FACT CHECK | ಚಲಿಸುವ ರೈಲಿಗೆ ಸಿಕ್ಕಿಹಾಕಿಕೊಳ್ಳುವ ನಾಯಿಯೊಂದು ಸಾವನಪ್ಪಿದೆಯಾ ? ಈ ಸ್ಟೋರಿ ಓದಿ

ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ನಾಯಿಯೊಂದನ್ನು ಹಿಡಿದುಕೊಂಡು  ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋದಾಗ ತನ್ನ ನಾಯಿ ರೈಲಿನಡಿಗೆ ಬೀಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಾಲೀಕನ ನಿರ್ಲಕ್ಷದಿಂದ ನಾಯಿ ಸಾವನಪ್ಪಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಏಪ್ರಿಲ್ 2, 2025 ರಂದು ಫೇಸ್​ಬುಕ್ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡು, ‘‘ಮನುಷ್ಯನ ಅವಸರಕ್ಕೆ ಅಮಾಯಕ ನಾಯಿ ಬಲಿ’’ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನ ವಿಡಿಯೋವನ್ನು ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು   Archive. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ‘Dog Train Died’ ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್​ನಲ್ಲಿ ಸರ್ಚ್ ಮಾಡಿದಾಗ, ಈ ಘಟನೆಗೆ ಸಂಬಂಧಿಸಿದ ಅನೇಕ ವರದಿಗಳು ಲಭ್ಯವಾಗಿವೆ.

ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ನ್ಯೂಸ್ 18 ಏಪ್ರಿಲ್ 2, 2025 ರಂದು ಪ್ರಕಟಿಸಿದ ಸುದ್ದಿಯ ಪ್ರಕಾರ, ಈ ಘಟನೆಯು ಝಾನ್ಸಿಯ ವೀರಾಂಗಣ ಲಕ್ಷ್ಮಿಬಾಯಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3 ರಲ್ಲಿ ನಡೆದಿದೆ. ಇದು ಮುಂಬೈ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಗಾಡಿಯದ್ದಾಗಿದೆ.

ಮಹಿಳಾ ಪ್ರಯಾಣಿಕ ಉಪಾಸನಾ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದರು. ಅವರು ತನ್ನ ನಾಯಿಗೂ ಟಿಕೆಟ್ ಬುಕ್ ಮಾಡಿ ಅದರೊಂದಿಗೆ ಪ್ರಯಾಣಿಸುತ್ತಿದ್ದರು. ರೈಲು ಹಜರತ್ ನಿಜಾಮುದ್ದೀನ್ ನಿಂದ ಹೊರಟು ಝಾನ್ಸಿ ತಲುಪಿದಾಗ ನಾಯಿ ರೈಲಿನಿಂದ ಹೊರಗೆ ಹೋಯಿತು. ಆಗ ರೈಲು ಚಲಿಸಲು ಪ್ರಾರಂಭಿಸಿದಾಗ ನಾಯಿಯನ್ನು ರೈಲಿನ ಒಳಗೆ ಹಾಕುವ ಪ್ರಯತ್ನ ಮಾಡಲಾಯಿತು. ಈ ಸಮಯದಲ್ಲಿ ನಾಯಿಯ ಕುತ್ತಿಗೆಯಿಂದ ಬೆಲ್ಟ್ ಕಳಚಿದೆ. ಆಗ ನಾಯಿ ರೈಲಿನ ಅಡಿಗೆ ಬಿದ್ದಿದೆ. ಅದೃಷ್ಟವಶಾತ್, ಕೂಡಲೇ ಸರಪಳಿ ಎಳೆದು ರೈಲು ಸಕಾಲಕ್ಕೆ ನಿಂತಿತು. ಆರ್‌ಪಿಎಫ್-ರೈಲ್ವೆ ಸ್ಟಾಪ್ ಸಹಾಯದಿಂದ ನಾಯಿಯ ಜೀವ ಉಳಿಸಲಾಯಿತು’’ ಎಂಬ ಮಾಹಿತಿ ಇದರಲ್ಲಿದೆ.

ಏಪ್ರಿಲ್ 3, 2025 ರಂದು ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಾಯಿ ಅಪಘಾತದಲ್ಲಿ ಸಾಯಲಿಲ್ಲ. ಆರ್‌ಪಿಎಫ್-ರೈಲ್ವೆ ಸಿಬ್ಬಂದಿಯ ಸಹಾಯದಿಂದ ಅದರ ಜೀವ ಉಳಿಸಲಾಯಿತು ಎಂದು ಬರೆಯಲಾಗಿದೆ. ಹಾಗೆಯೆ ನಾಯಿ ಈ ಘಟನೆಯಿಂದ ಬದುಕುಳಿದಿದ್ದು, ತನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿದೆ ಎಂದು ಝಾನ್ಸಿ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿಕೆಯನ್ನು ಇಂಡಿಯನ್ಸ್ ಎಕ್ಸ್​ಪ್ರೆಸ್ ಬರೆದುಕೊಂಡಿದೆ.

ಈ ಘಟನೆಯಲ್ಲಿ ನಾಯಿ ಸಾವನ್ನಪ್ಪಿಲ್ಲ, ರೈಲನ್ನು ಸಮಯಕ್ಕೆ ಸರಿಯಾಗಿ ನಿಲ್ಲಿಸಲಾಯಿತು ಮತ್ತು ಆರ್‌ಪಿಎಫ್ ಸಹಾಯದಿಂದ ನಾಯಿಯನ್ನು ರಕ್ಷಿಸಲಾಯಿತು. ಆದರೆ, ನಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರೈಲು ಅಪಘಾತದಲ್ಲಿ ನಾಯಿ ಸಾವನ್ನಪ್ಪಿದೆ ಎಂಬ ಹೇಳಿಕೆ ಸುಳ್ಳು ಎಂದು ನ್ಯೂಸ್‌ ಮೀಟರ್ ದೃಢಪಡಿಸಿದೆ. ಈ ಘಟನೆ ನಡೆದಿರುವುದು ಝಾನ್ಸಿ ರೈಲು ನಿಲ್ದಾಣದಲ್ಲಿ. ಈ ಅಪಘಾತದಲ್ಲಿ ನಾಯಿ ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | BJP ಸೇರಿದ್ರಾ ಮಹೇಂದ್ರ ಸಿಂಗ್ ಧೋನಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights