FACT CHECK | ಮಹಾಕುಂಭ ಮೇಳದ ಪೋಸ್ಟ್‌ರ್ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ಮೂತ್ರ ಮಾಡಿದ್ದು ನಿಜವೇ?

Credit  : News Meter

ಭಾರತದ ಧಾರ್ಮಿಕ ಪರಂಪರೆಯ ಸಂಕೇತ ಮತ್ತು ಅದರ ಸಂಸ್ಕೃತಿಯ ಕನ್ನಡಿಯಾಗಿರುವ ಮಹಾ ಕುಂಭಮೇಳವು ನಂಬಿಕೆ, ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯನ್ನು ಪ್ರದರ್ಶಿಸುವ ಒಂದು ಮೇಳವಾಗಿದೆ. ಈ ಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಲಾಗುತ್ತದೆ. ಆದರೆ ಈ ಐತಿಹಾಸಿಕ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಹಿಂದೂ ದೇವತೆಗಳು ಮತ್ತು ಮಹಾಕುಂಭ ಮೇಳವದ ಮಹತ್ವವನ್ನು ಸಾರುವ ಪೋಸ್ಟ್‌ರ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡುವಾಗ ಸಿಕ್ಕಿಬಿದ್ದು ಸ್ಥಳೀಯರಿಂದ ಧರ್ಮದೇಟ್ಟು ತಿಂದಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ದ್ವೇಷ ಮತ್ತು ಸುಳ್ಳು ಮಾಹಿತಿಗೆ ಹೆಸರಾಗಿರುವ ಬಾಬಾ ಬನಾರಸ್ ಎಂಬ ಎಕ್ಸ್ ಬಳಕೆದಾರ, ವಿಡಿಯೋವನ್ನು ಹಂಚಿಕೊಂಡು, “ಯುಪಿಯ ರಾಯ್‌ಬರೇಲಿಯಲ್ಲಿ ಗೋಡೆಗಳ ಮೇಲೆ ಹಾಕಲಾಗಿದ್ದ ಮಹಾಕುಂಭ ಮತ್ತು ಹಿಂದೂ ದೇವತೆಗಳ ಫೋಟೋಗಳ ಮೇಲೆ ಅಬ್ದುಲ್ಲ ಮೂತ್ರ ವಿಸರ್ಜಿಸುತ್ತಿದ್ದಾಗ ಸ್ಥಳೀಯರು ಹಿಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಘಟನೆಯನ್ನು ನ್ಯೂಸ್‌ ಮೀಟರ್ ಸುಳ್ಳು ಎಂದು ವರದಿ ಮಾಡಿದೆ. ಮಹಾಕುಂಭ ಮತ್ತು ಹಿಂದೂ ದೇವತೆಗಳ ಫೋಟೊಗಳಿಗೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ ಹಿಂದೂ ಸಮುದಾಯಕ್ಕೆ ಸೇರಿದವನು ಹೇಳಿದೆ.

ವೈರಲ್ ವಿಡಿಯೋದ ಘಟನೆಯನ್ನು ಪರಿಶೀಲಿಸಲು ಕೀವರ್ಡ್ ಸರ್ಚ್ ಮಾಡಿದಾಗ, ಜನವರಿ 11 ರಂದು ಪ್ರಕಟವಾದ ಅಮರ್ ಉಜಲಾ ಮತ್ತು ಇಂಡಿಯಾ ಡೈಲಿ ವರದಿಗಳು ಲಭ್ಯವಾಗಿವೆ. ಈ ಎರಡೂ ವರದಿಗಳಲ್ಲಿ ಹಲ್ಲೆಯನ್ನು ಸೆರೆಹಿಡಿದ ವೈರಲ್ ವೀಡಿಯೊವನ್ನು ಉಲ್ಲೇಖಿಸಿವೆ.

ಈ ವರದಿಗಳ ಪ್ರಕಾರ, ಈ ಘಟನೆಯು ಜನವರಿ 10, 2025 ರ ರಾತ್ರಿ ರಾಯ್‌ಬರೇಲಿಯ ಬಚ್ರಾವನ್ ಪಟ್ಟಣದ ಗಡಿಭಾಗದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಸ್ಥಳೀಯರು ಆರೋಪಿಯನ್ನು ಹಿಡಿದು ಹಲ್ಲೆ ನಡೆಸಿದರು, ಆದರೆ ಸ್ಥಳದಲ್ಲಿದ್ದ ಯಾರೋ ಒಬ್ಬರು ಘಟನೆಯನ್ನು ರೆಕಾರ್ಡ್ ಮಾಡಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವರದಿಯಲ್ಲಿ ಆರೋಪಿಯ ಹೆಸರನ್ನಾಗಲಿ ಅಥವಾ ಅವರ ಆತ ಸಮುದಾಯವನ್ನಾಗಲಿ ಉಲ್ಲೇಖಿಸಿಲ್ಲ. ಆದರೆ ತನಿಖೆ ನಡೆಯುತ್ತಿದ್ದ ಈ ಬಗ್ಗೆ ಕೂಡಲೆ ವಿವರ ನೀಡಲಾಗುವುದು ಎಂದು ಇನ್ಸ್‌ಪೆಕ್ಟರ್ ಒಪಿ ತಿವಾರಿ ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಕೋಮು ದ್ವೇಷದ ಹಿನ್ನಲೆಯಲ್ಲಿಎಕ್ಸ್‌ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಯ್‌ಬರೇಲಿ ಪೊಲೀಸರ ಎಕ್ಸ್ ಹ್ಯಾಂಡಲ್, ಘಟನೆಯಲ್ಲಿ  ಹಲ್ಲೆಗೊಳಗಾದ ವ್ಯಕ್ತಿ ಕನ್ನೌಜ್ ಜಿಲ್ಲೆಯ ವಿನೋದ್ ಎಂದು ಸ್ಪಷ್ಟಪಡಿಸಿದೆ, ಆತ ಕುಡಿದ ಮತ್ತಿನಲ್ಲಿ, ಕುಂಭ ಪೋಸ್ಟರ್ ಇರುವುದರ ಬಗ್ಗೆ ಅರಿವಿಲ್ಲದೆ ಗೋಡೆಯ ಬಳಿ ಹೋಗಿ ಮೂತ್ರ ವಿಸರ್ಜಿಸಿದ್ದಾರೆ ಹೊರತು ಬೇರೆ ಉದ್ದೇಶ ಕಾಣುತ್ತಿಲ್ಲ, ಆದರೂ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಹೇಳಿಕೆ ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ರಾಯ್‌ಬರೇಲಿ ಪೊಲೀಸ್‌ ಎಕ್ಸ್‌ ಹ್ಯಾಂಡಲ್ ಸ್ಪಷ್ಟಪಡಿಸಿದೆ.

ಘಟನೆ ಸಂಬಂಧ  ನ್ಯೂಸ್‌ಮೀಟರ್ ಬಚ್ರಾವಣ್ ಪೊಲೀಸ್ ಠಾಣೆಯ ಅಧಿಕಾರಿ ಒ.ಪಿ. ತಿವಾರಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು,  “ಆರೋಪಿಯ ಹೆಸರು ವಿನೋದ್ ಎಂದು ತನಿಖೆ ವೇಳೆ ತಿಳಿದು ಬಂದಿದ್ದು, ಆತನನ್ನು ದಿನೇಶ್ ಎಂದೂ ಕರೆಯುತ್ತಾರೆ, ತಂದೆಯ ಹೆಸರು ಭರತ್‌ ಎಂದು ತಿಳಿದುಬಂದಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳುತ್ತಿರುವಂತೆ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ಹೇಳಿಕೆ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಬಚ್ರಾವಣ್ ಪೊಲೀಸ್ ಠಾಣೆ ಹೊರಡಿಸಿದ ಘಟನೆಯ ಕುರಿತು ಪತ್ರಿಕಾ ಪ್ರಕಟಣೆಯನ್ನು ತಿವಾರಿ ಹಂಚಿಕೊಂಡಿದ್ದಾರೆ. ಆರೋಪಿ ವಿನೋದ್ ಅಲಿಯಾಸ್ ದಿನೇಶ್‌ನನ್ನು ಕಾನೂನಿನ ಪ್ರಕಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿಕೆ ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಕುಂಭಮೇಳದ ಪೋಸ್ಟರ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಹೇಳಿಕೆ ಸುಳ್ಳು.

(This story was originally published by News Meter, and republished by Ensuddi.com as part of the Shakti Collective)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights