FACT CHECK | ನಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡ ಉದಯನಿಧಿ ಸ್ಟಾಲಿನ್ ಹೇಳಿಕೆಯ ಅಸಲೀಯತ್ತೇನು ಗೊತ್ತೇ?
ತಮಿಳುನಾಡು ಸರ್ಕಾರದ DCM ಉದಯನಿಧಿ ಸ್ಟಾಲಿನ್ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ತಾವು ಕ್ರಿಶ್ಚಿಯನ್ ಎಂದು ಹೇಳಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಉದಯನಿಧಿ ಸ್ಟಾಲಿನ್ ಉದಯನಿಧಿ ಸ್ಟಾಲಿನ್
ನಾನು ಈ ಹಿಂದೆಯೂ ಹೇಳಿದ್ದೆ ಮತ್ತು ಈಗಲೂ ಹೇಳುತ್ತಿದ್ದೇನೆ ನಾನು ಹೆಮ್ಮೆಯ ಕ್ರೈಸ್ತ” ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಂಚಿಕೊಳ್ಳುತ್ತಿರುವ ಹಲವು ಬಲಪಂಥೀಯರು ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ, ಕ್ರೈಸ್ತರಾದ ನೀವು ಹಿಂದುಗಳ ಬಗ್ಗೆ ಏಕೆ ಮಾತನಾಡುತ್ತೀರಿ? ಹಿಂದೂಗಳನ್ನು ಟೀಕಿಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಉದಯನಿಧಿ ಸ್ಟಾಲಿನ್
ಇನ್ನು ವೈರಲ್ ವಿಡಿಯೋದಲ್ಲಿ ಕೂಡ ಉದಯನಿಧಿ ಸ್ಟಾಲಿನ್ ಅವರು “ಈ ಹಿಂದೆಯೂ ನಾನು ಹೇಳಿದ್ದೆ ಮತ್ತು ಈಗಲೂ ಹೇಳುತ್ತಿದ್ದೇನೆ ನಾನು ಹೆಮ್ಮೆಯ ಕ್ರೈಸ್ತ” ಎಂಬ ಹೇಳಿಕೆ ನೀಡಿರುವುದು ಕಂಡುಬಂದಿದೆ. ಈ ಕ್ಲಿಪ್ ಅನ್ನು ನೋಡಿದ ಹಲವು ಉದಯನಿಧಿ ಸ್ಟಾಲಿನ್ ಅವರು ತಾನು ಕ್ರೈಸ್ತ ಎಂದು ಘೋಷಿಸಿಕೊಂಡಿದ್ದಾರೆ. ಹಾಗಾಗಿ ಅವರು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್ನ ಹಿನ್ನೆಲೆ ಏನು ? ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ವೈರಲ್ ವಿಡಿಯೋದ ವಿವಿಧ ಕೀ ಪ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 19 ಡಿಸೆಂಬರ್ 2024 ರಂದು ಎಬಿಪಿ ನಾಡು ತಮಿಳು ಸುದ್ದಿವಾಹಿನಿಯ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ.
ಈ ಎಂಟು ನಿಮಿಷದ ವಿಡಿಯೋದಲ್ಲಿ ಉದಯನಿಧಿ ಸ್ಟಾಲಿನ್ ಅವರು ನಾನು ಈ ಹಿಂದೆ ಕ್ರೈಸ್ತ ಎಂದು ಹೇಳಿಕೆ ನೀಡಿದ್ದೆ, ಇದಕ್ಕೆ ಹಲವು ಸಂಘಿಗಳು ಹೊಟ್ಟೆ ಉರಿದುಕೊಂಡಿದ್ದರು, ಅದನ್ನು ಅವರು ಒಪ್ಪಲು ಸಾಧ್ಯವಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ ನಾನು ಹೆಮ್ಮೆಯ ಕ್ರೈಸ್ತ, ನನ್ನನ್ನು ಹಿಂದೂವಾಗಿ ನೋಡಲು ಬಯಸುವವರಿಗೆ ನಾನು ಹಿಂದುವಾಗಿರುತ್ತೇನೆ, ಮುಸಲ್ಮಾನನಾಗಿ ನೋಡಲು ಬಯಸುವವರಿಗೆ ನಾನು ಮುಸಲ್ಮಾನನಾಗಿ ಕಾಣುತ್ತೇನೆ. ಎಲ್ಲಾ ಧರ್ಮಗಳು ಕೂಡ ಶಾಂತಿಯನ್ನು ಬೋಧಿಸಿದೆ, ಆದರೆ ಸಮಾಜದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಕದಡುವ ಕೆಲಸವನ್ನು ಮಾಡುತ್ತಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿರುವುದನ್ನು ಕೇಳಬಹುದು. ಇದೇ ವರದಿಯನ್ನು ಈ ತಮಿಳ್ ಎಂಬ ವಾಹಿನಿಯೂ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ವರದಿ ಪ್ರಕಟಿಸಿರುವುದು ಕಂಡುಬಂದಿದೆ.
ಒಟ್ಟಾರೆಯಾಗಿ ಹಳುವುದಾದರೆ, ಉದಯನಿಧಿ ಸ್ಟಾಲಿನ್ ಅವರು ಕಾರ್ಯಕ್ರದಲ್ಲಿ ಮಾತನಾಡಿರುವ ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಉದಯನಿಧಿ ಸ್ಟಾಲಿನ್ ತಮ್ಮನ್ನು ಕ್ರೈಸ್ತ ಎಂದು ಘೋಷಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಜೈಪುರದ ಎಲ್ಪಿಜಿ ಟ್ಯಾಂಕರ್ ಅಪಘಾತದ ಮೃತರಿಗೆ ಕೋಟಿ ಕೋಟಿ ದೇಣಿಗೆ ನೀಡಿದ್ರಾ ಕೊಹ್ಲಿ ಮತ್ತು ದೋನಿ

