FACT CHECK | ‘ಮೋದಿ ನಿಜ ಹೇಳುವವರೆಗೂ ಸಾಲ ಕೊಡುವುದಿಲ್ಲ’ ಎಂದು ಟೀ ಅಂಗಡಿಯಲ್ಲಿ ಬೋರ್ಡ್ ಹಾಕಲಾಗಿದೆಯೇ?

ಟೀ ಅಂಗಡಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಟೀ ಅಂಗಡಿ ಎಂದಾಕ್ಷಣ ಈ ಟೀ ಅಂಗಡಿಯಲ್ಲಿ ಯಾವುದಾದರೂ ಉಚಿತ ಕೊಡುಗೆಗಳನ್ನು ನೀಡುತ್ತಿದೆ ಎಂದು ನೀವು ಭಾವಿಸುತ್ತೀರಾ? ಅಂತಹದ್ದೇನೂ ಇಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ. “ದಯವಿಟ್ಟು ಸಾಲ ಕೇಳಬೇಡಿ” ಎಂದು ಅಂಗಡಿಯಲ್ಲಿ ಅವರು ಹಾಕಿದ್ದ ಸಣ್ಣ ಪೋಸ್ಟರ್. ಅಯ್ಯೋ ಅನೇಕ ಅಂಗಡಿಗಳಲ್ಲಿ ಈ ರೀತಿಯ ಪೋಸ್ಟರ್‌ಗಳನ್ನು ಸಹಜವಾಗಿ ಹಾಕುತ್ತಾರೆ. ಆದರೆ ಈ ಅಂಗಡಿಯ ಫೋಟೋ ವೈರಲ್ ಆಗಲು ಕಾರಣವೇನು? ಮುಂದೆ ಓದಿ..,

‘ಮೋದಿ ಜೀ ನಿಜ ಹೇಳುವವರೆಗೂ ಸಾಲ ಕೊಡುವುದಿಲ್ಲ ಎಂಬ ಪೋಸ್ಟರ್‌ ಇರುವ ಟೀ ಸ್ಟಾಲ್‌ನ ಪೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

@BappiLaher08001 ಹೆಸರಿನ ಬಳಕೆದಾರರು X ನಲ್ಲಿ ಈ ಅಂಗಡಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅಂಗಡಿಯ ಹೊರಗೆ ಒಂದು ಫಲಕವಿದೆ ‘ಮೋದಿ ಜಿ ಸತ್ಯವನ್ನು ಮಾತನಾಡುವವರೆಗೆ, ಸಾಲ ನೀಡುವುದಿಲ್ಲ. ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 4, 2019 ರಂದು X ನಲ್ಲಿ ಪ್ರಿಯಾಂಕಾ ಎಂಬ ಸೋಶಿಯಲ್ ಮೀಡಿಯಾ ಬಳಕೆದಾರರು ಅದೇ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಆಧಾರದ ಮೇಲೆ, ವೈರಲ್ ಆಗುತ್ತಿರುವ ಫೋಟೋ ಹಳೆಯದು ಎಂದು ತೀರ್ಮಾನಿಸಬಹುದು.

ಈ ಫೋಟೋವನ್ನು 2018 ರಲ್ಲಿ ನಗೀನಾ, ಜಿಲ್ಲೆ-ಬಿಜ್ನೋರ್ – ಯುಪಿ ಎಂಬ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಈ ಫೋಟೋದಲ್ಲಿರುವ ಟೀ ಅಂಗಡಿ ಫೋಟೋ ವೈರಲ್ ಆಗುತ್ತಿರುವ ಟೀ ಅಂಗಡಿ ಫೋಟೋದಂತೆಯೇ ಇದೆ. ಆದರೆ ಅಂಗಡಿಯ ಮುಂದೆ ಅಂಟಿಸಿದ್ದ ಪೋಸ್ಟ್‌ರ್‌ನ ಬರಹ ಮಾತ್ರ ಬೇರೆಯದಾಗಿತ್ತು. ” ನಾನೇ ಸಾಲ ಮಾಡಿದ್ದೇನೆ, ದಯವಿಟ್ಟು ಸಾಲ ಕೇಳಬೇಡಿ.”  ಎಂದು ಬರೆದಿರುವುದನ್ನು ನೋಡಬಹುದು.

ಈ ಫೋಟೋವನ್ನು ಸೆಪ್ಟೆಂಬರ್ 8, 2018 ರಂದು ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಹಂಚಿಕೊಂಡಿದ್ದಾರೆ. ಈ ಸಣ್ಣ ಉದ್ಯಮಿಗಳು ಎಂಬಿಎ ಪದವೀಧರರನ್ನು ನಾಚಿಕೆಪಡಿಸುವಂತಹ ಸೃಜನಶೀಲತೆಯನ್ನು ತೋರಿಸುತ್ತಿದ್ದಾರೆ ಎಂದು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, “ಮೋದಿ ಸತ್ಯ ಹೇಳುವವರೆಗೂ ಸಾಲ ನೀಡುವುದಿಲ್ಲ” ಎಂದು ಟೀ ಅಂಗಡಿಯೊಂದರಲ್ಲಿ ಹಾಕಲಾಗಿದೆ ಎಂದು ಎಡಿಟ್‌ ಮಾಡಿದ ಪೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಟೀ ಸ್ಟಾಲ್‌ವೊಂದರಲ್ಲಿ ಹಾಕಲಾಗಿದ್ದ ಫಲಕದಲ್ಲಿ ‘ನಾನೇ ಸಾಲ ಮಾಡಿಕೊಂಡಿದ್ದೇನೆ ನನ್ನನ್ನು ಸಾಲ ಕೇಳಬೇಡಿ’ ಎಂದು ಬರೆಯಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿ ಕೊಂದಿದ್ದು ಹಿಂದೂ ಯುವತಿಯನ್ನಲ್ಲ ಮತ್ತ್ಯಾರನ್ನ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights