FACT CHECK | ಮಗಳನ್ನೆ ಮದುವೆಯಾದ ತಂದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಮುಸ್ಲಿಂ ಸಮುದಾಯದ ತಂದೆಯೊಬ್ಬ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾನೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ತಂದೆ ಮಗಳಂತೆ ಕಾಣುವ ಇಬ್ಬರು ಜೊತೆಯಲ್ಲಿ ಕುಳಿತಿರುವುದನ್ನು ಕಾಣಬಹುದು.

ಜರ್ನಾದನ ಪೂಜಾರಿ ಎಂಬ ಫೇಸ್‌ಬುಕ್ ಬಳಕೆದಾರ ಇದೇ ರೀತಿ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ಮುಲ್ಲಾ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾನೆ. ಈಗ ಆಕೆ ಎರಡು ತಿಂಗಳ ಗರ್ಭಿಣಿ. ಇದೇ ನೋಡಿ ಇಸ್ಲಾಮಿನ ಸೌಂದರ್ಯ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ ವಿಡಿಯೋದಲ್ಲಿರುವ ವ್ಯಕ್ತಿಯೂ ಇದೇ ಹೇಳಿಕೆಯನ್ನು ಹೇಳಿರುವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್‌fನಲ್ಲಿ ಮಾಡಲಾಗಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀಫ್ರೇಮ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 6 ಮಾರ್ಚ್ 2025ರಂದು, ರಾಜ್ ಠಾಕೂರ್ ಎಂಬ ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ. ಅವರ ಪೋಸ್ಟ್‌ನಲ್ಲಿ ಇದೇ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ.

 

View this post on Instagram

 

A post shared by Raj Thakur (@official_rajthakur__)

official_rajthakur_ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ನೀಡಿರುವ ವಿವರಣೆಯ ಪ್ರಕಾರ ಈ ಇದು ನೈಜ ಘಟನೆಯಲ್ಲಿ ವಿಡಿಯೋವನ್ನು ಸ್ಕ್ರಿಪ್ಟ್‌ ಮಾಡಲಾಗಿದೆ. ಇದು ಪಾತ್ರಧಾರಿಗಳನ್ನು ಬಳಸಿಕೊಂಡು ಸೃಷ್ಟಿ ಮಾಡಲಾದ ವಿಡಿಯೊ ಎಂದು ಅವರೇ ಹೇಳಿಕೊಂಡಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡಿದಾಗ, ರಾಜ್‌ ಠಾಕೂರ್‌ ಎಂಬ ಫೇಸ್‌ಬುಕ್‌ ಅಕೌಂಟ್‌ ಲಭ್ಯವಾಗಿದೆ. ಈ ವೀಡಿಯೊದ ಪೂರ್ಣ ಆವೃತ್ತಿಯನ್ನು ನಾವು ರಾಜ್ ಠಾಕೂರ್ ಅವರ ಫೇಸ್‌ಬುಕ್ ಪುಟದಲ್ಲಿ ಕಂಡುಕೊಂಡಿದ್ದೇವೆ. ಇಲ್ಲಿಯೂ ಸಹ, ಇದು ಮನರಂಜನೆ ಮತ್ತು ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ರಚಿಸಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ಶೀರ್ಷಿಕೆಯಲ್ಲಿ ಹೇಳಿದೆ.

ರಾಜ್ ಠಾಕೂರ್ ದೆಹಲಿಯ ಒಬ್ಬ ವಿಡಿಯೊ ಕ್ರಿಯೇಟರ್ ಆಗಿದ್ದು, ಅವರೇ ನಟನಟಿಯರನ್ನು ಬಳಸಿಕೊಂಡು ಇಂಥ ವಿಡಿಯೊಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಾರೆ ಎನ್ನುವುದು ಅವರ ಖಾತೆಯಿಂದ ತಿಳಿಯುತ್ತದೆ. ಹಾಗಾಗಿ ಇದು ಸ್ಕ್ರಿಪ್ಟ್‌ ಮಾಡಲಾದ ವಿಡಿಯೋ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ಸಮುದಾಯದ ತಂದೆಯೊಬ್ಬ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾನೆ ಎಂದು  ಸ್ಕ್ರಿಪ್ಟೆಡ್‌ ಮಾಡಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕುಮಾರಿ ಸೌಜನ್ಯ ಪರ ನ್ಯಾಯ ಕೇಳಿದಕ್ಕೆ 100 ಅಡಿ ಎತ್ತರದ ರಥ ಬಿದ್ದಿದೆ ಎಂದು ಸುಳ್ಳು ವರದಿ ಮಾಡಿದ ಏಷಿಯಾನೆಟ್‌ ಸುವರ್ಣ ನ್ಯೂಸ್‌


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights