FACT CHECK | ಭಾರತ ಭಯೋತ್ಪಾದನೆಯ ಕೇಂದ್ರ ಎಂದು ಯುರೋಪ್ ಸಮೀಕ್ಷೆಯೊಂದು ಹೇಳಿದ್ದು ನಿಜವೇ?
ಯುರೋಪಿಯನ್ ಸಂಶೋಧನಾ ಸಮೀಕ್ಷೆಯು ಭಾರತವನ್ನು ಏಷ್ಯಾದಲ್ಲಿ ಭಯೋತ್ಪಾದನೆಯ ಪ್ರಮುಖ ಮೂಲವೆಂದು ಘೋಷಿಸಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
#BREAKING: Just in, India declared as the largest source of terrorism in Asia by European research survey.#Sanremo2025 #ElonMusk #earthquake #srchafreen #srchafreen #GetOutModi #kstarsparkinbangkok2025 #MilePhakphum pic.twitter.com/tmjC3rcSrY
— Aarya (@xrightsno) February 22, 2025
@xrightsno ಎಂಬ ಎಕ್ಸ್ ಖಾತೆಯ ಬಳಕೆದಾರರು ಯುರೋಪಿಯನ್ ಸಂಶೋಧನಾ ಸಮೀಕ್ಷೆಯು ಭಾರತವನ್ನು ಏಷ್ಯಾದಲ್ಲಿ ಭಯೋತ್ಪಾದನೆಯ ಪ್ರಮುಖ ಮೂಲವೆಂದು ಘೋಷಿಸಿದೆ” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
#BREAKING: Just in, India declared as the largest source of terrorism in Asia by European research survey. pic.twitter.com/0O45pzwzjJ
— Foujeet (@Mr_Foujeet) February 21, 2025
ಇದೇ ಪ್ರತಿಪಾದನೆಯೊಂದಿಗೆ @Mr_Foujeet ಎಂಬ ಟ್ವೀಟರ್ (ಎಕ್ಸ್) ಬಳಕೆದಾರರು ಪ್ರಧಾನಿ ಮೋದಿಯವರ ಫೋಟೋದೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ಸಮೀಕ್ಷೆ ಸಿಕ್ಕಿಲ್ಲ. ಯಾವುದೇ ಅಧಿಕೃತ ಅಥವಾ ವಿಶ್ವಾಸಾರ್ಹ ಮೂಲಗಳು ಈ ಹೇಳಿಕೆಯನ್ನು ನೀಡಿಲ್ಲ. ಯಾವುದೇ ಪ್ರತಿಷ್ಠಿತ ಯುರೋಪಿಯನ್ ಸಂಶೋಧನಾ ಸಂಸ್ಥೆ ಅಂತಹ ವರದಿಯನ್ನು ಪ್ರಕಟಿಸಿಲ್ಲ. ಭಾರತಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ಭಯೋತ್ಪಾದನಾ ಸೂಚ್ಯಂಕದಲ್ಲಿ ಪಟ್ಟಿ ಮಾಡಲಾದ ದೇಶಗಳನ್ನು ಪರಿಶೀಲಿಸಿದ್ದೇವೆ. ಇದು ಪಾಕಿಸ್ತಾನ 4 ನೇ ಸ್ಥಾನದಲ್ಲಿದೆ, ಸಿರಿಯಾ ಐದನೇ ಸ್ಥಾನದಲ್ಲಿದೆ, ಅಫ್ಘಾನಿಸ್ತಾನ ಆರನೇ ಸ್ಥಾನದಲ್ಲಿದೆ, ಮ್ಯಾನ್ಮಾರ್ ಒಂಬತ್ತನೇ ಸ್ಥಾನದಲ್ಲಿದೆ, ಇರಾಕ್ ಹನ್ನೊಂದನೇ ಸ್ಥಾನದಲ್ಲಿದೆ ಮತ್ತು ಭಾರತ 14 ನೇ ಸ್ಥಾನದಲ್ಲಿದೆ ಎಂದು ಸೂಚ್ಯಂಕದ ದೀರ್ಘ ಪಟ್ಟಿಯಲ್ಲಿ ತೋರಿಸಲಾಗಿದೆ.

ಕೆಲವು ದಿನಗಳ ಹಿಂದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರವೆಂದು ಬಹಿರಂಗಪಡಿಸಿತ್ತು. ಪಾಕಿಸ್ತಾನದ ವಿದೇಶಾಂಗ ಸಚಿವರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದಾಗ, ಭಾರತದ ರಾಯಭಾರಿ ಪರ್ವತನೇನಿ ಹರೀಶ್ ಅವರು ಪಾಕಿಸ್ತಾನ ಭಯೋತ್ಪಾದನೆಯ ಜಾಗತಿಕ ಕೇಂದ್ರ ಎಂದು ಸ್ಪಷ್ಟವಾಗಿ ಹೇಳಿದ್ದರು. ಈ ಬಗ್ಗೆ ದೈನಿಕ್ ಜಾಗರಣ ವರದಿ ಮಾಡಿದೆ. ಆದರೆ, ಭಾರತವು ಭಯೋತ್ಪಾದನೆಯ ಮೂಲ ಎಂಬ ಮಾಹಿತಿ ಸುಳ್ಳು. ಸಂಪೂರ್ಣವಾಗಿ ಆಧಾರರಹಿತ. ಭಾರತದ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಅಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.
ಕೆಲವು ಸಾಮಾಜಿಕ ಜಾಲತಾಣವಾದ ಟ್ವೀಟರ್ನ ಬಳಕೆದಾರರು ಭಾರತವನ್ನು ಏಷ್ಯಾದಲ್ಲಿ ಭಯೋತ್ಪಾದನೆಯ ಪ್ರಮುಖ ಮೂಲ ಎಂದು ಯುರೋಪಿಯನ್ ಸಂಶೋಧನೆ ಹೇಳಿದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದಾರೆ. ಸಜಗ ತಂಡವು ಈ ಸುದ್ದಿಯನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ಸಂಶೋಧನಾ ವರದಿ ಇಲ್ಲ ಎಂದು ಕಂಡುಬಂದಿದೆ. ಈ ಸುಳ್ಳು ಸುದ್ದಿಯನ್ನು ಭಾರತದ ವರ್ಚಸ್ಸಿಗೆ ಧಕ್ಕೆ ತರವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ ಎಂದು ಖಚಿತಪಡಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯೂರೋಪಿಯನ್ ಸಂಶೋಧನಾ ಅಧ್ಯಯನವೊಂದು ಭಾರತವನ್ನು ಏಷ್ಯಾದಲ್ಲಿ ಭಯೋತ್ಪಾದನೆಯ ಅತಿದೊಡ್ಡ ಮೂಲ ಎಂದು ಘೋಷಿಸಿದೆ ಎಂಬ ಹೇಳಿಕೆ ಸುಳ್ಳು. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಎಂದು ಪಾಕ್ನಲ್ಲಿ ನಡೆದ ಅಪಘಾತದ ವಿಡಿಯೋ ಹಂಚಿಕೆ

