FACT CHECK | ಉತ್ತರ ಪ್ರದೇಶದ ಬಲರಾಂಪುರದಲ್ಲಿ ಬ್ರಾಹ್ಮಣ ಎಂಬ ಕಾರಣಕ್ಕೆ ಅರ್ಚಕ ಶತ್ರುಘ್ನ ದ್ವಿವೇದಿಯನ್ನು ಹತ್ಯೆ ಮಾಡಲಾಗಿದೆಯೇ?
ಉತ್ತರ ಪ್ರದೇಶದ ಬಲರಾಂಪುರದಲ್ಲಿ ರಾಧಾ ಕೃಷ್ಣ ದೇವಸ್ಥಾನದ ಅರ್ಚಕರ ಹತ್ಯೆಯ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕೊಲೆಯಾದ ಅರ್ಚಕನನ್ನು ಶತ್ರುಘ್ನ ದ್ವಿವೇದಿ ಎಂದು ಗುರುತಿಸಲಾಗಿದೆ. ಅವರ ಶವವನ್ನು ಪೊಲೀಸರು ಕಾಡಿನಲ್ಲಿ ಪತ್ತೆ ಮಾಡಿದ್ದಾರೆ. ಕೊಲೆಯ ಈ ಸುದ್ದಿಯನ್ನು ಬ್ರಾಹ್ಮಣ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು, ಅರ್ಚಕರನ್ನು ಅವರ ಜಾತಿಯ ಕಾರಣದಿಂದಾಗಿ ಕೊಲ್ಲಲಾಗಿದೆ ಎಂಬ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
उत्तर प्रदेश बलरामपुर में एक और ब्राह्मण पुजारी सत्रोहन द्विवेदी की गोली मारकर हत्या कर दी गई।
प्रश्न कितने ब्राह्मणों को न्याय मिला ?
कितने पीड़ित परिवारों को लाइसेंस मिला ?
हर ब्राहमण अपने शोषण की प्रतीक्षा में हिन्दुत्व का झूठा वजन ढो रहा है।
जबकि ब्राहमण खत्म हिन्दू खत्म pic.twitter.com/iDqJonwVda— PankajDhavraiyya RspChief (@ChiefRspDhavrai) April 26, 2025
ಪಂಕಜ್ ಧವ್ರೈಯ್ಯ ಎಂಬ ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, “ಉತ್ತರ ಪ್ರದೇಶದ ಬಲರಾಂಪುರದಲ್ಲಿ, ಮತ್ತೊಬ್ಬ ಬ್ರಾಹ್ಮಣ ಅರ್ಚಕ ಶತ್ರುಘ್ನ ದ್ವಿವೇದಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪ್ರಶ್ನೆ: ಎಷ್ಟು ಬ್ರಾಹ್ಮಣರಿಗೆ ನ್ಯಾಯ ಸಿಕ್ಕಿದೆ? ಎಷ್ಟು ಬಲಿಪಶು ಕುಟುಂಬಗಳಿಗೆ ಬಂದೂಕು ಪರವಾನಗಿ ನೀಡಲಾಗಿದೆ? ಪ್ರತಿಯೊಬ್ಬ ಬ್ರಾಹ್ಮಣನು ಹಿಂದುತ್ವದ ಸುಳ್ಳು ಹೊರೆಯನ್ನು ಹೊತ್ತುಕೊಂಡು ತಮ್ಮದೇ ಆದ ಶೋಷಣೆಗಾಗಿ ಕಾಯುತ್ತಿದ್ದಾನೆ. ಬ್ರಾಹ್ಮಣರು ಇಲ್ಲವಾದಾಗ, ಹಿಂದೂ ಧರ್ಮ ಕೊನೆಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.
UP: नहीं थम रही ब्राह्मण हत्या, राधा-कृष्ण मंदिर के पुजारी की गोली मारकर हत्या, सपा ने CM योगी से माँगा जवाब https://t.co/sZ3TJaE2dC
— Neo Politico हिंदी (@NP_Hindi) April 27, 2025
ನಿಯೋ ಪಾಲಿಟಿಕ್ಸ್, ಎಂಬ ಎಕ್ಸ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು, “ಬ್ರಾಹ್ಮಣ ಹತ್ಯೆಗಳು ನಿರಂತರವಾಗಿ ಮುಂದುವರೆದಿವೆ: ರಾಧಾ-ಕೃಷ್ಣ ದೇವಸ್ಥಾನದ ಅರ್ಚಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ, ಸಿಎಂ ಯೋಗಿಯಿಂದ ಉತ್ತರಗಳನ್ನು ನೀಡಬೇಕಿದೆ ಎಂದು ಪ್ರತಿಪಾದಿಸಿದರು ಪೋಸ್ಟ್ ಮಾಡಿದ್ದಾರೆ.
ಅನುಜ್ ಅಗ್ನಿಹೋತ್ರಿ ಎಂಬ ಮತ್ತೊಬ್ಬ ಎಕ್ಸ್ ಬಳಕೆದಾರರು “ಮತ್ತೊಬ್ಬ ಬ್ರಾಹ್ಮಣ ಅರ್ಚಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಶತ್ರುಘ್ನ ದ್ವಿವೇದಿಯವರ ಶವವನ್ನು ಉತ್ತರ ಪ್ರದೇಶದ ಬಲರಾಂಪುರ ಕಾಡಿನಿಂದ ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ, ಇಂತಹ ಸಾವಿರಾರು ಘಟನೆಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರನ್ನು ಗುರಿಯಾಗಿಸಿಕೊಂಡು ಹತ್ಯೆಗಳು ನಡೆಯುತ್ತಿವೆ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಪೋಸ್ಟ್‌ಗಳಲ್ಲಿ ಪ್ರತಿಪಾದಿಸಿದಂತೆ ಬ್ರಾಹ್ಮಣ ಎಂಬ ಕಾರಣಕ್ಕೆ ಈ ಹತ್ಯೆ ನಡೆದಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 27, 2025ರಂದು ಅಮರ್ ಉಜಲಾ ಪ್ರಕಟಿಸಿದ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ, ಪ್ರಕರಣವು ಯುವತಿಯನ್ನು ಕರೆದುಕೊಂಡು ಪರಾರಿಯಾಗಿದ್ದ ಹಿನ್ನಲೆಯನ್ನ ಹೊಂದಿದ್ದು, ಮತ್ತು ಶತ್ರುಘ್ನನನ್ನು ಕೊಂದ ಆರೋಪಿಗಳು ಸಹ ಬ್ರಾಹ್ಮಣರು ಎಂದು ಉಲ್ಲೇಖಿಸಲಾಗಿದೆ.

ಘಟನೆಯ ವಿವರ :
ಶತ್ರುಘ್ನನ ಸೋದರಸಂಬಂಧಿ ವಿವೇಕ್ ದ್ವಿವೇದಿ ಏಪ್ರಿಲ್ 21 ರಂದು ಬಲುಹಾದಿಂದ ಸಜನ್ ತಿವಾರಿ ಸಹೋದರಿಯೊಂದಿಗೆ ಓಡಿಹೋಗಿದ್ದಾರೆ. ಇದು ಸಾಜನ್ ಮತ್ತು ಅವನ ಸಹೋದರ ರಾಘವೇಂದ್ರ ತಿವಾರಿ (ಅಲಿಯಾಸ್ ದದ್ದೂ) ಯ ಕೋಪಕ್ಕೆ ಕಾರಣವಾಗಿದೆ. ಇಬ್ಬರು ಸೇರಿ ವಿವೇಕ್ ದ್ವಿವೇದಿಯನ್ನು ಕೊಲ್ಲಲು ಯೋಜಿಸಿ, ಆತನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ವಿವೇಕ್ ಸಿಗದಿದ್ದಾಗ, ಅವರು ಏಪ್ರಿಲ್ 23 ರಂದು ಸೋದರಸಂಬಂಧಿ ಶತ್ರುಘ್ನ ದ್ವಿವೇದಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅವನ ಎದೆಗೆ ಗುಂಡು ಹಾರಿಸಿ ಕೊಂದಿದ್ದಾರೆ. ಶತ್ರುಘ್ನನನ್ನು ಹುಡುಕಿದಾಗ, ಮರುದಿನ ಹೊಲದಲ್ಲಿ ಅವನ ಶವ ಪತ್ತೆಯಾಗಿದ್ದಾನೆ.
ಈ ಕೊಲೆಯಲ್ಲಿ, ಸಾಜನ್ ಮತ್ತು ರಾಘವೇಂದ್ರ ಜೊತೆಗೆ, ಮೋಹಿತ್ ವರ್ಮಾ (ಅಲಿಯಾಸ್ ಕಾಕಾ) ಕೂಡ ಭಾಗಿಯಾಗಿದ್ದರು. ಆರೋಪಿಗಳಿಗಾಗಿ ಹುಡುಕಾಟ ನಡೆಸಿದಾಗ, ನಹರ್‌ಬಲಗಂಜ್ ಮತ್ತು ತುಳಸಿ ಪುರ್ ಅನ್ನು ಸಂಪರ್ಕಿಸುವ ಕಾಲುವೆ ದಂಡೆಯ ಬಳಿ ರಾಘವೇಂದ್ರ ಮತ್ತು ಮೋಹಿತ್ ಅವರನ್ನು ಬಂಧಿಸಲಾಗಿದೆ. ಕೊಲೆಗೆ ಬಳಸಲಾದ 315 ಬೋರ್ ಪಿಸ್ತೂಲ್, ಜೀವಂತ ಗುಂಡುಗಳು, ಎರಡು ಮೋಟಾರ್ ಸೈಕಲ್‌ಗಳು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಜನ್ ತಿವಾರಿ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಆತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಲರಾಂಪುರದ ರಾಧಾ ಕೃಷ್ಣ ದೇವಸ್ಥಾನದ ಬ್ರಾಹ್ಮಣ ಅರ್ಚಕ ಶತ್ರುಘ್ನ ದ್ವಿವೇದಿ ಹತ್ಯೆಯಲ್ಲಿ ಯಾವುದೇ ಜಾತಿ ಸಂಬಂಧಿತ ಕೋನವಿಲ್ಲ. ಅರ್ಚಕನ ಕೊಲೆಯ ಆರೋಪಿಗಳಾದ ಸಾಜನ್, ರಾಘವೇಂದ್ರ ಮತ್ತು ಮೋಹಿತ್ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಶತ್ರುಘ್ನನ ಸೋದರಸಂಬಂಧಿ ವಿವೇಕ್ ದ್ವಿವೇದಿ, ಸಜನ್‌ನ ಸಹೋದರಿಯೊಂದಿಗೆ ಓಡಿಹೋಗಿದ್ದರಿಂದ ಈತನನ್ನು ಕೊಲ್ಲಲಾಗಿದೆ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ :

