‘ಮಾಸ್ಕ್ ಅಪ್ ರಾಯಪುರ’ ಅಭಿಯಾನ; ಪೊಲೀಸರಿಂದ ಉಚಿತ ಮಾಸ್ಕ್‌ ವಿತರಣೆ!

ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದಲ್ಲಿ ಪೊಲೀಸರು ಮಾಸ್ಕ್‌ ಅಪ್‌ ರಾಯಪುರ ಅಭಿಯಾನವನ್ನು ಆರಂಭಿಸಿದ್ದಾರೆ. ಸ್ಥಳೀಯ ನಿವಾಸಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು ಎಂಬ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದು, ಈ ಅಭಿಯಾನದ ಮೂಲಕ ಉಚಿತ ಮಾಸ್ಕ್‌ ವಿತರಣೆ ಮಾಡುತ್ತಿದ್ದಾರೆ.

“ನಾವು ಕೋವಿಡ್ -19 ವಿರುದ್ಧದ ಯುದ್ಧವನ್ನು ಗೆಲ್ಲಬೇಕು. ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮಾಸ್ಕ್‌ ಧರಿಸುವುದು ಸರಳ ಹಂತವಾಗಿದೆ. ಮಾಸ್ಕ್ ಧರಿಸುವುದರಿಂದ ನೀವು ಕಾಳಜಿ ವಹಿಸುತ್ತೀರಿ ಎಂದು ತೋರಿಸುತ್ತದೆ. ನಾವು ಜನರಿಗೆ ಉಚಿತ ಮಾಸ್ಕ್‌ಗಳನ್ನು ಒದಗಿಸುತ್ತಿದ್ದೇವೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಲು ಹೇಳುತ್ತಿದ್ದೇವೆ”ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್ ತಿಳಿಸಿದ್ದಾರೆ.

ಕೇವಲ ಮೂರು ದಿನಗಳಲ್ಲಿ ರಾಯಪುರ ಪೊಲೀಸರು 32 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸ್ಥಳೀಯಕ ಜನರಿಗೆ 1.32 ಲಕ್ಷ ಫೇಸ್ ಮಾಸ್ಕ್ ವಿತರಿಸಿದ್ದಾರೆ.

ನಗರ ಪೊಲೀಸರು ಪ್ರಾರಂಭಿಸಿದ ಅಭಿಯಾನವು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ. ಅಲ್ಲದೆ, ಅಭಿಯಾನದಿಂದಾಗಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ರಾಯ್‌ಪುರದಲ್ಲಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಭಾನುವಾರ, ನಗರದಲ್ಲಿ ಕೇವಲ 59 ಪ್ರಕರಣಗಳು ವರದಿಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಂದೆಗಾಗಿ 1200 ಕಿ.ಮೀ ಸೈಕಲ್‌ ತುಳಿದಿದ್ದ ಬಾಲಕಿಯ ತಂದೆ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights