FACT CHECK | ಪಾಕಿಸ್ತಾನಿ ಸೇನೆಯ ಪ್ರಧಾನ ಕಛೇರಿಯಲ್ಲಿ ಭಾರಿ ಸ್ಫೋಟದಿಂದಾಗಿ 20 ಪಾಕಿಸ್ತಾನಿ ಸೈನಿಕರು ಸುಟ್ಟು ಬೂದಿಯಾದ್ರಾ?

ಭಯಾನಕ ಸ್ಫೋಟದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಪಾಕಿಸ್ತಾನದ ಸೇನೆಯ ಪ್ರಧಾನ ಕಚೇರಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ 20 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

@rashtrawadi_ak ಎಂಬ ಎಕ್ಸ್‌ ಬಳಕೆದಾರರು ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ಪಾಕಿಸ್ತಾನಿ ಸೇನೆಯ ಪ್ರಧಾನ ಕಛೇರಿಯಲ್ಲಿ ಭಾರಿ ಸ್ಫೋಟದಿಂದಾಗಿ 20 ಪಾಕಿಸ್ತಾನಿ ಸೈನಿಕರು ಸುಟ್ಟು ಬೂದಿಯಾಗಿದ್ದಾರೆ. ಎಂದು ಬರೆದುಕೊಂಡಿದ್ದಾರೆ.

@anitavladivoski ಎಂಬ ಎಕ್ಸ್‌ ಬಳಕೆದಾರರು, ‘ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿಯಲ್ಲಿ ಭಾರಿ ಸ್ಫೋಟ, 20 ಪಾಕಿಸ್ತಾನಿ ಸೈನಿಕರು ಸುಟ್ಟು ಬೂದಿಯಾಗಿದ್ದಾರೆ’ ಎಂದು ಬರೆದಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪಾಕಿಸ್ತಾನದ ಸೇನಾ ಪ್ರಧಾನ ಕಛೇರಿಯಲ್ಲಿ ನಿಜವಾಗಿಯೂ ಸ್ಫೋಟ ಸಂಭವಿಸಿದೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ, ಪಾಕಿಸ್ತಾನದ ಸೇನಾ ಪ್ರಧಾನ ಕಛೇರಿಯಲ್ಲಿ ನಿಜವಾಗಿಯೂ ಸ್ಫೋಟ ಸಂಭವಿಸಿದೆಯೇ ಎಂದು ಪರಿಶೀಲಿಸಲು ಕೀವರ್ಡ್‌ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, X ನಲ್ಲಿಯೂ ಇದೇ ರೀತಿಯ ಪ್ರತಿಪಾದನೆ ಮಾಡುವ ಹಲವು ಪೋಸ್ಟ್‌ಗಳು ಲಭ್ಯವಾಗಿದೆ.

ಮತ್ತಷ್ಟು ಮಾಹಿತಿಗಾಗಿ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮತ್ತೊಂದು ಪೋಸ್ಟ್ ಕಂಡುಬಂದಿದೆ, ಅದರಲ್ಲಿ ಸ್ಫೋಟದ ವೀಡಿಯೊ ವೈರಲ್ ಆಗಿದ್ದು ಒಂದೇ ಆದರೆ ಶೀರ್ಷಿಕೆ ವಿಭಿನ್ನವಾಗಿತ್ತು. X ನಲ್ಲಿ ಸಿರಿಯಾದ ಡಮಾಸ್ಕಸ್‌ನ ಗ್ರಾಮೀಣ ಪ್ರದೇಶವಾದ ಡೌಮಾ ನಗರದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡಿದೆ. ಎಂದು ವೀಡಿಯೊವನ್ನು ಹಂಚಿಕೊಂಡಿರುವ, @SprinterObserve ಎಂಬ ಬಳಕೆದಾರರು ಬರೆದಿದ್ದಾರೆ.

ಅಲ್ ಜಜೀರಾ-ಸಿರಿಯಾ ತನ್ನ ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಡಮಾಸ್ಕಸ್‌ನ ಗ್ರಾಮೀಣ ಪ್ರದೇಶದ ಡೌಮಾ ನಗರದಲ್ಲಿ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಅದರಲ್ಲಿ ಹೇಳಲಾಗಿದೆ.

ಅದರ ನಂತರ, @skynewsarabia ಹೆಸರಿನ ಸುದ್ದಿ ವಾಹಿನಿಯು ಮಾರ್ಚ್ 18 ರಂದು X ನಲ್ಲಿ ವೈರಲ್ ವೀಡಿಯೊದ ವರದಿಯನ್ನು ಪೋಸ್ಟ್ ಮಾಡಿತು. ಅದರಲ್ಲಿ ಡೌಮಾದಲ್ಲಿ ಇಂಧನ ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.

@daraa_net_2020 ಹೆಸರಿನ X ಖಾತೆಯಲ್ಲಿ ವೈರಲ್ ವೀಡಿಯೊ ಕಂಡುಬಂದಿದೆ. ಡಮಾಸ್ಕಸ್‌ನ ಗ್ರಾಮೀಣ ಪ್ರದೇಶವಾದ ಡೌಮಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಇದರಲ್ಲಿ ಹೇಳಲಾಗಿದೆ.

@tamadontv ಎಂಬ ಮೀಡಿಯಾ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಸಿರಿಯಾದ ರಾಜಧಾನಿಯಲ್ಲಿ ಸ್ಫೋಟ. ಡಮಾಸ್ಕಸ್ ಗ್ರಾಮಾಂತರದಲ್ಲಿರುವ ಡೌಮಾ ನಗರದ ಇಂಧನ ಟ್ಯಾಂಕ್‌ನಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಸಿರಿಯಾದ ಮಾಧ್ಯಮ @tamadontv ವರದಿ ಮಾಡಿದೆ. ಪ್ರಾಥವಿಕ ವರದಿಗಳ ಪ್ರಕಾರ, ಸ್ಫೋಟದ ಪರಿಣಾಮವಾಗಿ ಹಲವಾರು ಜನರು ಗಾಯಗೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನಿ ಸೇನೆಯ ಪ್ರಧಾನ ಕಛೇರಿಯಲ್ಲಿ ಭಾರಿ ಸ್ಫೋಟದಿಂದಾಗಿ 20 ಪಾಕಿಸ್ತಾನಿ ಸೈನಿಕರು ಸುಟ್ಟು ಬೂದಿಯಾಗಿದ್ದಾರೆ ಎಂದು ಸಿರಿಯಾದ ಡಮಾಸ್ಕಸ್‌ನ ಗ್ರಾಮೀಣ ಪ್ರದೇಶವಾದ ಡೌಮಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟ ಸಲ್ಮಾನ್ ಖಾನ್ ರಶ್ಮಿಕಾಗೆ ವೇದಿಕೆ ಮೇಲೆಯೇ ಕಿಸ್ ಮಾಡಿದ್ರಾ? ಇಲ್ಲಿದೆ ವೈರಲ್ ವಿಡಿಯೋದ ಅಸಲೀ ಕಥೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights