂ’ನ ಬೆಲೆ 3ಲಕ್ಷ ರೂಪಾಯಂತೆ ಹೌದೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯಲ್ಲಿ ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಫ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 3 ಲಕ್ಷ ರೂ. ಬೆಲೆಯ ಶೂ ಧರಿಸಿ ಬಂದಿದ್ದರು ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ
यह तस्वीर बहुत वायरल है जिसमें बताया जा रहा है कि राहुल गांधी के जूतों की कीमत तीन लाख रुपए है।
आज पता चला कि इतने महंगें जूते भी आंतें है.. pic.twitter.com/dsYDVDYffT
— Ashish Yadav (@alkumar25000) December 20, 2024
ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಸಂವಿಧಾನದ ಪ್ರತಿ ಹಿಡಿದು ನಡೆಯುತ್ತಿದ್ದಾಗ ಅವರು ಹಾಕಿದ್ದ ಶೂನ ಚಿತ್ರವನ್ನು ಮಾರ್ಕ್ ಮಾಡಿ, ವೆಬ್‌ಸೈಟ್ ಒಂದರಲ್ಲಿ ಇದರ ದರ 3 ಲಕ್ಷ ರೂ. ಎಂದು ತೋರಿಸಿರುವ ಚಿತ್ರವನ್ನು ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಶೇಮ್‌ಲೆಸ್ ಪಪ್ಪು ಎಂದು ಬರೆಯಲಾಗಿದೆ.
Come on guys. Stop trolling him for his expensive shoes.
His mother was worth $2Billion in 2013 itself, as per news from 2013.
Can’t he afford mere ₹3,00,000 shoes?
Don’t think him of so cheap, that his shoes are also sponsored by Soros….or are they? pic.twitter.com/mlS7091uIU
— Tathvam-asi (@ssaratht) December 19, 2024
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಪೋಸ್ಟ್ ಮಾಡಿದ ಲಿಂಕ್‌ಗಳನ್ನುಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ನಿಜವಾಗಿಯೂ ರಾಹುಲ್ ಗಾಂಧಿ 3 ಲಕ್ಷ ರೂ ಬೆಲೆಯ ಶೂಗಳನ್ನು ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ರಾಹುಲ್ ಗಾಂಧಿ 3 ಲಕ್ಷ ರೂ ಬೆಲೆಯ ಶೂಗಳನ್ನು ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಕಟವಾದ ವರದಿಗಳು ಲಭ್ಯವಾಗಿದೆ.
![]()
ವೈರಲ್ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ಆನ್ (on) ಕಂಪನಿಯದ್ದು ಎಂದು ತಿಳಿದು ಬಂದಿದೆ. ನಂತರ ಇದರ ಬೆಲೆಯನ್ನು ಖಚಿತಪಡಿಸಿಕೊಳ್ಳಲು ‘ಶೂ’ ಚಿತ್ರವನಷ್ಟೆ ಕ್ರಾಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಆನ್‌ನ ಅಧಿಕೃತ ವೆಬ್‌ಸೈಟ್ (on.com)ಗೆ ಲಭ್ಯವಾಗಿದೆ. ಅಲ್ಲಿ ಈ ಶೂಗೆ 289 ಸಿಂಗಾಪುರ್ ಡಾಲರ್ (S$ 289.00) ಎಂದು ನಮೂದಾಗಿದೆ. ರೂಪಾಯಿಗೆ ಪರಿವರ್ತಿಸಿದರೆ ಈ ಮೊತ್ತ 18353.75 ರೂ. ಆಗುತ್ತದೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ
![]()
ಕಲ್ಚರ್ ಸರ್ಕಲ್ ಡಾಟ್ ಕಾಂ ಮೊದಲಾದ ಸೈಟ್‌ಗಳಲ್ಲಿ ಈ ಶೂ ಮಾರಾಟಕ್ಕೆ ಲಭ್ಯವಿದೆ, ಇದರಲ್ಲಿ ಭಾರತೀಯ ರೂಪಾಯಿ ಲೆಕ್ಕದಲ್ಲೇ ದರ ನಮೂದಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಈ ಶೂನ ಬೆಲೆ 3 ಲಕ್ಷ ಎಂಬ ಪ್ರತಿಪಾದನೆ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಂಬೇಡ್ಕರ್ ಪರ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಹಾಕಿಕೊಂಡಿದ್ದ ಶೂ ದರ 3 ಲಕ್ಷ ರೂ. ಎನ್ನುವ ವಾದ ಸುಳ್ಳು. ವಾಸ್ತವವಾಗಿ ಈ ಶೂ ದರ 20 ಸಾವಿರ ಆಸುಪಾಸಿನಲ್ಲಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪುಷ್ಪ-2 ಚಿತ್ರ ವೀಕ್ಷಿಸಿದ್ರಾ ಪ್ರಧಾನಿ ಮೋದಿ?

